ಪುಲ್ವಾಮ ದಾಳಿಯಲ್ಲಿ ಹುತಾತ್ಮರಾದ ಮಂಡ್ಯದ ಯೋಧ ಗುರು ಕುಟುಂಬಕ್ಕೆ LIC ವಿಮೆ ಮರಣದಾವೆ ಮೊತ್ತ ತಲುಪಿಸಿ ಮಾನವೀಯತೆ ಮೆರೆದಿದೆ.
ನವದೆಹಲಿ : ಪುಲ್ವಾಮದಲ್ಲಿ ಸಂಭವಿಸಿದ ಭೀಕರ ಉಗ್ರರ ದಾಳಿಯಲ್ಲಿ 44 ಯೋಧರು ಹುತಾತ್ಮರಾಗಿದ್ದು, ಈ ಘಟನೆಗೆ ಇಡೀ ದೇಶವೇ ಕಂಬನಿ ಮಿಡಿಯುತ್ತಿದೆ. ಪ್ರತೀ ಭಾರತೀಯನ ಮನಸ್ಸಲ್ಲಿ ಕಿಚ್ಚು ಹೊತ್ತಿಸುತ್ತಿರುವ ಈ ದುರ್ಘಟನೆ ಕಲ್ಲು ಹೃದಯವನ್ನೂ ಕರಗುವಂತೆ ಮಾಡುತ್ತಿದೆ.
ಇದರಲ್ಲಿ ಮಂಡ್ಯದ ಯೋಧ ಗುರು ಅವರು ಕೂಡ ವೀರಮರಣವನ್ನಪ್ಪಿದ್ದಾರೆ. ಭಾರತೀಯ ಜೀವಾ ವಿಮಾ ಕಂಪನಿ LIC ಕೂಡ ಗುರು ಅವರ ಕುಟುಂಬಕ್ಕೆ ತಕ್ಷಣ ತನ್ನ ನೆರವಿನ ಹಸ್ತ ಚಾಚಿದೆ. ಪುಲ್ವಾಮ ದಾಳಿಯಲ್ಲಿ ಹುತಾತ್ಮರಾದ ಮಂಡ್ಯದ ಯೋಧ ಗುರು ಕುಟುಂಬಕ್ಕೆ LIC ವಿಮೆ ಮರಣದಾವೆ ಮೊತ್ತ ತಲುಪಿಸಿ ಮಾನವೀಯತೆ ಮೆರೆದಿದೆ.
ಮನ ಕಲಕುವಂತಿದೆ ಹುತಾತ್ಮ ಯೋಧ ಗುರುವಿನ ಕಥೆ
ಯಾವುದೇ ದಾಖಲೆಯನ್ನೂ ಕೇಳದೆ LIC ಹಣ ನೀಡಿದೆ. ಪಾಲಿಸಿ ನಂ 725974544ನಲ್ಲಿ ಯೋಧ ಗುರು ವಿಮೆ ಮಾಡಿಸಿದ್ದು, ಅವರು ಹುತಾತ್ಮರಾಗಿದ್ದ ವಿಚಾರ ತಿಳಿಯುತ್ತಿದ್ದಂತೆ ನಾಮಿನಿ ಖಾತೆಗೆ ಹಣ ವರ್ಗಾವಣೆ ಮಾಡಿದೆ.
’ಅರ್ಧಗಂಟೆ ಮೊದಲು ಸ್ಫೋಟಗೊಂಡ ಬಸ್‌ನಿಂದ ಇಳಿದಿದ್ದೆ’
LIC ಮಂಡ್ಯ ಬ್ರಾಂಚ್ ನಿಂದ ನಾಮಿನಿ ಖಾತೆಗೆ 3,82,199 ರೂ ವಿಮೆ ಮರಣದಾವೆ ಮೊತ್ತವನ್ನು ನೀಡಿದೆ. ಮರಣ ಪ್ರಮಾಣ ಪತ್ರವನ್ನೂ ಕೂಡ ಕೇಳದೆ ವಿಮೆ ಕಂಪನಿ ಹಣ ವರ್ಗಾಯಿಸಿದೆ.
LIC ಅಧಿಕಾರಿಗಳು ಹುತಾತ್ಮ ಯೋಧ ಗುರು ಎಲ್ ಐಸಿ ಮೊತ್ತವನ್ನು ರೀಫಂಡ್ ಮಾಡಿದ್ದಾರೆ. ಭಾರತೀಯ ಜೀವ ವಿಮಾ ನಿಗಮದಲ್ಲಿ ಮದ್ದೂರು ಹಾಗೂ ಮಂಡ್ಯದಲ್ಲಿ ಎರಡು ಇನ್ಶುರೆನ್ಸ್ ಪಾಲಿಸಿ ಮಾಡಿಸಿದ್ದರು.
ಗುರು ಹುತಾತ್ಮರಾದ ಸುದ್ದಿ ತಿಳಿಯುತ್ತಿದ್ದಂತೆ ಪ್ರಕ್ರಿಯೆ ಪೂರ್ಣ ಗೊಳಿಸಿ ಹಣ ಮರುಪಾವತಿ ಮಾಡಿದ್ದಾರೆ. ತಮ್ಮ ತಂದೆಯವರನ್ನ ನಾಮಿನಿಯಾಗಿ ಮಾಡಿದ್ದು, ಸಚಿವ ಡಿಸಿ ತಮ್ಮಣ್ಣ ಅವರ ಮೂಲಕ ಹಣ ಮರುಪಾವತಿ ದಾಖಲೆ ಹಸ್ತಾಂತರ ಮಾಡಿ ಮಾನವೀಯತೆ ಮೆರೆದಿದ್ದಾರೆ.
LIC ಪ್ರೀಮಿಯಂ ದಾಖಲೆ ಹಸ್ತಾಂತರಿಸಿ ಕುಟುಂಬದವರಿಗೆ ಸಚಿವ ಡಿಸಿ ತಮ್ಮಣ್ಣ ಸಾಂತ್ವನ ಹೇಳುವ ಮೂಲಕ ಧೈರ್ಯ ತುಂಬಿದ್ದಾರೆ.
ಯಾವುದೇ ರೀತಿ ದಾಖಲೆ ಪತ್ರಗಳಿಲ್ಲದೇ ಹಣ ನೀಡುವ ಮೂಲಕ ಯೋಧನ ವಿಚಾರದಲ್ಲಿ ಕಂಪನಿ ಮಾನವೀಯತೆ ಮೆರೆದಿದೆ. ವಿಮೆ ಕಂಪನಿ ಕಾರ್ಯಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.