JNU ಎಲೆಕ್ಷನ್​: ABVPಯನ್ನ ಮಕಾಡೆ ಮಲಗಿಸಿದ ಪ್ರಗತಿಪರ ಒಕ್ಕೂಟ

By Ramesh BFirst Published Sep 16, 2018, 6:16 PM IST
Highlights

ತೀವ್ರ ಕುತೂಹಲ ಕೆರಳಿಸಿದ್ದ ಜೆಎನ್​ಯು ವಿಶ್ವವಿದ್ಯಾಲಯ ಚುನಾವಣೆ ಫಲಿತಾಂಶ  ಇಂದು (ಭಾನುವಾರ) ಹೊರಬಿದ್ದಿದೆ. ಪ್ರಬಲ ಎಬಿವಿಪಿಯನ್ನ ಮಣಿಸಲು ಒಂದಾಗಿದ್ದ ಎಡ ಪ್ರಗತಿಪರ ವಿದ್ಯಾರ್ಥಿಗಳ ಒಕ್ಕೂಟ ವಿಜಯ ಪತಾಕೆ ಹಾರಿಸಿದೆ. 

ದೆಹಲಿ, (ಸೆ.16): ತೀವ್ರ ಕುತೂಹಲ ಕೆರಳಿಸಿದ್ದ 2018r ಜೆಎನ್​ಯು ವಿಶ್ವವಿದ್ಯಾಲಯ ಚುನಾವಣೆ ಫಲಿತಾಂಶ  ಇಂದು (ಭಾನುವಾರ) ಹೊರಬಿದ್ದಿದೆ. ಪ್ರಬಲ ಎಬಿವಿಪಿಯನ್ನ ಮಣಿಸಲು ಒಂದಾಗಿದ್ದ ಎಡ ಪ್ರಗತಿಪರ ವಿದ್ಯಾರ್ಥಿಗಳ ಒಕ್ಕೂಟ ವಿಜಯ ಪತಾಕೆ ಹಾರಿಸಿದೆ. 

ಶನಿವಾರ ನಡೆದ ಮತ ಏಣಿಕೆ ವೇಳೆ ಎಬಿವಿಪಿ ವಿರುದ್ಧ ಗಲಾಟೆ ಮಾಡಿರುವ ಆರೋಪ ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಮತ ಎಣಿಕೆಯನ್ನ ಸುಮಾರು 14 ಗಂಟೆಗಳ ಕಾಲ ಮುಂದೂಡಲಾಗಿತ್ತು.  ಅದರಂತೆ ಇಂದು ಮತ ಎಣೆಕೆ ಪ್ರಕ್ರಿಯೆ ನಡೆದಿದ್ದು, ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಮಕಾಡೆ ಮಲಗಿದೆ.

 ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸೇರಿ ಪ್ರಮುಖ 4 ಸ್ಥಾನಗಳಿಗೆ ಎಡ ಪ್ರಗತಿಪರ ವಿದ್ಯಾರ್ಥಿಗಳ ಒಕ್ಕೂಟದ ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ.  ಅಧ್ಯಕ್ಷರಾಗಿ ಎನ್.ಸಾಯಿ ಬಾಲಾಜಿ, ಉಪಾಧ್ಯಕ್ಷರಾಗಿ ಸಾರಿಕಾ ಚೌಧರಿ, ಪ್ರಧಾನ ಕಾರ್ಯದರ್ಶಿಯಾಗಿ ಎಜಾಝ್ ಅಹ್ಮದ್, ಕಾರ್ಯದರ್ಶಿಯಾಗಿ ಅಮುದಾ ಜಯ ದೀಪ್ ಆಯ್ಕೆಯಾಗಿದ್ದಾರೆ.

click me!