
ನ್ಯೂಯಾರ್ಕ್(ಸೆ.21): ಫೋರ್ಬ್ಸ್ ಮ್ಯಾಗಜಿನ್ ಬಿಡುಗಡೆಗೊಳಿಸಿರುವ ವಿಶ್ವದ ‘100 ಶ್ರೇಷ್ಠ ಉದ್ಯಮಿಗಳು’ ಪಟ್ಟಿಯಲ್ಲಿ ಭಾರತದ 3 ಖ್ಯಾತ ಉದ್ಯಮಿಗಳ ಹೆಸರು ದಾಖಲಾಗಿದೆ. ಆರ್ಸೆಲರ್ ಮಿತ್ತಲ್ ಸಿಇಒ ಲಕ್ಷ್ಮೀ ಮಿತ್ತಲ್, ಟಾಟಾ ಗ್ರೂಪ್'ನ ವಿಶ್ರಾಂತ ಅಧ್ಯಕ್ಷ ರತನ್ ಟಾಟಾ ಮತ್ತು ಸನ್ ಮೈಕ್ರೊಸಿಸ್ಟಮ್ಸ್'ನ ಸಹ ಸಂಸ್ಥಾಪಕ ವಿನೋದ್ ಖೋಸ್ಲಾ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.
ಉದ್ಯಮ ವಲಯದಲ್ಲಿ ತಮ್ಮದೇ ಛಾಪು ಮೂಡಿಸಿ, ಉದ್ಯಮ ದಂತಕತೆಗಳೆನಿಸಿದ ಪ್ರಸ್ತುತ ಜೀವಂತವಿರುವ ಉದ್ಯಮಿಗಳನ್ನು ಈ ಶ್ರೇಷ್ಠ ಉದ್ಯಮಿಗಳ ಪಟ್ಟಿಯಲ್ಲಿಗೆ ಸೇರಿಸಲಾಗಿದೆ. ಈ ವಿಶಿಷ್ಟರ ಪಟ್ಟಿಯಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಅಮೇಜಾನ್ ಸಂಸ್ಥಾಪಕ ಜೆಫ್ ಬೆಜೋಸ್, ವರ್ಜಿನ್ ಗ್ರೂಪ್ ರಿಚರ್ಡ್ ಬ್ರಾನ್ಸನ್, ಬರ್ಕ್'ಶೈರ್ ಹ್ಯಾಥ್'ವೇ ಸಿಇಒ ವಾರನ್ ಬೆಟ್, ಮೈಕ್ರೊಸಾಫ್ಟ್ ಸಹ ಸಂಸ್ಥಾಪಕ ಬಿಲ್ ಗೇಟ್ಸ್ ಮತ್ತು ನ್ಯೂಸ್ ಕಾರ್ಪ್ ಅಧ್ಯಕ್ಷ ಮರ್ಡೊಕ್ ಮುಂತಾದವರೂ ಇದ್ದಾರೆ.
ಫೋರ್ಬ್ಸ್ ತನ್ನ ಶತಮಾನೋತ್ಸವ ಸ್ಮರಣಾರ್ಥ 100 ಉದ್ಯಮಿಗಳ ಚಿಂತನೆ, ಬಂಡವಾಳ ಕುರಿತ ಯೋಚನೆಗಳ ಕುರಿತ ಎನ್'ಸೈಕ್ಲೊಪೀ ಡಿಯಾ ಮಾದರಿಯ ಲೇಖನಗಳನ್ನು ಸಂಗ್ರಹಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.