
ಕುವೈತ್(ಜ.25): ಕುವೈತ್ ರಾಜ ಕುಟುಂಬಸ್ಥರೊಬ್ಬರು ಸೇರಿದಂತೆ ಏಳು ಆಪರಾಧಿಗಳನ್ನು ಕುವೈತ್‌ನಲ್ಲಿ ಬುಧವಾರ ಸಾಮೂಹಿಕವಾಗಿ ಗಲ್ಲಿಗೇರಿಸಲಾಗಿದೆ. ರಾಜಮನೆತನದ ಫೈಸಲ್ ಅಬ್ದುಲ್ಲಾ ಅಲ್ ಜಬರ್ ಅಲ್ ಸಬಹ್ ಎಂಬ ಅಪರಾಧಿ ತನ್ನ ಸಹೋದರ ಸಂಬಂಧಿಯನ್ನು 2010ರಲ್ಲಿ ಹತ್ಯೆಗೈದ ಆರೋಪದ ದೋಷಿ ಎಂದು ಘೋಷಿಸಲ್ಪಟ್ಟಿದ್ದರು. ಅರಬ್ ರಾಷ್ಟ್ರಗಳಲ್ಲಿ ದೊರೆವಂಶಸ್ಥರನ್ನು ಗಲ್ಲಿಗೇರಿಸುವುದು ಅಪರೂಪದ ಸಂಗತಿಯಾಗಿದೆ. ಮರಣದಂಡನೆಗೆ ಗುರಿಯಾದ 7 ಅಪರಾಧಿಗಳಲ್ಲಿ ಬಾಂಗ್ಲಾದೇಶ, ಫಿಲಿಪ್ಪೀನ್ಸ್, ಇಥಿಯೋಪಿಯಾದ ತಲಾ ಒಬ್ಬರು, ಈಜಿಪ್ಟ್‌ನ ಇಬ್ಬರು ಹಾಗೂ ಮಹಿಳೆಯೂ ಸೇರಿದ್ದಾರೆ. ಬಾಂಗ್ಲಾದ ಒಬ್ಬ ಅತ್ಯಾಚಾರಿ ಬಿಟ್ಟರೆ ಎಲ್ಲ ಅಪರಾಧಿಗಳೂ ಕೊಲೆಗೈದವರೇ ಎಂದು ಮೂಲಗಳು ತಿಳಿಸಿದೆ. 2009ರಲ್ಲಿ ಆರೋಪಿ ಮಹಿಳೆ ಪತಿ ಎರಡನೇ ವಿವಾಹವಾಗುತ್ತಿದ್ದಾರೆಂದು ಇಡೀ ಕಲ್ಯಾಣ ಮಂಟಪಕ್ಕೆ ಬೆಂಕಿ ಹಾಕಿದ್ದರು, ಈ ವೇಳೆ ಮಕ್ಕಳು, ಮಹಿಳೆಯರು ಸೇರಿಂದತೆ 58 ಮಂದಿ ಅಸುನೀಗಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.