
ಬೆಂಗಳೂರು(ನ. 30): ಮುಂದಿನ ವರ್ಷಕ್ಕೆ ರಾಜ್ಯ ಸರಕಾರ 22 ಸಾರ್ವತ್ರಿಕ ರಜೆಗಳ ಪಟ್ಟಿ ಬಿಡುಗಡೆ ಮಾಡಿದೆ. ಎಲ್ಲಾ ಸರಕಾರಿ ಕಛೇರಿ, ಶಾಲಾ-ಕಾಲೇಜುಗಳಿಗೆ ಈ ದಿನಗಳಂದು ರಜೆ ಇರಲಿದೆ. ಕಳೆದ ವರ್ಷ ರಜೆ ಘೋಷಿಸಲಾಗಿದ್ದ ಮಹಾವೀರ್ ಜಯಂತಿ ಮತ್ತು ಮೊಹರ್ರಂ ಕೊನೆಯ ದಿನದ ಹಬ್ಬಗಳು ಈ ಬಾರಿ ಭಾನುವಾರ ಇರುವುದರಿಂದ ಅವುಗಳನ್ನು ಪಟ್ಟಿಯಿಂದ ಕೈಬಿಡಲಾಗಿದೆ. ಪಟ್ಟಿಯಲ್ಲಿರುವ ಮುಸ್ಲಿಮರ ಹಬ್ಬವು ನಿಗದಿತ ದಿನದಂದು ಇಲ್ಲದಿದ್ದಲ್ಲಿ ಅದನ್ನು ಆಚರಿಸುವ ದಿನದಂದೇ ರಜೆಯನ್ನು ತೆಗೆದುಕೊಳ್ಳುವ ಅವಕಾಶ ನೀಡಲಾಗಿದೆ.
ಇನ್ನು, ಕೊಡಗಿನ ವಿಶೇಷ ಹಬ್ಬಗಳಾದ ತುಲಾ ಸಂಕ್ರಮಣ (ಅ.17) ಮತ್ತು ಹುತ್ತರಿ (ಡಿ. 4)ಗೆ ಅಲ್ಲಿನವರಿಗೆ ರಜೆ ಘೋಷಿಸಲಾಗಿದೆ.
ಸಾರ್ವತ್ರಿಕ ರಜೆಯ ಜೊತೆಗೆ ರಾಜ್ಯ ಸರಕಾರದ ನೌಕರರಿಗೆ 17 ನಿರ್ಬಂಧಿತ ರಜೆಗಳನ್ನೂ ನೀಡಲಾಗಿದೆ. ನೌಕರರು ತಮ್ಮ ಹಿರಿಯ ಅಧಿಕಾರಿಯ ಒಪ್ಪಿಗೆ ಮೇರೆಗೆ ಸತತ ಎರಡು ದಿನಗಳಷ್ಟೇ ಈ ನಿರ್ಬಂಧಿತ ರಜೆಗಳನ್ನು ಬಳಸಲು ಅವಕಾಶವಿದೆ.
2017ರ ಸಾರ್ವತ್ರಿಕ ರಜೆಗಳ ಪಟ್ಟಿ:
1) ಜನವರಿ 14, ಶನಿವಾರ - ಸಂಕ್ರಾಂತಿ
2) ಜನವರಿ 26, ಗುರುವಾರ - ಗಣರಾಜ್ಯೋತ್ಸವ
3) ಫೆಬ್ರುವರಿ 24, ಶುಕ್ರವಾರ - ಮಹಾಶಿವರಾತ್ರಿ
4) ಮಾರ್ಚ್ 29, ಬುಧವಾರ - ಚಾಂದ್ರಮಾನ ಯುಗಾದಿ
5) ಏಪ್ರಿಲ್ 14, ಶುಕ್ರವಾರ - ಗುಡ್ ಫ್ರೈಡೆ, ಅಂಬೇಡ್ಕರ್ ಜಯಂತಿ
6) ಏಪ್ರಿಲ್ 29, ಶನಿವಾರ - ಬಸವ ಜಯಂತಿ
7) ಮೇ 1, ಸೋಮವಾರ - ಮೇ ಡೇ(ಕಾರ್ಮಿಕರ ದಿನ)
8) ಜೂನ್ 25, ಸೋಮವಾರ - ರಂಜಾನ್
9) ಆಗಸ್ಟ್ 15, ಮಂಗಳವಾರ - ಸ್ವಾತಂತ್ರ್ಯ ದಿನಾಚರಣೆ
10) ಆಗಸ್ಟ್ 25, ಶುಕ್ರವಾರ - ಗಣೇಶ ಹಬ್ಬ
11) ಸೆಪ್ಟಂಬರ್ 2, ಶನಿವಾರ - ಬಕ್ರೀದ್
12) ಸೆಪ್ಟಂಬರ್ 19, ಮಂಗಳವಾರ - ಮಹಾಲಯ ಅಮಾವಾಸ್ಯ
13) ಸೆಪ್ಟೆಂಬರ್ 29, ಶುಕ್ರವಾರ - ಮಹಾನವಮಿ, ಆಯುಧಪೂಜೆ
14) ಸೆಪ್ಟಂಬರ್ 30, ಶನಿವಾರ - ವಿಜಯದಶಮಿ
15) ಅಕ್ಟೋಬರ್ 2, ಸೋಮವಾರ - ಗಾಂಧಿ ಜಯಂತಿ
16) ಅಕ್ಟೋಬರ್ 5, ಗುರುವಾರ - ವಾಲ್ಮೀಕಿ ಜಯಂತಿ
17) ಅಕ್ಟೋಬರ್ 18, ಬುಧವಾರ - ನರಕ ಚತುರ್ಥಿ
18) ಅಕ್ಟೋಬರ್ 20, ಶುಕ್ರವಾರ - ಬಲಿಪಾಡ್ಯಮಿ, ದೀಪಾವಳಿ
19) ನವೆಂಬರ್ 1, ಬುಧವಾರ - ಕನ್ನಡ ರಾಜ್ಯೋತ್ಸವ
20) ನವೆಂಬರ್ 6, ಸೋಮವಾರ - ಕನಕದಾಸ ಜಯಂತಿ
21) ಡಿಸೆಂಬರ್ 1, ಶುಕ್ರವಾರ - ಈದ್ ಮಿಲಾದ್
22) ಡಿಸೆಂಬರ್ 25, ಸೋಮವಾರ - ಕ್ರಿಸ್ಮಸ್
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.