ಪ್ರತಿಷ್ಠಿತ ಗಣ್ಯರಿಂದಲೇ ರಾಜಾಕಾಲುವೆ ಒತ್ತುವರಿ! ಹೈಫೈ ಕಳ್ಳರ ಅಕ್ರಮ ಅನಾವರಣ...

Published : Dec 12, 2016, 06:29 AM ISTUpdated : Apr 11, 2018, 01:06 PM IST
ಪ್ರತಿಷ್ಠಿತ ಗಣ್ಯರಿಂದಲೇ ರಾಜಾಕಾಲುವೆ ಒತ್ತುವರಿ! ಹೈಫೈ ಕಳ್ಳರ ಅಕ್ರಮ ಅನಾವರಣ...

ಸಾರಾಂಶ

ಬೆಂಗಳೂರಿನ ಪ್ರತಿಷ್ಠಿತ ಏರಿಯಾಗಳಲ್ಲಿ ಆರ್.ಟಿ.ನಗರವೂ ಒಂದು. ಇಲ್ಲಿನ ಲೇಔಟ್'​​ಗಳಲ್ಲಿ ಪ್ರತಿಷ್ಠಿತ ಗಣ್ಯರು, ಸಚಿವರು, ಶಾಸಕರು, ದೊಡ್ಡ ಬಿಲ್ಡರ್ಸ್​ಗಳು ವಾಸಿಸುತ್ತಿದ್ದಾರೆ. ಇಲ್ಲೂ ರಾಜಾಕಾಲುವೆ ಒತ್ತುವರಿ ಆಗಿದೆ. ಆದರೂ ಬಿಬಿಎಂಪಿ ಅಧಿಕಾರಿಗಳು ಮಾತ್ರ ಒತ್ತುವರಿಯ ಕಾಲುವೆ ತೆರವುಗೊಳಿಸಲು ಮುಂದಾಗುತ್ತಿಲ್ಲ. ಭೂ ದಾಖಲೆಗಳ ಜಂಟಿ ನಿರ್ದೇಶಕ ಜಯಪ್ರಕಾಶ್​ರವರು ವರದಿ ಕೊಟ್ಟು ತಿಂಗ್ಳು ಮೇಲಾಗಿದೆ. ಆದ್ರೂ ವರದಿ ಆಧರಿಸಿ ಕ್ರಮಕ್ಕೆ ಮುಂದಾಗಿಲ್ಲ.

ಬೆಂಗಳೂರು(ಡಿ.12): ಬೆಂಗಳೂರು ನಗರದ ಹಲವೆಡೆ ಒತ್ತುವರಿ ಆಗಿರುವ ರಾಜಾ ಕಾಲುವೆ ತೆರವು ಕಾರ್ಯಾಚರಣೆ ಪುನಃ ಶುರುವಾಗಿದೆ. ಇದ್ರ ಬೆನ್ನಲ್ಲೇ ಈಗ ಮತ್ತೊಂದು ಪ್ರತಿಷ್ಠಿತ ಬಡಾವಣೆಯಲ್ಲಿ ಅಪಾರ್ಟ್​ಮೆಂಟ್​, ರೆಸಾರ್ಟ್ಸ್​ಗಳು ರಾಜಾ ಕಾಲುವೆ ಒತ್ತುವರಿ ಮಾಡಿಕೊಂಡಿರುವುದು ಬಹಿರಂಗವಾಗಿದೆ. ಅವು ಯಾವುದು ಎನ್ನುವ ಎಕ್ಸ್'ಕ್ಲೂಸಿವ್ ವರದಿ ಇಲ್ಲಿದೆ.

ಆರ್​.ಟಿ.ನಗರದಲ್ಲಿ ಪ್ರತಿಷ್ಠಿತರಿಂದಲೇ ರಾಜಾಕಾಲುವೆ ಒತ್ತುವರಿ!

ಬೆಂಗಳೂರಿನ ಪ್ರತಿಷ್ಠಿತ ಏರಿಯಾಗಳಲ್ಲಿ ಆರ್.ಟಿ.ನಗರವೂ ಒಂದು. ಇಲ್ಲಿನ ಲೇಔಟ್'​​ಗಳಲ್ಲಿ ಪ್ರತಿಷ್ಠಿತ ಗಣ್ಯರು, ಸಚಿವರು, ಶಾಸಕರು, ದೊಡ್ಡ ಬಿಲ್ಡರ್ಸ್​ಗಳು ವಾಸಿಸುತ್ತಿದ್ದಾರೆ. ಇಲ್ಲೂ ರಾಜಾಕಾಲುವೆ ಒತ್ತುವರಿ ಆಗಿದೆ. ಆದರೂ ಬಿಬಿಎಂಪಿ ಅಧಿಕಾರಿಗಳು ಮಾತ್ರ ಒತ್ತುವರಿಯ ಕಾಲುವೆ ತೆರವುಗೊಳಿಸಲು ಮುಂದಾಗುತ್ತಿಲ್ಲ. ಭೂ ದಾಖಲೆಗಳ ಜಂಟಿ ನಿರ್ದೇಶಕ ಜಯಪ್ರಕಾಶ್​ರವರು ವರದಿ ಕೊಟ್ಟು ತಿಂಗ್ಳು ಮೇಲಾಗಿದೆ. ಆದ್ರೂ ವರದಿ ಆಧರಿಸಿ ಕ್ರಮಕ್ಕೆ ಮುಂದಾಗಿಲ್ಲ.

- ವೈಟ್​​ಹೌಸ್ ಅಪಾರ್ಟ್​ಮೆಂಟ್​

- ಒಟ್ಟು 9 1/2 ಗುಂಟೆ ಒತ್ತುವರಿ

- ಪಟೇಲ್​ ಇನ್ ರೆಸಾರ್ಟ್​​

- ಒಟ್ಟು 6 1/2 ಗುಂಟೆ ಒತ್ತುವರಿ

- ಎಂಬೆಸ್ಸಿ ಹೆವೆನ್​ ಅಪಾರ್ಟ್​ಮೆಂಟ್​

- ಒಟ್ಟು 5 ಗುಂಟೆ ಕಬಳಿಕೆ

- H.M.ಟ್ರಾಫಿಕಲ್​ ಟ್ರೀ ಅಪಾರ್ಟ್​ಮೆಂಟ್​

- ಒಟ್ಟು 10 ಗುಂಟೆ ರಾಜಾಕಾಲುವೆ ಒತ್ತುವರಿ

ಒತ್ತುವರಿಯ ವಿಸ್ತೀರ್ಣ ಒಟ್ಟು 31 ಗುಂಟೆ

30 ಅಡಿ ರಸ್ತೆ ಪಕ್ಕದಲ್ಲಿ ಸುಮಾರು 20 ಅಂತಸ್ತು, ಹೆಲಿಪ್ಯಾಡ್ ಉಳ್ಳ ಭವ್ಯವಾದ ಅಪಾರ್ಟ್‌ಮೆಂಟ್‌ಗಳನ್ನು ನಿರ್ಮಿಸುವ ಸಂಬಂಧ ಅನುಮತಿ ನೀಡುವ ವ್ಯವಸ್ಥೆಯನ್ನು ಅಗತ್ಯವಾಗಿ ಬದಲಾಯಿಸಬೇಕು. ಇಂತಹ ಅಪಾರ್ಟ್‌ಮೆಂಟ್ ಸಮುಚ್ಛಯ ಮೇಲೇಳುವುದರಿಂದ ಮೂಲಭೂತ ಸೌಕರ್ಯ ಇಲ್ಲದ ಅಕ್ಕಪಕ್ಕ ಪ್ರದೇಶದ ಮುಗ್ಧ ನಿವಾಸಿಗಳಿಗೆ ಆಗ್ತಿರೋ ತೊಂದರ ಬಗ್ಗೆ ತಾಂತ್ರಿಕ ವರದಿ ಸಿದ್ಧಪಡಿಸಬೇಕು. ಇಂತಹ ಒಂದು ಸಮುಚ್ಛಯ ಒಂದು ಹೋಬಳಿಗೆ ಸಮನಾಗಿದೆ. ಇವೆಲ್ಲವು ಸರ್ಕಾರಿ ನಿಯಮಗಳನ್ನು ಪಾಲಿಸಿದ್ದಾವೆಯೇ ಇಲ್ಲವೇ ಅನ್ನೋದ್ರ ಬಗ್ಗೆ ಖಾತ್ರಿಪಡಿಸಿಕೊಳ್ಳುವ ವ್ಯವಸ್ಥೆಯನ್ನು ಪರಿಣಾಮಕಾರಿಯಾಗಿ ಮಾಡ್ಬೇಕು ಅಂತ ಸೂಚಿಸಿದೆ.

ಒಟ್ನಲ್ಲಿ ಇಷ್ಟೆಲ್ಲಾ ಮಾಹಿತಿಯನ್ನು ದಾಖಲೆಗಳ ಸಮೇತ ಖಡಕ್​ ವರದಿ ನೀಡಿರುವ ಜತೆಗೆ ನೀಡಿರುವ ಶಿಫಾರಸ್ಸುಗಳನ್ನು ಜಾರಿಗೊಳಿಸ್ಲಿಕ್ಕೆ ಬಿಬಿಎಂಪಿ ಆಯುಕ್ತರು ಮುಂದಾಗಿಲ್ಲ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಬಳ್ಳಾರಿಯಲ್ಲಿ ಎಫ್‌ಡಿಎ ಸ್ಪರ್ಧಾತ್ಮಕ ಪರೀಕ್ಷೆ: ಕಾಲು ಗೆಜ್ಜೆ ತೆಗೆದು ಪರೀಕ್ಷೆ ಬರೆದ ವಿದ್ಯಾರ್ಥಿನಿಯರು
ಜವರಾಯನಂತೆ ಬಂತು ಜಲ್ಲಿಕಲ್ಲು ತುಂಬಿದ್ದ ಲಾರಿ: ಮನೆ ಮುಂದೆ ಚಳಿ ಕಾಯಿಸುತ್ತಿದ್ದ 90 ವರ್ಷದ ವೃದ್ಧ ಬಲಿ