
ರಾಂಚಿ: ಪಕ್ಕಾ ಸಂಪ್ರದಾಯಸ್ಥರಾಗಿರುವ ಆರ್ ಜೆಡಿ ಮುಖ್ಯಸ್ಥ ಲಾಲು, ನ್ಯಾಯಾಲಯದಲ್ಲಿ ಜಾಮೀನು ಕೋರಿ ಅರ್ಜಿ ಸಲ್ಲಿಸಲೂ ಶುಭ ಸಮಯಕ್ಕಾಗಿ ಕಾದಿದ್ದಾರೆ. ಹೌದು. ಮೇವು ಹಗರಣ ಸಂಬಂಧ ಡಿ.23ರಂದು ಲಾಲುಗೆ ನ್ಯಾಯಾಲಯ ಮೂರೂವರೆ ಜೈಲು ಶಿಕ್ಷೆ ವಿಧಿಸಿತ್ತು. ಪರಿಣಾಮ ಜೈಲು ಸೇರಿದ್ದಾರೆ.
ಆದರೆ ಇಷ್ಟು ದಿನವಾದರೂ ಲಾಲು ಇನ್ನೂ ಜಾಮೀನಿಗೆ ಅರ್ಜಿ ಸಲ್ಲಿಸಿಲ್ಲ. ಕಾರಣ ಪವಿತ್ರ ಕಾರ್ಯಗಳಿಗೆ ಶುಭವಲ್ಲ ಎಂದು ಹೇಳಲಾದ ಧನುರ್ಮಾಸ. ಡಿ.14ರಿಂದ ಜ.14ರವರೆಗೆ ಧನುರ್ಮಾಸವಿದ್ದು, ಈ ಅವಧಿಯಲ್ಲಿ ಜಾಮೀನಿಗೆ ಅರ್ಜಿ ಸಲ್ಲಿಸದಂತೆ ಲಾಲು ತಮ್ಮ ವಕೀಲರಿಗೆ ಸೂಚಿಸಿದ್ದಾರಂತೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.