ಬಡತನದ ಪಾಠ ಓದಿ ಕಲಿತಿಲ್ಲ, ನೋಡಿ ಕಲಿತಿದ್ದೇನೆ: ಮೋದಿ!

By Web Desk  |  First Published Oct 30, 2019, 3:15 PM IST

'ದೇಶದ ರೈಲು ನಿಲ್ದಾಣದಲ್ಲಿ ಬಡತನ ಅನುಭವದ ಪಾಠ ಕಲಿತಿದ್ದೇನೆ'|ಪ್ರಧಾನಿ ನರೇಂದ್ರ ಮೋದಿ ಅವರ ಅಂತರಾತ್ಮದ ನೋವಿನ ನುಡಿಗಳು| ಪುಸ್ತಕಗಳಿಂದ ಬಡತನದ ಪಾಠ ಕಲಿತಿಲ್ಲ ಎಂದ ಪ್ರಧಾನಿ| 2 ದಿನಗಳ ಸೌದಿ ಅರೇಬಿಯಾ ಪ್ರವಾಸದಲ್ಲಿರುವ ಪ್ರಧಾನಿ ಮೋದಿ| ತಮ್ಮ ಬಾಲ್ಯದ ಕಷ್ಟದ ದಿನಗಳನ್ನು ಮೆಲುಕು ಹಾಕಿದ ಪ್ರಧಾನಿ ಮೋದಿ| ರೈಲು ನಿಲ್ದಾಣದಲ್ಲಿ ಚಹಾ ಮಾರುತ್ತಾ ಈ ಹಂತಕ್ಕೆ ಬಂದು ತಲುಪಿದ್ದೇನೆ ಎಂದ ಪ್ರಧಾನಿ| ಕೆಲವೇ ವರ್ಷಗಳಲ್ಲಿ ಭಾರತ ಬಡತನ ಮುಕ್ತವಾಗಲಿದೆ ಎಂದು ಭರವಸೆ ನೀಡಿದ ಪ್ರಧಾನಿ| ಬಡವರನ್ನು ಸಬಲರನ್ನಾಗಿ ಮಾಡುವ ಮೂಲಕ ಬಡತನಕ್ಕೆ ಇತಿಶ್ರೀ|


ರಿಯಾದ್(ಅ.30): 'ಪುಸ್ತಕಗಳನ್ನು ಓದಿ ಬಡತನ ಕಲಿತಿಲ್ಲ ಬದಲಾಗಿ ರೈಲ್ವೆ ನಿಲ್ದಾಣದಲ್ಲಿ ನಿಜವಾದ ಬಡತನವನ್ನು ಅನುಭವಿಸಿ ಪಾಠ ಕಲಿತಿದ್ದೇನೆ..' ಇದು ಪ್ರಧಾನಿ ಮೋದಿ ಅವರ ಅಂತರಾತ್ಮದ ಸ್ಪಷ್ಟ ನುಡಿಗಳು.

2 ದಿನಗಳ ಸೌದಿ ಅರೇಬಿಯಾ ಪ್ರವಾಸದಲ್ಲಿರುವ ಪ್ರಧಾನಿ ಮೋದಿ, ತಮ್ಮ ಬಾಲ್ಯದ ಕಷ್ಟದ ದಿನಗಳನ್ನು ಮೆಲುಕು ಹಾಕಿದ್ದಾರೆ. ಬಡತನದ ಕಷ್ಟ ಮತ್ತು ನೋವುಗಳನ್ನು ತಾವು ಯಾವುದೇ ಪುಸ್ತಕ ಓದಿ ಕಲಿತಿಲ್ಲ, ಬದಲಾಗಿ ರೈಲು ನಿಲ್ದಾಣದಲ್ಲಿ ಸಾಕ್ಷಾತ್ ಅನುಭವಿಸಿ ಕಲಿತಿದ್ದೇನೆ ಎಂದು ಮೋದಿ ಹೇಳಿದ್ದಾರೆ.

Tap to resize

Latest Videos

undefined

ಮೋದಿ ಎಂದೂ ಟೀ ಮಾರಿಲ್ಲ, ಎಲ್ಲಾ ಗಿಮಿಕ್: ತೋಗಾಡಿಯಾ ತಪರಾಕಿ!

ತಾವು ಯಾವುದೇ ದೊಡ್ಡ ರಾಜಕೀಯ ಕುಟುಂಬದ ಹಿನ್ನಲೆಯಿಂದ ಬಂದವರಲ್ಲ ಎಂದಿರುವ ಪ್ರಧಾನಿ, ರೈಲು ನಿಲ್ದಾಣದಲ್ಲಿ ಚಹಾ ಮಾರುತ್ತಾ ಈ ಹಂತಕ್ಕೆ ಬಂದು ತಲುಪಿದ್ದೇನೆ ಎಂದು ಮೋದಿ ಹೇಳಿದರು.

ಇನ್ನು ಕೆಲವೇ ವರ್ಷಗಳಲ್ಲಿ ಭಾರತ ಬಡತನ ಮುಕ್ತವಾಗಲಿದೆ ಎಂದು ಭರವಸೆ ನೀಡಿದ ಪ್ರಧಾನಿ, ಬಡವರನ್ನು ಸಬಲರನ್ನಾಗಿ ಮಾಡುವ ಮೂಲಕ ಬಡತನಕ್ಕೆ ಇತಿಶ್ರೀ ಹಾಡಲಾಗುವುದು ಎಂದು ಹೇಳಿದರು.

click me!