ಜಾನಪದ ವಿವಿಯಲ್ಲೊಬ್ಬ ಪೋಲಿ: ಹೆಚ್ಚಿನ ಅಂಕ ಕೊಡೋ ಆಮೀಷ ತೋರಿಸಿ ಕಂಡ ಕಂಡಲ್ಲಿ ಮುತ್ತಿನಾಟ

Published : Jan 13, 2017, 03:44 AM ISTUpdated : Apr 11, 2018, 12:40 PM IST
ಜಾನಪದ ವಿವಿಯಲ್ಲೊಬ್ಬ  ಪೋಲಿ: ಹೆಚ್ಚಿನ ಅಂಕ ಕೊಡೋ ಆಮೀಷ ತೋರಿಸಿ ಕಂಡ ಕಂಡಲ್ಲಿ  ಮುತ್ತಿನಾಟ

ಸಾರಾಂಶ

ಇದು ಶಿಕ್ಷಣ ಕ್ಷೇತ್ರದಲ್ಲಿ ಗುರು ಎಂದು ಕೊಂಡವರು ತಲೆ ತಗ್ಗಿಸುವ ಸ್ಟೋರಿ. ಪೋಲಿ ಗುರುವೊಬ್ಬ ವಿದ್ಯಾರ್ಥಿನಿಯರ ಜೊತೆ ನಡೆಸಿದ ಪ್ರಣಯದಾಟದ ಸ್ಟೋರಿ. ವಿದ್ಯಾರ್ಥಿನಿಯರನ್ನು ಪುಸಲಾಯಿಸಿ ತನ್ನ ತೀಟೆ ತೀರಿಸಕೊಳ್ಳುವ ಅಸಿಸ್ಟೆಂಟ್ ರಿಜಿಸ್ಟಾರ್​'ವೊಬ್ಬನ ಕಾಮಕಾಂಡ ಬಯಲಾಗಿದೆ. ಕಚ್ಚೆ ಹರುಕ ಕೆಲಸ ಮಾಡಿದ ಆ ಮಹಾನ್ ಗುರು ಯಾರು? ಹೇಗಿದೆ ಆತನ ಪ್ರಣಯದಾಟ? ಇಲ್ಲಿದೆ EXCLUSIVE ರಿಪೋರ್ಟ್​.

ಬೆಂಗಳೂರು(ಜ.13): ಇದು ಶಿಕ್ಷಣ ಕ್ಷೇತ್ರದಲ್ಲಿ ಗುರು ಎಂದು ಕೊಂಡವರು ತಲೆ ತಗ್ಗಿಸುವ ಸ್ಟೋರಿ. ಪೋಲಿ ಗುರುವೊಬ್ಬ ವಿದ್ಯಾರ್ಥಿನಿಯರ ಜೊತೆ ನಡೆಸಿದ ಪ್ರಣಯದಾಟದ ಸ್ಟೋರಿ. ವಿದ್ಯಾರ್ಥಿನಿಯರನ್ನು ಪುಸಲಾಯಿಸಿ ತನ್ನ ತೀಟೆ ತೀರಿಸಕೊಳ್ಳುವ ಅಸಿಸ್ಟೆಂಟ್ ರಿಜಿಸ್ಟಾರ್​'ವೊಬ್ಬನ ಕಾಮಕಾಂಡ ಬಯಲಾಗಿದೆ. ಕಚ್ಚೆ ಹರುಕ ಕೆಲಸ ಮಾಡಿದ ಆ ಮಹಾನ್ ಗುರು ಯಾರು? ಹೇಗಿದೆ ಆತನ ಪ್ರಣಯದಾಟ? ಇಲ್ಲಿದೆ EXCLUSIVE ರಿಪೋರ್ಟ್​.

ಜಾನಪದ ವಿವಿಯಲ್ಲೊಬ್ಬ  ಸ್ತ್ರೀಲೋಲ ಅಸಿಸ್ಟೆಂಟ್ ರಿಜಿಸ್ಟ್ರಾರ್

ಚೆಂದದ ಹುಡುಗಿಯರನ್ನ ಪುಸಲಾಯಿಸಿ ತೀಟೆ ತೀರಿಸಿಕೊಳ್ಳುವ ಲಜ್ಜೆಗೆಟ್ಟ ಭೂಪ ಬೇರಾರೂ ಅಲ್ಲ. ಹಾವೇರಿಯ ಜಾನಪದ ವಿಶ್ವವಿದ್ಯಾನಿಲಯದ ಅಸಿಸ್ಟೆಂಟ್ ರಿಜಿಸ್ಟಾರ್  ಶಹಜಹಾನ್ ಮುದಗಿರಿ. ನಮ್ಮ ಭಾಷೆ, ಸಂಸ್ಕೃತಿಯ ಬೋಧನೆಯನ್ನುನ್ನ ಮಾಡುವ ವಿದ್ಯಾದೇಗುಲದಲ್ಲಿ ಇಂಥ ಕಚ್ಚೆ ಹರುಕರೂ ಇದ್ದರಾ ಎಂದು ಶಾಕ್ ಆಗುವುದು ಖಂಡಿತ. ಈತ ಓದಿ ಉದ್ದಾರವಾಗಬೇಕೆಂದು ಬಂದ ಹೆಣ್ಮಕ್ಕಳನ್ನು ಅಡ್ಡದಾರಿಗೆ ಇಳಿಸುವುದರಲ್ಲಿ ನಿಸ್ಸೀಮ. ತರಬೇತಿಗೆಂದು ಬರುವ ಹುಡುಗಿಯರಿಗೆ ಹೆಚ್ಚಿನ ಅಂಕ ಕೊಡಿಸುವ ಆಸೆ ತೋರಿಸಿ ತನ್ನ ತೀಟೆ ತೀರಿಸಿಕೊಳ್ಳುವ ಕೆಲಸ ಮಾಡುತ್ತಿದ್ದಾನೆ. ಈತನ ಮಾನಗೇಡಿ ಕೆಲಸದ ವಿಡಿಯೋ ಸುವರ್ಣ ನ್ಯೂಸ್​ಗೆ ಲಭ್ಯವಾಗಿದೆ.

ತನ್ನ ನೀಚ ಕೆಲಸ ವಿಡಿಯೋ ಮಾಡಿ ಸ್ನೇಹಿತರಿಗೆ ತೋರಿಸುತ್ತಿದ್ದ ಭೂಪ: ಅಶ್ಲೀಲ ವಿಡಿಯೋ ತೋರಿಸಿ ವಿದ್ಯಾರ್ಥಿನಿಯರಿಗೆ ಬ್ಲಾಕ್ ಮೇಲ್

ಈ ಕಚ್ಚೆಹರುಕ ಮನುಷ್ಯ ಲೈಂಗಿಕವಾಗಿ ವಿದ್ಯಾರ್ಥಿನಿಯರನ್ನು ಬಳಸಿಕೊಳ್ಳೋದಲ್ಲದೇ. ಅದನ್ನ ಮೊಬೈಲ್ ನಲ್ಲಿ ರೆಕಾರ್ಡ್ ಮಾಡಿಕೊಂಡು ತನ್ನ ಸ್ನೇಹಿತರಿಗೆಲ್ಲ ತೋರಿಸುತ್ತಿದ್ದ. ಅಷ್ಟೇ ಅಲ್ಲದೆ ಅದೇ ವಿಡಿಯೋವನ್ನು ಇಟ್ಕೊಂಡು ಯುವತಿಯರಿಗೆ ಬ್ಲಾಕ್ ಮೇಲ್ ಸಹ ಮಾಡ್ತಿದ್ದನಂತೆ. ಕಾಮುಕ ಶಹಜಾನ್ ನೀಚ ಕೃತ್ಯದ ಬಗ್ಗೆ ವಿವಿ ಗಮನಕ್ಕೂ ಬಂದಿದೆ. ಆದರೂ ಇದುವರೆಗೂ ಕ್ರಮ ಜರುಗಿಸಿಲ್ಲ. ಯಾಕಂದ್ರೆ ಈತನ ಮೇಲೆ ಸರ್ಕಾರದ ಪ್ರಭಾವಿ ಸಚಿವರೊಬ್ಬರ ಕೃಪಕಟಾಕ್ಷವಿದಿಯಂತೆ. ಹೀಗಾಗೇ ಇನ್ನೂ ಜಾನಪದ ವಿವಿಯಲ್ಲೇ ಅಸಿಸ್ಟೆಂಟ್ ರಿಜಿಸ್ಟರ್ ಆಗಿಯೇ  ಉಳಿದುಕೊಂಡಿದ್ದಾನೆ .

ವಿದ್ಯಾದೇಗುಲದಲ್ಲಿರುವ ಕಚ್ಚೆಹರುಕನ ಬಣ್ಣ ಬಯಲು ಮಾಡಿದ್ದೇವೆ. ಈ ಕಾಮಪಿಶಾಚಿಯಿಂದ ಇನ್ನೆಷ್ಟು ಹೆಣ್ಮಕ್ಕಳ ಬಾಳು ಹಾಳಾಗಬೇಕು? ಮೊದಲು ವಿವಿಯಿಂದ ಹೊರ ದಬ್ಬೋ ಕೆಲಸ ಮಾಡಬೇಕಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ವಿಡಿಯೋ: ಅಂತರರಾಷ್ಟ್ರೀಯ ವೇದಿಕೆಯಲ್ಲಿ ಪಾಕಿಸ್ತಾನಕ್ಕೆ ಅವಮಾನ: ಶಹಬಾಜ್ ಷರೀಫ್‌ರನ್ನು ನಿರ್ಲಕ್ಷಿಸಿದ ಪುಟಿನ್!
ಯುಎಇ ಕಠಿಣ ಕಾನೂನು: ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ, ವೇಶ್ಯಾವಾಟಿಕೆಗೆ ಶಿಕ್ಷೆ ಪ್ರಮಾಣ ಭಾರೀ ಹೆಚ್ಚಳ!