'ಎಡಪಂಥೀಯ ಚಿಂತನೆ ರಾಜ್ಯಕ್ಕೆ ಮಾತ್ರವಲ್ಲ ದೇಶಕ್ಕೆ ಅಪಾಯ'

By Web DeskFirst Published Nov 3, 2018, 9:57 PM IST
Highlights

ಲಿಟ್ ಫೆಸ್ಟ್ ಸಮಾವೇಶದಲ್ಲಿ ಜೀವಮಾನ ಸಾಧನೆ ಪ್ರಶಸ್ತಿ ಸ್ವೀಕರಿಸಿ ಮಾತನಾಡಿರುವ ಸಾಹಿತಿ ಡಾ.ಎಸ್.ಎಲ್. ಭೈರಪ್ಪ ಅವರು ಎಡಪಂಥೀಯ ಚಿಂತನೆ ವಿರುದ್ಧ ಕಿಡಿಕಾರಿದ್ದಾರೆ. ಇದರ ವಿವರ ಇಲ್ಲಿದೆ. 

ಮಂಗಳೂರು, [ನ.3]: ನಗರ ಪ್ರದೇಶದಲ್ಲಿ ಕಂಡುಬರುವ ಎಡಪಂಥೀಯ ಚಿಂತನೆ ಪ್ರವೃತ್ತಿಯನ್ನು ನಾಶಮಾಡದಿದ್ದರೆ, ಅದು ರಾಜ್ಯಕ್ಕೆ ಮಾತ್ರವಲ್ಲ ದೇಶಕ್ಕೆ ಅಪಾಯ ತಂದೊಡ್ಡಬಲ್ಲದು ಎಂದು ಖ್ಯಾತ ಸಾಹಿತಿ ಡಾ.ಎಸ್.ಎಲ್. ಭೈರಪ್ಪ ಎಚ್ಚರಿಕೆ ನೀಡಿದ್ದಾಾರೆ.

ಮಂಗಳೂರಿನಲ್ಲಿ ಶನಿವಾರ ಆರಂಭವಾದ ಮಂಗಳೂರು ಲಿಟ್ ಫೆಸ್ಟ್ ಸಮಾವೇಶದಲ್ಲಿ ಜೀವಮಾನ ಸಾಧನೆ ಪ್ರಶಸ್ತಿ ಸ್ವೀಕರಿಸಿ ನಗರ ನಕ್ಸಲ್ ಸಮಸ್ಯೆ ಬಗ್ಗೆ ಹೆಸರೆತ್ತದೆ ಮಾತನಾಡಿದ ಡಾ.ಭೈರಪ್ಪ ಅವರು, ಮೋದಿ ಏನೂ ಮಾಡಿದರೂ ತಪ್ಪು ಎನ್ನುವ ಕಾಲಘಟ್ಟ ಈಗ ಇದೆ. ಇಡಿ ಸಾಂಸ್ಕೃತಿಕ ಭಾರತವನ್ನು ನೋಡದೆ ಸಾಹಿತ್ಯ ರಚಿಸುವ ತಮಿಳುನಾಡಿನ ಡಿಎಂಕೆ ಮಾನಸಿಕತೆಯ ಸಾಹಿತಿಗಳೂ ಇದ್ದಾಾರೆ ಎಂದು ಛೇಡಿಸಿದರು.

ದಕ್ಷಿಣ ಕನ್ನಡ 70-80 ವರ್ಷದ ಹಿಂದೆ ಬಡತನದಲ್ಲಿದ್ದ ಜಿಲ್ಲೆ. ಆದ್ರೆ ಈಗ ಇಡೀ ಕರ್ನಾಟಕಕ್ಕೆ ದಕ್ಷಿಣ ಕನ್ನಡ ಲೀಡಿಂಗ್ ಜಿಲ್ಲೆಯಾಗಿದೆ. ಆದ್ರೆ ದಕ್ಷಿಣ ಕನ್ನಡ ಜಿಲ್ಲೆಗೆ ಲೆಫ್ಟಿಸ್ಟ್ ಪ್ರವೃತ್ತಿ ಬೇಕಾ..? ಈ ಲೆಫ್ಟಿಸ್ಟ್ ಪ್ರವೃತ್ತಿ ಇದ್ರೆ ದಕ್ಷಿಣ ಕನ್ನಡ ಜಿಲ್ಲೆಯ ಗತಿ ಏನಾಗುತ್ತೆ?

ಇಲ್ಲಿ ಲೆಫ್ಟಿಸಂ ಹೇಗೆ ಪ್ರವೇಶ ಮಾಡಿತು? ಹೇಗೆ ಬೆಳೆಯಿತು.? ಇದು ಇಡೀ ಜಿಲ್ಲೆಯನ್ನು ಹಾಳು ಮಾಡೋದಲ್ಲದೇ ಕರ್ನಾಟಕದ ಒಂದು ಮಾಡಲ್ ನ ಹಾಳು ಮಾಡುತ್ತೆ ಎಂದು ಕಿಡಿಕಾರಿದರು.

ನಾನು ನಿನ್ನೆ ಬರುವಾಗ ಕಲ್ಕಡ್ಕ ಶ್ರೀರಾಮ ಶಾಲೆಗೆ ಹೋಗಿದ್ದೆ. ಕಲ್ಕಡ್ಕದ ಶ್ರೀರಾಮ ಶಾಲೆಯಲ್ಲಿ ದೇವಸ್ಥಾನದ ಹಣದಲ್ಲಿ‌ ಮಕ್ಕಳಿಗೆ ಊಟ ಹಾಕ್ತಾರೆ. ಆದ್ರೆ ಸರ್ಕಾರದ ಮುಖ್ಯಮಂತ್ರಿ ಅದನ್ನೇ ನಿಲ್ಲಿಸಿ ತೊಂದ್ರೆ ಕೊಟ್ಟರು. ನಿನ್ನೆ ನಾನು ಹೋಗುವಾಗ ನಾನು ಚೆಕ್ ಬುಕ್ ಯಾಕೆ ತರಲಿಲ್ಲ ಎನ್ನುವ ಖೇದ ಇತ್ತು.

ಆದರೆ ಈಗ ನನಗೆ ಸನ್ಮಾನ ಮಾಡುವಾಗ ಒಂದು ಚೆಕ್ ಇಟ್ಟಂತೆ ಭಾಸವಾಗಿದೆ.  ಹೀಗಾಗಿ ಆ ಚೆಕ್ಕನ್ನ ಕಲ್ಕಡ್ಕ ಶಾಲೆಗೆ ಕೊಡ್ತಾ ಇದೀನಿ ಎಂದು ಹೇಳಿದರು.
 

click me!