ಸಿಡಿಲು ಬಡಿತಕ್ಕೆ ಮರದ ನೆರಳಲ್ಲಿ ನಿಂತ ರೈತ ಬಲಿ..!

First Published Jun 5, 2018, 8:02 PM IST
Highlights

ಮಳೆಯಿಂದ ಆಶ್ರಯ ಪಡೆಯಲು ಮರದ ಕೆಳಗೆ ನಿಂತಿದ್ದಾಗ 46 ವರ್ಷದ ಹುಚ್ಚಪ್ಪ ಎಂಬಾತನಿಗೆ ಸಿಡಿದು ಬಡಿದು ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಇದರ ಜತೆಗೆ ಆತ ಸಾಕಿದ್ದ ಎತ್ತು ಕೂಡಾ ಮೃತಪಟ್ಟಿದೆ.

ಅರಸೀಕೆರೆ[ಜೂ.05]: ರಾಜ್ಯದ ಹಲವೆಡೆ ಮಳೆ ಅವಾಂತರವನ್ನು ಸೃಷ್ಟಿಸುತ್ತಿದ್ದು ಈಗಾಗಲೇ ಸಾಕಷ್ಟು ಜೀವಹಾನಿ ಹಾಗೂ ಆಸ್ತಿಪಾಸ್ತಿ ಸಂಭವಿಸಿದೆ. ಇದೀಗ ಸಿಡಿಲು ಬಡಿದು ರೈತ ಹಾಗೂ ಆತ ಸಾಕಿದ್ದ ಎತ್ತು ಮೃತಪಟ್ಟಿರುವ ಧಾರುಣ ಘಟನೆ ಅರಸೀಕೆರೆ ತಾಲೂಕಿನ ತಳಲೂರು ಗ್ರಾಮದಲ್ಲಿ ನಡೆದಿದೆ.
ಮಳೆಯಿಂದ ಆಶ್ರಯ ಪಡೆಯಲು ಮರದ ಕೆಳಗೆ ನಿಂತಿದ್ದಾಗ 46 ವರ್ಷದ ಹುಚ್ಚಪ್ಪ ಎಂಬಾತನಿಗೆ ಸಿಡಿದು ಬಡಿದು ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಇದರ ಜತೆಗೆ ಆತ ಸಾಕಿದ್ದ ಎತ್ತು ಕೂಡಾ ಮೃತಪಟ್ಟಿದೆ.
ಕೆಲ ದಿನಗಳ ಹಿಂದಷ್ಟೇ ಮಂಗಳೂರಿನ ಮಹಾ ಮಳೆಗೆ ಜನರು ತತ್ತರಿಸಿ ಹೋಗಿದ್ದರು. ಇನ್ನು ಹೈದರಾಬಾದ್ ಕರ್ನಾಟಕ ಭಾಗದಲ್ಲಿ ಸುರಿದ ಮಳೆಗೆ ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಚಿಂದಾನೂರ ತಾಂಡಾದಲ್ಲಿ ಸಿಡಿಲಿನ ಹೊಡೆತಕ್ಕೆ 9 ಕುರಿಗಳು ಸ್ಥಳದಲ್ಲಿಯೇ ಮೃತಪಟ್ಟು ಇಬ್ಬರು ಕುರಿಗಾಯಿಗಳು ತೀವ್ರ ಗಾಯಗೊಂಡಿರುವ ಘಟನೆ ವರದಿಯಾಗಿತ್ತು.

click me!