ಗಡಿಯೊಳಗೆ ನುಸುಳಲು ಒಬ್ಬೊಬ್ಬ ಉಗ್ರರಿಗೆ ಪಾಕಿಸ್ತಾನ ನೀಡುವ ಹಣ ಎಷ್ಟು ಗೊತ್ತಾ?

Published : Dec 12, 2016, 06:28 AM ISTUpdated : Apr 11, 2018, 12:42 PM IST
ಗಡಿಯೊಳಗೆ ನುಸುಳಲು ಒಬ್ಬೊಬ್ಬ ಉಗ್ರರಿಗೆ ಪಾಕಿಸ್ತಾನ ನೀಡುವ ಹಣ ಎಷ್ಟು ಗೊತ್ತಾ?

ಸಾರಾಂಶ

ಭಾರತದ ಗಡಿಯೊಳಗೆ ನುಸುಳುವ ಒಬ್ಬೊಬ್ಬ ಉಗ್ರರಿಗೆ ಪಾಕಿಸ್ತಾನ ಒಂದೊಂದು ಕೋಟಿ ಕೊಡುತ್ತದೆ ಎಂದು ಪಿಒಕೆ ಮುಖಂಡ ಸರ್ದಾರ್ ರಯೀಸ್ ಇಂಕ್ಲಾಬಿ ಹೇಳಿರುವ ವಿಡಿಯೋ ದೃಶ್ಯ ಇಲ್ಲಿದೆ.

ನವದೆಹಲಿ(ಡಿ. 12): ಭಾರತದಲ್ಲಿ ಭಯೋತ್ಪಾದನೆಗೆ ಪಾಕಿಸ್ತಾನದ ಕುಮ್ಮಕ್ಕು ಇರುವುದು ಹೌದು. ಈ ವಿಷಯವಾಗಿ ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಭಾರತ ಪದೇಪದೇ ಪ್ರಸ್ತಾಪ ಮಾಡುತ್ತಲೇ ಇದೆ, ಸಾಕ್ಷ್ಯಾಧಾರಗಳನ್ನು ಒದಗಿಸುತ್ತಲೇ ಇದೆ. ಭಾರತದಲ್ಲಿ ಭಯೋತ್ಪಾದನೆ ಚಟುವಟಿಕೆ ನಡೆಸುವ ಬಹುತೇಕ ಉಗ್ರರು ಪಾಕಿಸ್ತಾನದಲ್ಲೇ ತರಬೇತಿ ಪಡೆದಿರುವ ಬಗ್ಗೆ ಹಲವು ಸಾಕ್ಷ್ಯಗಳು ಸಿಕ್ಕಿವೆ. ಆದರೆ, ಪಾಕಿಸ್ತಾನ ಮಾತ್ರ ಇದನ್ನು ಅಲ್ಲಗಳೆಯುತ್ತಲೇ ಬಂದಿದೆ. ಇದೀಗ, ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ದಾಖಲಾದ ವಿಡಿಯೋವೊಂದು ಈ ಬಗ್ಗೆ ಸ್ಪಷ್ಟ ಸಾಕ್ಷ್ಯ ಒದಗಿಸಿದೆ. ಭಾರತದ ಗಡಿಯೊಳಗೆ ನುಸುಳುವ ಒಬ್ಬೊಬ್ಬ ಉಗ್ರರಿಗೆ ಪಾಕಿಸ್ತಾನ ಒಂದೊಂದು ಕೋಟಿ ಕೊಡುತ್ತದೆ ಎಂದು ಪಿಒಕೆ ಮುಖಂಡ ಸರ್ದಾರ್ ರಯೀಸ್ ಇಂಕ್ಲಾಬಿ ಅವರು ಹೇಳುತ್ತಿರುವ ವಿಡಿಯೋ ದೃಶ್ಯವೊಂದನ್ನು ಎಎನ್'ಐ ಸುದ್ದಿ ಸಂಸ್ಥೆ ಇಂಟರ್ನೆಟ್'ಗೆ ಅಪ್ಲೋಡ್ ಮಾಡಿದೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ರಾತ್ರಿ ಕಣ್ಣೇ ಕಾಣೊಲ್ಲವೆಂದು ಹಗಲಿನಲ್ಲಿಯೇ ಕಿರುತೆರೆ ನಟ ಪ್ರವೀಣ್ ಮನೆಗೆ ಕನ್ನ ಹಾಕಿದ ಇರುಳು ಕುರುಡ!
ಜೂನಿಯರ್ ಇಂದಿರೆ, ಪ್ರಚಂಡ ಪ್ರಿಯಾಂಕಾ; ಬದ್ಧವೈರಿಗಳ ಬಾಯಲ್ಲೇ ಗುಣಗಾನ