ಹಳೆ ನೋಟು ಬದಲಾವಣೆಗೆ ಮತ್ತೊಂದು ಅವಕಾಶ?

By Suvarna Web DeskFirst Published Jan 25, 2017, 5:40 PM IST
Highlights

ಡಿ.30ರ ಗಡುವು ಮುಗಿಯುವುದರೊಳಗೆ ನೋಟುಗಳನ್ನು ಠೇವಣಿ ಇಡಲು ವಿಲರಾದವರು ಮತ್ತೊಂದು ಅವಕಾಶ ನೀಡುವಂತೆ ಆರ್‌ಬಿಐಗೆ ಕೋರಿಕೊಂಡಿದ್ದಾರೆ. ಇಂತಹ ಮನವಿಗಳ ಸುರಿಮಳೆಯೇ ಆಗುತ್ತಿರುವ ಕಾರಣ, ಆರ್‌ಬಿಐ ಸಣ್ಣ ಮೊತ್ತ ಅಂದರೆ ರೂ.3 ಸಾವಿರದಷ್ಟು ಮೊತ್ತವನ್ನು ಠೇವಣಿ ಇಡಲು ಕೆಲವು ದಿನಗಳವರೆಗೆ ಅವಕಾಶ ಕಲ್ಪಿಸುವ ಸಾಧ್ಯತೆಯಿದೆ. ಅವಕಾಶದ ದುರುಪಯೋಗ ಆಗಕೂಡದ ಎಂಬ ಉದ್ದೇಶದಿಂದ ಆರ್‌ಬಿಐ ಎಚ್ಚರಿಕೆಯ ಹೆಜ್ಜೆಯಿಡುತ್ತಿದೆ ಎಂದು ಮೂಲಗಳು ತಿಳಿಸಿವೆ.

ನವದೆಹಲಿ(ಜ.25): ಅಮಾನ್ಯಗೊಂಡ 500 ರೂ. ಹಾಗೂ 1000 ರೂ. ಮುಖಬೆಲೆಯ ನೋಟುಗಳ ಬದಲಾವಣೆಗೆ ಮತ್ತೊಂದು ಅವಕಾಶ ನೀಡಲು ‘ಭಾರತೀಯ ರಿಸರ್ವ್ ಬ್ಯಾಂಕ್(ಆರ್‌ಬಿಐ) ಚಿಂತನೆ ನಡೆಸಿದೆ. ಆದರೆ, ಅಲ್ಪ ಪ್ರಮಾಣದ ಮೊತ್ತವನ್ನಷ್ಟೇ ಠೇವಣಿ ಇಡಲು ಅವಕಾಶ ಸಿಗುವ ಸಾಧ್ಯತೆಯಿದೆ ಎಂದು ಆಂಗ್ಲ ಪತ್ರಿಕೆಯೊಂದು ವರದಿ ಮಾಡಿದೆ.

ಡಿ.30ರ ಗಡುವು ಮುಗಿಯುವುದರೊಳಗೆ ನೋಟುಗಳನ್ನು ಠೇವಣಿ ಇಡಲು ವಿಲರಾದವರು ಮತ್ತೊಂದು ಅವಕಾಶ ನೀಡುವಂತೆ ಆರ್‌ಬಿಐಗೆ ಕೋರಿಕೊಂಡಿದ್ದಾರೆ. ಇಂತಹ ಮನವಿಗಳ ಸುರಿಮಳೆಯೇ ಆಗುತ್ತಿರುವ ಕಾರಣ, ಆರ್‌ಬಿಐ ಸಣ್ಣ ಮೊತ್ತ ಅಂದರೆ ರೂ.3 ಸಾವಿರದಷ್ಟು ಮೊತ್ತವನ್ನು ಠೇವಣಿ ಇಡಲು ಕೆಲವು ದಿನಗಳವರೆಗೆ ಅವಕಾಶ ಕಲ್ಪಿಸುವ ಸಾಧ್ಯತೆಯಿದೆ. ಅವಕಾಶದ ದುರುಪಯೋಗ ಆಗಕೂಡದ ಎಂಬ ಉದ್ದೇಶದಿಂದ ಆರ್‌ಬಿಐ ಎಚ್ಚರಿಕೆಯ ಹೆಜ್ಜೆಯಿಡುತ್ತಿದೆ ಎಂದು ಮೂಲಗಳು ತಿಳಿಸಿವೆ.

Latest Videos

ಗಡುವು ಮುಗಿದ ಬಳಿಕವೂ ಎಷ್ಟೋ ಮಂದಿ ತಮ್ಮ ಮನೆಯಲ್ಲಿ ಅಲ್ಲಿಲ್ಲಿ ಇಟ್ಟ ನೋಟುಗಳನ್ನು ತಂದು ಆರ್‌ಬಿಐ ಮುಂದೆ ಸರತಿಯಲ್ಲಿ ನಿಂತಿದ್ದಾರೆ. ಪುಸ್ತಕವೊಂದರ ಒಳಗೆ ರೂ.1 ಸಾವಿರದ ನೋಟು ಸಿಕ್ಕಿದೆ ಎಂದು ವ್ಯಕ್ತಿಯೊಬ್ಬರು ಆರ್‌ಬಿಐಗೆ ‘ಧಾವಿಸಿದ್ದನ್ನೂ ಇಲ್ಲಿ ಸ್ಮರಿಸಬಹುದು.

click me!