
ಮುಂಬೈ[ಜೂ.07]:NCP ಅಧ್ಯಕ್ಷ ಶರದ್ ಪವಾರ್ RSS ಕಾರ್ಯಕರ್ತರ ನಿಷ್ಠೆ ಹಾಗೂ ದಕ್ಷತೆಯನ್ನು ಕೊಂಡಾಡಿದ್ದಾರೆ. ಅಲ್ಲದೇ RSS ಕಾರ್ಯಕರ್ತರು ತೋರುವ ನಿಷ್ಠೆ ಹಾಗೂ ಸಂವಹನ ಕೌಶಲ್ಯವನ್ನು ಕಲಿತುಕೊಳ್ಳುವಂತೆ ತನ್ನ ಪಕ್ಷದ ಕಾರ್ಯಕರ್ತರಿಗೆ ಸಲಹೆ ನೀಡಿದ್ದಾರೆ.
ಪುಣೆಯ ಪಿಂಪ್ರಿ ಚಿಂಚ್ವಾಡ್ಡ್‌ನಲ್ಲಿ ಆಯೋಜಿಸಲಾಗಿದ್ದ NCP ಕಾರ್ಯಕರ್ತರ ಶಿಬಿರದಲ್ಲಿ ಮಾತನಾಡಿದ ಪವಾರ್ 'ನಮ್ಮ ಪಕ್ಷದ ಕಾರ್ಯಕರ್ತರು ಪ್ರಚಾರಕ್ಕೆ ಹೋದಾಗ ಒಂದು ವೇಳೆ ಯಾವುದಾದರು ಮನೆ ಬಾಗಿಲು ಮುಚ್ಚಿದ್ದರೆ, ಬಾಗಿಲ ಬಳಿ ಕರಪತ್ರವನ್ನು ಹಾಕಿ ಮರಳುತ್ತಾರೆ. ಆದರೆ ಇದೇ ಕೆಲಸ RSS ಕಾರ್ಯಕರ್ತರಿಗೆ ನೀಡಿದರೆ ಹಾಗಾಗುವುದಿಲ್ಲ. RSS ಕಾರ್ಯಕರ್ತನೊಬ್ಬನಿಗೆ ಒಂದು ವಾರ್ಡ್ ಜವಾಬ್ದಾರಿ ನೀಡಿದರೆ ಆ ವಾರ್ಡ್ ನ ಎಲ್ಲಾ ಮನೆಗಳಿಗೆ ಖುದ್ದು ಭೇಟಿ ನೀಡುತ್ತಾನೆ. ಒಂದು ವೇಳೆ ಮನೆಗೆ ಬಾಗಿಲು ಹಾಕಿದ್ದರೆ, ಸಂಜೆ ಮತ್ತೆ ಆ ಮನೆಗೆ ಭೇಟಿ ಕೊಡುತ್ತಾನೆ. ಆಗಲೂ ಭೇಟಿ ಸಾಧ್ಯವಾಗದಿದ್ದರೆ, ಮರುದಿನ ಬೆಳಿಗ್ಗೆ ಮನೆಯ ಸದಸ್ಯರನ್ನು ಭೇಟಿಯಾಗುತ್ತಾನೆ. ಈ ನಿಷ್ಠೆಯನ್ನು ಕಲಿತುಕೊಳ್ಳಬೇಕು' ಎಂದು NCP ಕಾರ್ಯಕರ್ತರಿಗೆ ಸೂಚಿಸಿದ್ದಾರೆ.
RSS ಹಾಗೂ ನಮ್ಮ ಸಿದ್ಧಾಂತಗಳಲ್ಲಿ ವ್ಯತ್ಯಾಸಗಳಿವೆ. ಆದರೆ ನಾವು ಅವರಿಂದ ಕಲಿತುಕೊಳ್ಳುವುದು ಬಹಳಷ್ಟಿದೆ. ಹೀಗಾಗಿ ನಾವು ಸಾರ್ವಜನಿಕ ಸಂಪರ್ಕ ಅಭಿವೃದ್ದಿಗೊಳಿಸುವ, ನಿಷ್ಠೆಯ ಕೌಶಲ್ಯವನ್ನು ಅವರಿಂದ ಕಲಿತುಕೊಳ್ಳಬೇಕು ಎಂದು ಪವಾರ್ ತಿಳಿಸಿದ್ದಾರೆ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.