
ನವದೆಹಲಿ (ಸೆ. 23): ಭಾರತದಲ್ಲಿ ತಲಾ ಮದ್ಯಪಾನ ಪ್ರಮಾಣವು ಕಳೆದ 11 ವರ್ಷಗಳಲ್ಲಿ 5.7 ಲೀಟರ್‌ಗೆ ಏರಿಕೆಯಾಗಿದೆ ಎಂದು ವಿಶ್ವಸಂಸ್ಥೆಯ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ವರದಿಯಿಂದ ತಿಳಿದುಬಂದಿದೆ
ಈ ಪ್ರಕಾರ ದೇಶದಲ್ಲಿ 2005 ರಲ್ಲಿ ತಲಾ ಮದ್ಯಪಾನ ಪ್ರಮಾಣವು 2.4 ಲೀಟರ್ ಇತ್ತು. ಇದು 2016 ರಲ್ಲಿ 5.7 ಲೀ.ಗೆ ಏರಿದೆ. ಇದರಲ್ಲಿ ಪುರುಷರ ತಲಾ ಮದ್ಯಪಾನ ಪ್ರಮಾಣ 4.2 ಲೀ. ಮತ್ತು ಮಹಿಳೆಯರ ತಲಾ ಮದ್ಯ ಸೇವನೆ ಪ್ರಮಾಣ 1.5 ಲೀ.ನಷ್ಟಿದೆ.
ಅಪಘಾತ: ದೇಶದಲ್ಲಿ ನಡೆಯುವ ಮೂರು ರಸ್ತೆ ಅಪಘಾತಗಳಲ್ಲಿ ಒಂದು ಅಪಘಾತವು ಮದ್ಯಪಾನ ಸೇವನೆಯಿಂದಾಗಿಯೇ ಸಂಭವಿಸುವಂಥದ್ದಾಗಿದೆ. ಒಟ್ಟು 1 ಲಕ್ಷ ಜನಸಂಖ್ಯೆ ಪೈಕಿ 51.1ರಷ್ಟು ಪುರುಷರು ಹಾಗೂ ಹಾಗೂ 27.1 ಮಹಿಳೆಯರು ಯಕೃತ್ತು ಸಮಸ್ಯೆಯಿಂದ ಬಳಲುತ್ತಿದ್ದಾರೆ ಇವರಲ್ಲಿ ಶೇ.70 ರಷ್ಟು ಮಂದಿ ಕುಡಿತದ ದಾಸರೇ ಆಗಿದ್ದಾರೆ.
30 ಲಕ್ಷ ಮಂದಿ ಬಲಿ: ಮದ್ಯಪಾನ ಸೇವನೆಯಿಂದಲೇ 2016 ರಲ್ಲಿ ವಿಶ್ವಾದ್ಯಂತ 30 ಲಕ್ಷಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ ಎಂಬ ಆಘಾತಕಾರಿ ಮಾಹಿತಿ ಕೂಡ ಡಬ್ಲ್ಯುಎಚ್‌ನಿಂದ ಬಯಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.