ದಲಿತರು ಹೆಚ್ಚಿರುವ ಹಳ್ಳಿ ಖಾಸಗಿ ಕಂಪನಿಗಳಿಗೆ ದತ್ತು? ಉದ್ಯೋಗ ಸೃಷ್ಟಿ

By Web DeskFirst Published Sep 26, 2018, 11:50 AM IST
Highlights

ದೇಶದಲ್ಲಿ ದಲಿತರ ಶೇಕಡಾವಾರು ಜನಸಂಖ್ಯೆ ಅಧಿಕವಾಗಿರುವ 22 ಸಾವಿರ ಹಳ್ಳಿಗಳ ಪಟ್ಟಿಯೊಂದನ್ನು ತಯಾರಿಸಿರುವ ಕೇಂದ್ರ ಸರ್ಕಾರ, ಅಂತಹ ಗ್ರಾಮಗಳನ್ನು ಖಾಸಗಿ ಕಂಪನಿಗಳಿಗೆ ದತ್ತು ನೀಡುವ ಪ್ರಸ್ತಾಪವನ್ನು ಇಟ್ಟಿದೆ. 

ನವದೆಹಲಿ: ಲೋಕಸಭೆ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ದಲಿತ ವರ್ಗದ ಓಲೈಕೆಗೆ ಕೇಂದ್ರ ಸರ್ಕಾರ ಪ್ರಯತ್ನ ಆರಂಭಿಸಿದೆ. ದೇಶದಲ್ಲಿ ದಲಿತರ ಶೇಕಡಾವಾರು ಜನಸಂಖ್ಯೆ ಅಧಿಕವಾಗಿರುವ 22 ಸಾವಿರ ಹಳ್ಳಿಗಳ ಪಟ್ಟಿಯೊಂದನ್ನು ತಯಾರಿಸಿರುವ ಕೇಂದ್ರ ಸರ್ಕಾರ, ಅಂತಹ ಗ್ರಾಮಗಳನ್ನು ಖಾಸಗಿ ಕಂಪನಿಗಳಿಗೆ ದತ್ತು ನೀಡುವ ಪ್ರಸ್ತಾಪವನ್ನು ಇಟ್ಟಿದೆ. 

ಈ ಗ್ರಾಮಗಳಲ್ಲಿ ಕೌಶಲ್ಯ ತರಬೇತಿ ನೀಡುವುದರ ಜತೆಗೆ, ಎಸ್ಸಿ, ಎಸ್ಟಿಯುವಕರಿಗೆ ಉದ್ಯೋಗ ನೀಡುವಂತೆಯೂ ಸಲಹೆ ಮಾಡಿದೆ. ಖಾಸಗಿ ರಂಗದಲ್ಲಿ ಎಸ್ಸಿ/ಎಸ್ಟಿಗಳಿಗೆ ಉದ್ಯೋಗ ದೊರಕಿಸಿಕೊಡುವ ಕೇಂದ್ರದ ಒಂದು ಪ್ರಯತ್ನ ಇದಾಗಿದೆ.

ಖಾಸಗಿ ರಂಗದಲ್ಲಿರುವ ತಾರತಮ್ಯವನ್ನು ಹೋಗಲಾಡಿಸಿ, ತುಳಿತಕ್ಕೊಳಗಾದವರ ಪರ ನಿಲ್ಲುವ ಸಲುವಾಗಿ 2006ರ ಅಕ್ಟೋಬರ್‌ನಲ್ಲಿ ಯುಪಿಎ-1 ಸರ್ಕಾರ ಉನ್ನತ ಮಟ್ಟದ ಸಮನ್ವಯ ಸಮಿತಿಯೊಂದನ್ನು ರಚನೆ ಮಾಡಿತ್ತು. 

ಪ್ರಧಾನಮಂತ್ರಿಗಳ ಪ್ರಧಾನ ಕಾರ್ಯದರ್ಶಿಗಳು ಅದರ ಮುಖ್ಯಸ್ಥರಾಗಿದ್ದರು. 2014ರ ಮೇವರೆಗೆ 7 ಸಭೆಗಳು ನಡೆದಿದ್ದವು. ನರೇಂದ್ರ ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಇದೇ ಮೊದಲ ಬಾರಿಗೆ ಸಭೆ ನಡೆದಿದ್ದು, ಸೆ.22ರಂದು ಪ್ರಧಾನಿ ಕಾರ್ಯಾಲಯದ ಪ್ರಧಾನ ಕಾರ್ಯ ದರ್ಶಿಗಳ ನೇತೃತ್ವದಲ್ಲಿ ಅಧಿಕಾರಿಗಳ ನಡುವೆ ಸಮಾಲೋಚನೆ ನಡೆದಿದೆ.

click me!