ರಾಸುಗಳಿಗೆ ಮೇವು ರವಾನಿಸಿದ ನಟಿ ಲೀಲಾವತಿ!

Published : Aug 12, 2019, 09:08 AM IST
ರಾಸುಗಳಿಗೆ ಮೇವು ರವಾನಿಸಿದ ನಟಿ ಲೀಲಾವತಿ!

ಸಾರಾಂಶ

ಪ್ರವಾಹ ಸಂತ್ರಸ್ತರಿಗೆ ವಿವಿಧ ಸಾಮಾಗ್ರಿಗಳನ್ನು ನೀಡಿ ಮಾನವೀಯತೆ ಮೆರೆದಿದ್ದ ಹಿರಿಯ ನಟಿ ಲೀಲಾವತಿ ಇದೀಗ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ರಾಸುಗಳಿಗೆ ಮೇವು ನೀಡಿದ್ದಾರೆ. 

ನೆಲಮಂಗಲ [ಆ.12]: ಉತ್ತರ ಕರ್ನಾಟಕದ ನೆರೆ ಸಂತ್ರಸ್ತರ ಜೊತೆಗೆ ಜಾನುವಾರುಗಳ ಮೂಕರೋದನೆಗೆ ಹಿರಿಯ ಚಿತ್ರನಟಿ ಡಾ.ಎಂ.ಲೀಲಾವತಿ, ಪುತ್ರ ವಿನೋದ್‌ರಾಜ್‌ ಸ್ಪಂದಿಸಿದ್ದಾರೆ.

ಜಾನುವಾರುಗಳಿಗಾಗಿ ಸ್ವಂತ ಖರ್ಚಿನಲ್ಲಿ ಜೋಳದ ಕಡ್ಡಿ ಖರೀದಿ ಮಾಡಿ ಮೇವನ್ನು ಲಾರಿಯಲ್ಲಿ ತುಂಬಿ ಕಳುಹಿಸಿ ಮಾನವೀಯತೆ ಮೆರೆದಿದ್ದಾರೆ.

ಕರ್ನಾಟಕ ಪ್ರವಾಹದ ಹೆಚ್ಚಿನ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ತಾಲೂಕಿನ ಸೋಲದೇವನಹಳ್ಳಿಯಲ್ಲಿ ತಮ್ಮ ಪುತ್ರನೊಟ್ಟಿಗೆ ನೆಲೆಸಿರುವ ಲೀಲಾವತಿ ಅವರು ಗ್ರಾಮದ ರೈತರು ಬೆಳೆದಿದ್ದ ಜೋಳದ ಕಡ್ಡಿಯನ್ನು ಖರೀದಿಸಿ ನೆರೆ ಹಾವಳಿಯಿಂದ ಬಳಲುತ್ತಲಿದ್ದ ರಾಸುಗಳಿಗೆ ಮೇವು ಸಿಗದಿರುವ ಆತಂಕಕಾರಿ ಅಂಶವನ್ನು ಅರ್ಥೈಸಿಕೊಂಡು ಮೇವನ್ನು ಸಾಗಿಸಲು ಮುಂದಾಗಿರುವುದು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

World Cancer Day 2026 ಭಾರತದಲ್ಲಿ ವರ್ಷದಲ್ಲಿ 14.1 ಲಕ್ಷ ಕ್ಯಾನ್ಸರ್‌ ಪ್ರಕರಣ ಪತ್ತೆ!
Vijayapura: ಮಗಳೇ ಮನೆಗೆ ಬಾರಮ್ಮಾ ಅಂದ್ರೆ ನಾನು ಮೊಹಮ್ಮದ್ ಸಲೀಂನ ಹೆಂಡ್ತಿ ಎಂದ ನಿಶಾ