
ಬೆಂಗಳೂರು[ಜು.08]: ರಾಜ್ಯ ರಾಜಕಾರಣದಲ್ಲಿ ಮಹತ್ವದ ಬದಲಾವಣೆಗಳಾಗುತ್ತಿದ್ದು, ಒಬ್ಬರಾದ ಮತ್ತೊಬ್ಬರಂತೆ ಹಲವು ಶಾಸಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದಾರೆ. ಇವೆಲ್ಲದರ ಬೆನ್ನಲ್ಲೇ ಮಾಜಿ ಸಿಎಂ ಸಿದ್ದರಾಮಯ್ಯ ಮಾಧ್ಯಮಗಳಿಗೆ ಪ್ರತಿಕ್ರಿಯಿಸುತ್ತಾ 'ಮುಂಬೈನಲ್ಲಿರೋ 14 ಅತೃಪ್ತರಿಗೂ ಆಫರ್ ಇಲ್ಲ. ಆದರೆ ಸಚಿವ ಸ್ಥಾನ ಆಸೆಯಲ್ಲಿರುವವರಿಗೆ ಮಾತ್ರ ಮಂತ್ರಿಗಿರಿ ಆಫರ್ ಇದೆ' ಎಂಬ ಸ್ಪಷ್ಟ ಸಂದೇಶ ರವಾನಿಸಿದ್ದಾರೆ. ಈ ಮೂಲಕ ಸರ್ಕಾರ ಉಳಿಸಲು ಕಟ್ಟ ಕಡೆಯ ದಾಳ ಎಸೆದಿದ್ದಾರೆ
"
ಹೌದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ. ಸಿ. ವೇಣುಗೋಪಾಲ್ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಮಾಧ್ಯಮಗಳಿಗೆ ಪ್ರತಿಕ್ರಿಯಿಸುತ್ತಾ 'ಮುಂಬೈ ನಲ್ಲಿ ಇರೋರೆಲ್ಲ ವಾಪಸ್ ಬರಲಿ ಅಂತ ನಾನು ಆಫರ್ ಮಾಡ್ತಿಲ್ಲ ಆದರೆ ಯಾರು ಅಸಮಾಧಾನಗೊಂಡಿದ್ದಾರೋ ಅವರನ್ನ ಆಹ್ವಾನಿಸ್ತಿದ್ದೇವೆ. ನಾವು ಮುಂಬೈಗೆ ಹೋಗಲ್ಲ. ಮಂತ್ರಿಯಾಗುವ ಆಕಾಂಕ್ಷೆ ಇದ್ದರೆ ಅವರೇ ಬರ್ತಾರೆ' ಎನ್ನುವ ಮೂಲಕ ಸಚಿವ ಸ್ಥಾನ ಆಸೆಯಲ್ಲಿದ್ದವರಿಗೆ ಆಫರ್ ಕೊಟ್ಟಿದ್ದಾರೆ.
ಕರ್ನಾಟಕ ರಾಜಕಾರಣದಲ್ಲಿ ಅಲ್ಲೋಲ ಕಲ್ಲೋಲ: ಎಲ್ಲಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ
ಇದೇ ವೆಳೆ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ 'ಬಿಜೆಪಿಗೆ ಜನಾದೇಶ ಇಲ್ಲದಿದ್ದರೂ ಕೇಂದ್ರ ಸರ್ಕಾರವನ್ನು ಬಳಸಿಕೊಳ್ಳುತ್ತಿದೆ. ಮೈತ್ರಿ ಸರ್ಕಾರವನ್ನು ಅಸ್ಥಿರಗೊಳಿಸಲು ಬಿಜೆಪಿ ಷಡ್ಯಂತ್ರ ನಡೆಸಿದೆ. ಕೇಂದ್ರ ಸರ್ಕಾರ ಏಜೆನ್ಸಿಗಳನ್ನು ದುರುಪಯೋಗಪಡಿಸಿಕೊಂಡು ಸರ್ಕಾರ ಪತನಕ್ಕೆ ಸಂಚು ರೂಪಿಸುತ್ತಿದೆ. ಪ್ರಧಾನಿ ಮೋದಿ, ಅಮಿತ್ ಶಾ ಕುಮ್ಮಕ್ಕಿನಿಂದ ಸರ್ಕಾರ ಅಸ್ಥಿರಕ್ಕೆ ಯತ್ನಿಸುತ್ತಿದ್ದಾರೆ. ಬಿಜೆಪಿ ಹೊಸ ನಾಟಕವಾಡುತ್ತಿದೆ, ನಮ್ಮ ಕೈವಾಡ ಇಲ್ಲ ಎನ್ನುತ್ತಿದೆ. ಹೋದಲ್ಲಿ ಬಂದಲ್ಲ ನಾವೇನು ಸನ್ಯಾನಿಗಳಲ್ವಾ ಅಂತಿದ್ದಾರೆ. ನಮ್ಮ ಶಾಸಕರನ್ನು ಹಣ, ಅಧಿಕಾರ, ಸಿಬಿಐ, ಐಟಿ, ಇಡಿ ಉಪಯೋಗಿಸಿಕೊಂಡು ಹೆದರಿಸುತ್ತಿದ್ದಾರೆ. ನಮ್ಮೆಲ್ಲ ಶಾಸಕರಿಂದ ರಾಜೀನಾಮೆ ಕೊಡಿಸಿದ್ದಾರೆ' ಎಂದು ಕಿಡಿ ಕಾರಿದ್ದಾರೆ.
ಅಲ್ಲದೇ 'ಬಿಜೆಪಿಗೆ ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಇಲ್ಲ. ಸಂಸದೀಯ ಪ್ರಜಾಪ್ರಭುತ್ವದ ಮೇಲೂ ನಂಬಿಕೆ ಇಲ್ಲ. ಕಳೆದ ಚುನಾವಣೆಯಲ್ಲಿ ರಾಜ್ಯದ ಜನತೆ ಜನಾದೇಶ ಕೊಟ್ಟಿಲ್ಲ. ಬಿಜೆಪಿಗಿಂತ ಕಾಂಗ್ರೆಸ್ಗೆ ಹೆಚ್ಚು ಮತ ಸಿಕ್ಕಿದೆ. ಬಿಜೆಪಿ ಸೀಟ್ ಹೆಚ್ಚು ಬಂದಿರಬಹುದು, ಬಿಜೆಪಿಗೆ 104, ಕಾಂಗ್ರೆಸ್- 80 ಬಂದಿತ್ತು. ಜೆಡಿಎಸ್ಗೆ 37 ಸ್ಥಾನ ಸಿಕ್ಕಿತ್ತು. ಆದರೂ, ಜೆಡಿಎಸ್-ಕಾಂಗ್ರೆಸ್ ಜತೆಗೂಡಿ ಸರ್ಕಾರ ರಚಿಸಿತು' ಎಂದಿದ್ದಾರೆ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.