ಬೆಂಗಳೂರಲ್ಲಿ ಬಲೆಗೆ ಬಿತ್ತು ಮತ್ತೊಂದು ಹನಿಟ್ರ್ಯಾಪ್ ಜಾಲ

Published : Jan 13, 2017, 03:07 AM ISTUpdated : Apr 11, 2018, 12:40 PM IST
ಬೆಂಗಳೂರಲ್ಲಿ ಬಲೆಗೆ ಬಿತ್ತು ಮತ್ತೊಂದು ಹನಿಟ್ರ್ಯಾಪ್ ಜಾಲ

ಸಾರಾಂಶ

ಅವರಿಬ್ಬರು ಮಾಜಿ ಕಾರ್ಪೊರೇಟರೊಬ್ಬರ ಎನ್​​'ಜಿಒದಲ್ಲಿ ಕೆಲಸಕ್ಕಿದ್ದವರು. ಬರುವ ಸಂಬಳ ಸಾಲದು ಅಂತ  ಹಣ ಸಂಪಾದನೆಗೆ ಹನಿಟ್ರ್ಯಾಪ್​ ದಾರಿ  ಹಿಡಿದಿದ್ದರು. ಹುಡುಗಿಯರನ್ನು ಬಿಟ್ಟು ಯಾಮಾರಿಸಿ ದುಡ್ಡು ಮಾಡುತ್ತಿದ್ದ ಆಸಾಮಿಗಳು ಈಗ ಪೊಲೀಸರ  ಅಥಿತಿಯಾಗಿದ್ದಾರೆ.

ಬೆಂಗಳೂರು(ಜ.13): ಅವರಿಬ್ಬರು ಮಾಜಿ ಕಾರ್ಪೊರೇಟರೊಬ್ಬರ ಎನ್​​'ಜಿಒದಲ್ಲಿ ಕೆಲಸಕ್ಕಿದ್ದವರು. ಬರುವ ಸಂಬಳ ಸಾಲದು ಅಂತ  ಹಣ ಸಂಪಾದನೆಗೆ ಹನಿಟ್ರ್ಯಾಪ್​ ದಾರಿ  ಹಿಡಿದಿದ್ದರು. ಹುಡುಗಿಯರನ್ನು ಬಿಟ್ಟು ಯಾಮಾರಿಸಿ ದುಡ್ಡು ಮಾಡುತ್ತಿದ್ದ ಆಸಾಮಿಗಳು ಈಗ ಪೊಲೀಸರ  ಅಥಿತಿಯಾಗಿದ್ದಾರೆ.

ಈ ಫೋಟೋದಲ್ಲಿ ಫೋಸ್​ ಕೊಡ್ತಿರೋ ಇವರೇ ಹನಿಟ್ರ್ಯಾಪ್​ ಕಿಂಗ್​'ಪಿನ್'​ಗಳು ಹೆಸರು ಆನಂದ್​ ಆಚಾರ್​ ಮತ್ತು ರವಿಕುಮಾರ್. ಇವರಿಬ್ಬರು ವಿಜಯನಗರದ ಮಾರೇನಹಳ್ಳಿಯ ಮಾಜಿ ಕಾರ್ಪೊರೇಟ್​ ವಾಗೀಶ್​ ಕಚೇರಿಯ ಸಿಬ್ಬಂದಿ. ಸದ್ಯ ಪೊಲೀಸರ ಅಥಿತಿಗಳು.

ಸಾಫ್ಟ್​ವೇರ್​ ಇಂಜೀನಿಯರ್​ನಿಂದ ಬಯಲಾಯ್ತು ಹನಿಟ್ರ್ಯಾಪ್​ ಜಾಲ ಪತ್ತೆಯಾಗಿದ್ದು ಹೇಗೆ?

ಇನ್ನೂ ಇವರ ಬಿಸಿನೆಸ್ ಸೆಂಟರ್ ವಿಜಯನಗರ. ಲೊಕ್ಯಾಂಟೋ ವೆಬ್​ಸೈಟ್​ ಮೂಲಕ  ವ್ಯವಹಾರ ನಡೆಸುತ್ತಿದ್ರು. ಆನ್​ ಲೈನ್​ನಲ್ಲೇ ಗಿರಾಕಿಗಳನ್ನು  ಕುದುರಿಸ್ತಾ ಇದ್ರು. ಗಿರಾಕಿಗಳು ಬಂದ ಕೂಡ್ಲೇ ಮೂವರು ಯುವತಿಯರನ್ನು  ಬಿಟ್ಟು ಡೀಲ್ ನಡೆಸುತ್ತಿದ್ರು.ಈ ಗ್ಯಾಂಗ್​​ ಸಾಫ್ಟವೇರ್ ಎಂಜಿನಿಯರ್ ಒಬ್ಬರನ್ನು ಕರೆಸಿ  ಹತ್ತು ಸಾವಿರ ಹಣವನ್ನು ದೋಚಿದ್ದಾರೆ. ಇದ್ರಿಂದ ಬೆದರಿದ ಎಂಜಿನಿಯರ್  ನಗರ ಪೊಲೀಸ್ ಆಯುಕ್ತರಿಗೆ ಇ ಮೇಲ್ ನ ಮೂಲಕ ದೂರನ್ನ  ನೀಡಿದಾಗ ಜಾಲ ಬಯಲಿಗೆ ಬಂದಿದೆ.

ವಿಜಯನಗರ ಪೊಲೀಸರು ಹನಿಟ್ರ್ಯಾಪ್​ ಜಾಲವನ್ನು ಭೇದಿಸಿ ಇಬ್ಬರನ್ನು ಅರೆಸ್ಟ್​ ಮಾಡಿದ್ದಾರೆ. ಸದ್ಯ ಯುವತಿಯರ ಬಂಧನಕ್ಕೆ ಬಲೆ ಬೀಸಿದ್ದು  ತನಿಖೆ ಚುರುಕುಗೊಳಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕಾದು ಕಾದು ಸುಸ್ತಾದ ಶೆಹಬಾಜ್‌ ಷರೀಫ್‌, ಟರ್ಕಿ ಅಧ್ಯಕ್ಷರ ಜೊತೆ ಪುಟಿನ್‌ ಮೀಟಿಂಗ್‌ ವೇಳೆ ಒಳನುಗ್ಗಿದ ಪಾಕ್‌ ಪ್ರಧಾನಿ!
ಬೆಂಗಳೂರಿನಲ್ಲಿ ಇಷ್ಟೊಂದು ಚಳಿಗೆ ಕಾರಣವೇನು? ಮುಂದಿನ ಮೂರು ದಿನ ಉತ್ತರ ಕರ್ನಾಟಕದಲ್ಲಿ ಶೀತಗಾಳಿ!