ಧರೆ ಕುಸಿತ: ರಾತ್ರಿ ಇಡೀ ಆ್ಯಂಬುಲೆನ್ಸ್‌ನಲ್ಲಿ ಶವಗಳ ಜತೆ ಕೂತರು!

By Web DeskFirst Published Aug 12, 2019, 9:40 AM IST
Highlights

ಪ್ರವಾಹಕ್ಕೆ ತತ್ತರಿಸಿದ ಕಾಫೀನಾಡು| ಧರೆ ಕುಸಿತ: ರಾತ್ರಿ ಇಡೀ ಆ್ಯಂಬುಲೆನ್ಸ್‌ನಲ್ಲಿ ಶವಗಳ ಜತೆ ಕೂತರು!

ಚಿಕ್ಕಮಗಳೂರು[ಆ.12]: ಜಿಲ್ಲೆಯ ಮೂಡಿಗೆರೆ ತಾಲೂಕಿನಲ್ಲಿ ವರುಣನ ರುದ್ರನರ್ತನ ಶವ ಸಂಸ್ಕಾರಕ್ಕೂ ಅಡ್ಡಿಪಡಿಸಿತು. ಮನೆಗೆ ಹೋಗಲು ದಾರಿಯಿಲ್ಲದೆ ಇಡೀ ರಾತ್ರಿ ತಾಯಿ ಮತ್ತು ಮಗನ ಮೃತದೇಹಗಳು ಆ್ಯಂಬ್ಯುಲೆನ್ಸ್‌ಗಳಲ್ಲೇ ಇದ್ದವು.

ಮೂಡಿಗೆರೆ ತಾಲೂಕಿನ ಬಾಳೂರು ಹೊರಟ್ಟಿಗ್ರಾಮದ ಶೇಷಮ್ಮ (65) ಹಾಗೂ ಅವರ ಮಗ ಸತೀಶ್‌ (45) ಅವರು ನಡೆದುಕೊಂಡು ಹೋಗುವಾಗ ಧರೆ ಕುಸಿದು ಮೃತಪಟ್ಟಿದ್ದರು. ಈ ಇಬ್ಬರು ತಾಯಿ ಮತ್ತು ಮಗನ ಮೃತದೇಹಗಳನ್ನು ಮೂಡಿಗೆರೆಯ ಸರ್ಕಾರಿ ಆಸ್ಪತ್ರೆಗೆ ತಂದು ಶವ ಪರೀಕ್ಷೆ ನಡೆಸಿ ಶನಿವಾರ ಸಂಜೆಯೇ ಶೇಷಮ್ಮ ಅವರ ಅಳಿಯನಿಗೆ ಹಸ್ತಾಂತರ ಮಾಡಲಾಗಿತ್ತು.

ವರುಣನ ಅಬ್ಬರಕ್ಕೆ ಕರುನಾಡು ತತ್ತರ: ಮಳೆಗೆ ಸಂಬಂಧಿಸಿದ ಎಲ್ಲಾ ಸುದ್ದಿಗಳಿಗಾಗಿ ಕ್ಲಿಕ್ಕಿಸಿ

ಆದರೆ, ರಾತ್ರಿಯೇ ಮನೆಗೆ ತೆಗೆದುಕೊಂಡು ಹೋಗಲು ದಾರಿ ಇರಲಿಲ್ಲ, ಈ ಭಾಗದಲ್ಲಿ ಧರೆ ಕುಸಿದು ರಸ್ತೆ ಸಂಪರ್ಕ ಕಡಿತಗೊಂಡಿತ್ತು. ಭಾನುವಾರ ಬೆಳಿಗ್ಗೆ 9 ಗಂಟೆಯ ವೇಳೆಗೆ ರಸ್ತೆಯ ಮೇಲಿನ ಮಣ್ಣು ತೆರವುಗೊಳಿಸಿದ ನಂತರ ಮೃತ ದೇಹಗಳನ್ನು ಊರಿಗೆ ತೆಗೆದುಕೊಂಡು ಹೋಗಿ ಅಂತ್ಯಕ್ರಿಯೆ ನಡೆಸಲಾಯಿತು.

click me!