ಕಣ್ಣೀರೇಕೆ ?: ಹುತಾತ್ಮ ಸೈನಿಕನಿಗೆ ಪತ್ನಿ, ಮಗನಿಂದ ಹೆಮ್ಮೆಯ ವಿದಾಯ!

Published : Sep 26, 2018, 12:11 PM ISTUpdated : Sep 26, 2018, 12:59 PM IST
ಕಣ್ಣೀರೇಕೆ ?: ಹುತಾತ್ಮ ಸೈನಿಕನಿಗೆ ಪತ್ನಿ, ಮಗನಿಂದ ಹೆಮ್ಮೆಯ ವಿದಾಯ!

ಸಾರಾಂಶ

ಭಾರತೀಯ ಸೇನೆಯ ವೀರ ಯೋಧ, ಇದೀಗ ಉಗ್ರ ರೊಂದಿಗೆ ಸೆಣಸಾಡುವ ವೇಳೆ ಹುತಾತ್ಮರಾಗಿದ್ದಾರೆ.  ಆದರೆ ಸಾವಿಗೂ ಮುನ್ನವೂ ಲ್ಯಾನ್ಸ್ ನಾಯಕ್ ಸಂದೀಪ್ ಸಿಂಗ್, ಮೂವರು ಉಗ್ರರನ್ನು ಹತ್ಯೆಗೈಯುವ ಮೂಲಕ ಸಾಹಸ ಮೆರೆದು ಹುತಾತ್ಮರಾಗಿದ್ದಾರೆ. 

Last Rites Of Lance Naik Sandeep Sing

ಶ್ರೀನಗರ:  ವರ್ಷದ ಹಿಂದೆ ಪಾಕಿಸ್ತಾನ ಗಡಿಯೊಳಗೆ ನುಗ್ಗಿ ಸರ್ಜಿಕಲ್ ದಾಳಿ ನಡೆಸಿ ಹಲವು ಉಗ್ರರನ್ನು ಹತ್ಯೆಗೈದಿದ್ದ ಭಾರತೀಯ ಸೇನೆಯ ವೀರ ಯೋಧ, ಇದೀಗ ಉಗ್ರ ರೊಂದಿಗೆ ಸೆಣಸಾಡುವ ವೇಳೆ ಹುತಾತ್ಮರಾಗಿದ್ದಾರೆ.  ಆದರೆ ಸಾವಿಗೂ ಮುನ್ನವೂ ಲ್ಯಾನ್ಸ್ ನಾಯಕ್ ಸಂದೀಪ್ ಸಿಂಗ್, ಮೂವರು ಉಗ್ರರನ್ನು ಹತ್ಯೆಗೈಯುವ ಮೂಲಕ ಸಾಹಸ ಮೆರೆದು ಹುತಾತ್ಮರಾಗಿದ್ದಾರೆ. 

ಕಳೆದ ಭಾನುವಾರ ಕಾಶ್ಮೀರದ ಕುಪ್ವಾರ ವಲಯದಲ್ಲಿರುವ ಗಡಿ ನಿಯಂತ್ರಣ ರೇಖೆ ಬಳಿ, ಒಳನುಸುಳುವಿಕೆಯನ್ನು ಪತ್ತೆ ಹಚ್ಚಿದ್ದ ಭಾರತೀಯ
ಸೇನೆ, ಅವರನ್ನು ಹಿಮ್ಮೆಟ್ಟಿಸಲು ಯತ್ನಿಸಿತ್ತು. ಈ ವೇಳೆ ಲ್ಯಾನ್ಸ್ ನಾಯಕ್ ಸಂದೀಪ್ ಸಿಂಗ್ ನೇತೃತ್ವದ ತಂಡ ಸತತ ದಾಳಿ ನಡೆಸಿ ಉಗ್ರರನ್ನು ಹಿಮ್ಮೆಟ್ಟಿಸಲು ಯತ್ನಿಸಿತು. ಈ ವೇಳೆ ಉಭಯ ಬಣ ಗಳ ನಡುವೆ ಗುಂಡಿನ ಚಕಮಕಿ ನಡೆದು, ಇಬ್ಬರು ಉಗ್ರರು ಹತರಾಗಿದ್ದರು.

ಈ ವೇಳೆ ಉಗ್ರರ ಗುಂಡು ಸಿಂಗ್ ಅವರ ಹಣೆ ಹೊಕ್ಕಿತ್ತು. ಆದರೂ ಛಲ ಬಿಡದ ಸಿಂಗ್, ಪ್ರತಿದಾಳಿ ನಡೆಸಿ 3 ಉಗ್ರರನ್ನು ಬಲಿಪಡೆದಿದ್ದರು. ಕೊನೆಗೆ ತೀವ್ರ ರಕ್ರಸ್ರಾವ ದಿಂದ ಸಾವನ್ನಪ್ಪಿದ್ದರು. ಸಿಂಗ್, ಪತ್ನಿ ಮತ್ತು 5 ವರ್ಷದ ಪುತ್ರನನ್ನು ಅಗಲಿದ್ದಾರೆ.

ಬುಧವಾರ ಗುರುದಾಸ್ ಪುರದಲ್ಲಿ ಲ್ಯಾನ್ಸ್ ನಾಯ್ಕ್ ಸಂದೀಪ್ ಅವರ ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಲಾಗಿದ್ದು, ಈ ವೇಳೆ ವರ ಪತ್ನಿ ಪುತ್ರನ ಸೆಲ್ಯೂಟ್ ಎಲ್ಲರನ್ನೂ ಭಾವತೀವ್ರತೆಯಲ್ಲಿ ಮುಳುಗಿಸತು. 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಹೊಸ ವರ್ಷದ ಆರಂಭದಲ್ಲೇ ಮಾರುಕಟ್ಟೆಗೆ ಎಂಟ್ರಿ ನೀಡಲಿದೆ ರೆಡ್ಮಿ ಮಾಸ್ಟರ್‌ ಪಿಕ್ಸೆಲ್‌ ಫೋನ್‌, ಬೆಲೆ ಎಷ್ಟು ಕಡಿಮೆ ಗೊತ್ತಾ?
ರೈಲ್ವೆ ಪ್ರಯಾಣ, ಟಿಕೆಟ್​ ಬುಕಿಂಗ್​ ಎಲ್ಲವೂ ಬಲು ಸುಲಭ : ಸಂಪೂರ್ಣ ಮಾಹಿತಿ ಈ ಒಂದೇ ಒಂದು ಆ್ಯಪ್​ನಲ್ಲಿ!