
ಸ್ಟಾಕ್‌ಹೋಂ(ಅ.6): ಮೊಲ್ಯಾಕ್ಯುಲರ್(ಅಣುಗಳ) ಮೆಶಿನ್ ಅಥವಾ ನ್ಯಾನೋ ಮೆಶಿನ್‌ಗಳನ್ನು ಅಭಿವೃದ್ಧಿ ಪಡಿಸಿದುದಕ್ಕಾಗಿ ಫ್ರೆಂಚ್ ಮೂಲದ ಜೀನ್ ಪಿಯರ್ ಸುವಾಜ್, ಬ್ರಿಟಿಷ್ ಮೂಲದ ಜೆ ್ರೇಸರ್ ಸ್ಟೊಡಾರ್ಟ್ ಮತ್ತು ಡಚ್ ವಿಜ್ಞಾನಿ ಬರ್ನಾರ್ಡ್ ಸೆರಿಂಗಾ ಅವರು ರಸಾಯನಶಾಸದ ನೊಬೆಲ್ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ. ಮೂವರು ಸಂಶೋಧಕರೂ 6,18,00,000 ಮೊತ್ತದ ಬಹುಮಾನ ಹಂಚಿಕೊಳ್ಳಲಿದ್ದಾರೆ.
ಅಣುಗಳ ನಿಯಂತ್ರಣಾತ್ಮಕ ಚಲನೆಗಳ ಕುರಿತ ವಿನ್ಯಾಸ ಮತ್ತು ವಿಶ್ಲೇಷಣೆಗಳ ಬಗೆಗಿನ ಸಂಶೋಧನೆಗಾಗಿ ಈ ಪುರಸ್ಕಾರ ನೀಡಲಾಗುತ್ತಿದೆ ಎಂದು ರಾಯಲ್ ಸ್ವೀಡಿಷ್ ಅಕಾಡೆಮಿ ಆ್ ಸೈನ್ಸಸ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ನಿರ್ದಿಷ್ಟ ಉತ್ತೇಜನಕ್ಕೆ ಪ್ರತಿಕ್ರಿಯೆಯಾಗಿ ಕೆಲ ಅಣುಗಳು ಅರೆ ಯಾಂತ್ರಿಕ ಚಲನೆಯನ್ನು ತೋರುವುದನ್ನು ಮೊಲ್ಯಾಕ್ಯುಲರ್ ಅಥವಾ ನ್ಯಾನೋ ಮೆಶಿನ್ ಎಂದು ಕರೆಯಲಾಗುತ್ತದೆ.
ಇಂಧನ ದಾಸ್ತಾನು ವ್ಯವಸ್ಥೆ, ಸಂವೇದಕಗಳು ಮತ್ತು ಹೊಸ ವಸ್ತುಗಳ ಅಭಿವೃದ್ಧಿ ವಿಷಯದಲ್ಲಿ ಬಹುತೇಕ ಮೊಲ್ಯಾಕ್ಯುಲರ್ ಮೆಶಿನ್‌ಗಳನ್ನು ಬಳಸಲಾಗುತ್ತದೆ. ರಸಾಯನಶಾಸದ ನೊಬೆಲ್ ಪುರಸ್ಕಾರ ಈ ವರ್ಷದ ವಿಜ್ಞಾನ ವಿಭಾಗದ ಕೊನೆಯ ಪ್ರಶಸ್ತಿ. ವೈದ್ಯಕೀಯ ಪುರಸ್ಕಾರ ಈಗಾಗಲೇ ಜಪಾನ್‌ನ ಜೀವಶಾಸಜ್ಞರಿಗೆ ಸಲ್ಲಿಕೆಯಾಗಿದೆ. ಭೌತಶಾಸ ವಿಭಾಗದ ಪುರಸ್ಕಾರ ಮೂವರು ಬ್ರಿಟಿಷ್ ಮೂಲದ ವಿಜ್ಞಾನಿಗಳ ಪಾಲಾಗಿದೆ. ನೊಬೆಲ್ ಶಾಂತಿ ಪುರಸ್ಕಾರ ಕಳೆದ ವಾರ ಪ್ರಕಟವಾಗಿದ್ದು, ಸಾಹಿತ್ಯ ವಿಭಾಗದ ಪುರಸ್ಕಾರ ಮುಂದಿನ ವಾರ ಪ್ರಕಟವಾಗಲಿದೆ. ಸ್ಟಾಕ್‌ಹೋಂನಲ್ಲಿ ನೊಬೆಲ್ ಪುರಸ್ಕಾರ ಸಂಸ್ಥಾಪಕ ಆಲೆಓಂ್ರಿಡ್ ನೊಬೆಲ್‌ರ ಪುಣ್ಯತಿಥಿ ದಿನ ಡಿ.10ರಂದು ನಡೆಯಲಿರುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನವಾಗಲಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.