
ನವದೆಹಲಿ(ಎ.23): ಭಾರತೀಯ ಜನತಾ ಪಾರ್ಟಿ ಉತ್ತರ ಪ್ರದೇಶದ ಚುನಾವಣಾ ಪ್ರಚಾರದಲ್ಲಿ ತಲಾಖ್ ವಿಚಾರವಾಗಿ ಗಟ್ಟಿಯಾಗಿ ಧ್ವನಿ ಎತ್ತಿತ್ತು. ಇದಾದ ಬಳಿಕ ಗದ್ದುಗೆ ಹಿಡಿದ ಯೋಗಿ ಆದಿತ್ಯನಾಥ್ ನೇತೃತ್ವದ ಸರ್ಕಾರ ತ್ರಿವಳಿ ತಲಾಖ್ ಪದ್ಧತಿಯನ್ನು ರದ್ದುಗೊಳಿಸುವ ಕುರಿತಾಗಿ ಮಾತೆತ್ತಿದೆ. ಈ ಕುರಿತಾಗಿ ನಿರಂತರವಾಗಿ ಪ್ರಸ್ತಾಪಿಸುತ್ತಿರುವ ಸಿಎಂ ಯೋಗಿ ಮುಸ್ಲಿಂ ಮಹಿಳೆಯರ ಹಕ್ಕಿಗಾಗಿ ತ್ರಿವಳಿ ತಲಾಖ್ ರದ್ದುಗೊಳಿಸಲು ತಪ್ಪುವುದಿಲ್ಲ ಎನ್ನುತ್ತಿದ್ದಾರೆ. ಇದೇ ವಿಚಾರವನ್ನು ಗಮನದಲ್ಲಿರಿಸಿಕೊಂಡು ಮಾಡಿದ ಪ್ರ್ಯಾಂಕ್ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲಾತಾಣಗಳಲ್ಲಿ ಭಾರೀ ಸದ್ದು ಮಾಡುತ್ತಿದೆ. ಪ್ರಸಿದ್ಧ ಗಾಯಕ ಅಭಿಜಿತ್ ಭಟ್ಟಾಚಾರ್ಯರವರೂ ತಮ್ಮ ಟ್ವಿಟರ್'ನಲ್ಲಿ ಈ ವಿಡಿಯೋವನ್ನು ಶೇರ್ ಮಾಡಿದ್ದಾರೆ.
ಈ ವಿಡಿಯೋ ಆರಂಭವಾಗುವಾಗ ವ್ಯಕ್ತಿಯೊಬ್ಬ ನಮಾಜ್ ಮಾಡುತ್ತಿರುತ್ತಾನೆ. ಅಷ್ಟರಲ್ಲಿ ಪತ್ನಿ ಮನೆಗೆ ಆಗಮಿಸುತ್ತಾಳೆ. ಆಕೆ ಬುರ್ಖಾ ಧರಿಸಿದ್ದಳಾದರೂ ಮುಖ ಮುಚ್ಚಿಕೊಂಡಿರುವುದಿಲ್ಲ. ಪತಿ ಕಾರಣ ಕೇಳಿದಾಗ 'ಹೊರಗೆ ತುಂಬಾ ಬಿಸಿಲಿದೆ' ಎಂದು ಪತ್ನಿ ತಿಳಿಸುತ್ತಾಳೆ.
ಇದರಿಂದ ಕುಪಿತಗೊಂಡ ಪತಿರಾಯ ಮೂರು ಬಾರಿ 'ತಲಾಖ್, ತಲಾಖ್, ತಲಾಖ್' ಎನ್ನುತ್ತಾನೆ. ಅಷ್ಟರಲ್ಲಿ ಪತ್ನಿ ಯಾವುದೇ ಚಿಂತೆ ಮಾಡದೇ ತನ್ನ ಮೊಬೈಲ್ ತೆಗೆದು 'ಯೋಗಿ' ಎಂದು ಮೂರು ಬಾರಿ ಕೂಗುತ್ತಾಳೆ. ಅವಳ ಪ್ರತಿಕ್ರಿಯೆ ಕಂಡ ಪತಿ ಯಾವುದೇ ಆಪತ್ತು ಬೇಡ ಎಂದು ತಾನು ಮಾಡಿದ್ದು ತಮಾಷೆ ಎಂದು ಹಲ್ಲು ಕಿರಿಯುತ್ತಾನೆ.
ಈ ವಿಡಿಯೋಗೆ ುತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಅಲ್ಲದೇ ಮೂರು ಬಾರಿ ತಲಾಖ್ ಎನ್ನುವ ಪತಿ ವಿರುದ್ಧ ಧ್ವನಿ ಎರತ್ತುವಂತೆ ಮುಸ್ಲಿಂ ಮಹಿಳೆಯರಿಗೆ ಇದು ಸಂದೇಶವನ್ನೂ ನೀಡಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.