
ಹಾಸನ(ಡಿ.12): ಅಪ್ರಾಪ್ತೆ ಬಾಲಕಿಯನ್ನು ಅಪಹರಿಸಿ ಮಾರಾಟಕ್ಕೆ ಯತ್ನಿಸಿ ಸಿಕ್ಕಿಬಿದ್ದ ಮೌಲ್ವಿಗೆ ಸಾರ್ವಜನಿಕರು ಧರ್ಮದೇಟು ನೀಡಿರುವ ಘಟನೆ ಹಾಸನ ಜಿಲ್ಲೆ ಹೊಳೆನರಸೀಪುರದಲ್ಲಿ ನಡೆದಿದೆ. ಮಹಮದ್ ಅಕ್ರಂ ಬಂಧಿತ ಧರ್ಮದೇಟು ತಿಂದ ಆರೋಪಿ.
ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲ್ಲೂಕಿನ ಕಾಗೇಕಾಡು ಮಗ್ಗೆ ಗ್ರಾಮದ ಮಹಮದ್ ಅಕ್ರಂ, ಜಾಂದಾಳ್ ಗ್ರಾಮದ ಮಸೀದಿಯಲ್ಲಿ ಮೌಲ್ವಿಯಾಗಿ ಕೆಲಸ ಮಾಡುತ್ತಿದ್ದ. ಅಲ್ಲದೇ ಅರೇಬಿಕ್ ಭಾಷೆ ಶಿಕ್ಷಕನಾಗಿದ್ದನು. ಎರಡು ದಿನದ ಹಿಂದೆ ಶಾಲೆಗೆ ಹೋಗಿದ್ದ ಬಾಲಕಿಯನ್ನು ಮೌಲ್ವಿ ಅಪಹರಿಸಿದ್ದು, ಮಗಳು ಮನೆಗೆ ಬಾರದ ಕಾರಣ ಬಾಲಕಿಯ ಪೋಷಕರು ಪೊಲೀಸರಿಗೆ ದೂರು ನೀಡಿದ್ದರು.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಹೊಳೆನರಸೀಪುರ ಪೊಲೀಸರು ಮಹಮದ್ ಅಕ್ರಂನ ಮೊಬೈಲ್ ಸಂಖ್ಯೆಯನ್ನು ಆಧರಿಸಿ ಭದ್ರಾವತಿಯ ಲಾಡ್ಜ್ನಲ್ಲಿ ಇರುವುದನ್ನು ಪತ್ತೆಹಚ್ಚಿದ್ದರು. ಕೂಡಲೇ ಅಲ್ಲಿಗೆ ತೆರಳಿ ಆರೋಪಿಯನ್ನು ಬಂಧಿಸಿ ಹೊಳೆನರಸೀಪುರ ಠಾಣೆಗೆ ಕರೆತಂದರು. ಈ ವೇಳೆ ಜಮಾಯಿಸಿದ್ದ ಸಾರ್ವಜನಿಕರು, ಮೌಲ್ವಿಗೆ ಧರ್ಮದೇಟು ನೀಡಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.