
ತುಮಕೂರು : ತುಮಕೂರಿನ ಪಾವಗಡದಲ್ಲಿ ನಡೆಯುತ್ತಿದೆ ಅಂಧ ದರ್ಬಾರ್. ಉತ್ತರ ಪ್ರದೇಶ, ಬಿಹಾರ ರಾಜ್ಯಗಳಂತೆ ಹೆಣ್ಣು ಮಕ್ಕಳನ್ನು ಹೊತ್ತೊಯ್ದು ಅತ್ಯಾಚಾರ ನಡೆಸುತ್ತಿರುವ ಹೇಯ ಕೃತ್ಯ ಬೆಳಕಿಗೆ ಇಲ್ಲಿ ಬಂದಿದೆ.
ಮಾಜಿ ಶಾಸಕರೊಬ್ಬರ ಬೆಂಬಲಿಗರಿಂದ ದೌರ್ಜನ್ಯ ನಡೆಯುತ್ತಿದೆ. ಅಂಗನವಾಡಿ ಟೀಚರ್ ಪಾತ್ರೆ ತೊಳೆಯುವಾಗ ಕಿಡ್ನಾಪ್ ಮಾಡಿ ಗಂಡನ ಎದುರೇ ಎಳೆದಾಡಿದ್ದಾರೆ. ಬಾರದಿದ್ದಲ್ಲಿ ನಡುರಸ್ತೆಯಲ್ಲಿ ಅತ್ಯಾಚಾರ ಎಸಗುವುದಾಗಿ ಬೆದರಿಕೆಯನ್ನು ಹಾಕಲಾಗುತ್ತಿದೆ.
ಈ ಬಗ್ಗೆ ನೊಂದ ಮಹಿಳೆಯೋರ್ವರು ಮಹಿಳಾ ಆಯೋಗಕ್ಕೆ ದೂರು ನೀಡಿದ್ದು, ಹೆಣ್ಣು ಮಕ್ಕಳನ್ನು ಐದಾರು ದಿನಗಳ ಕಾಲ ಹೊತ್ತೊಯ್ದು ನಂತರ ವಾಪಸ್ ಕರೆತಂದು ಬಿಡಲಾಗಿದೆ. ಈ ಬಗ್ಗೆ ಪೊಲೀಸರು ಸಹ ದೂರನ್ನು ದಾಖಲಿಸಿಕೊಳ್ಳುವುದಿಲ್ಲ.
ಇಂತಹ ಹೇಯ ಕೃತ್ಯ ನಡೆಯುತ್ತಿದ್ದರೂ ಕೂಡ ಇಲ್ಲಿನ ಹೆಣ್ಣುಮಕ್ಕಳು ಈ ವಿಚಾರವನ್ನು ಬಾಯಿ ಬಿಡಲು ಹೆದರುತ್ತಿದ್ದಾರೆ. ಸದ್ಯ ಇಂತಹ ಐದು ಪ್ರಕರಣಗಳು ಬೆಳಕಿಗೆ ಬಂದಿವೆ. ಈ ಘಟನೆಯ ಬಗ್ಗೆ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಬಾಯಿ ಮಾಹಿತಿ ಪಡೆದು ಮಹಿಳೆಯರನ್ನು ರಕ್ಷಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.