ಎಸ್'ಟಿಗೆ ಕುರುಬ ಸಮುದಾಯ ಸೇರಿಸಲು ಆಗ್ರಹ

By Web Desk  |  First Published Jul 15, 2018, 10:32 PM IST
  • ಶ್ರೀಕನಕಗುರುಪೀಠದಲ್ಲಿ ಶ್ರೀಗಳ ನೇತೃತ್ವದಲ್ಲಿ ಸಂಘದ ಮುಖಂಡರು ನಡೆಸಿದ ಪೂರ್ವಭಾವಿ ಸಭೆ
  •  ಮನವಿಯನ್ನು ಪರಿಗಣಿಸದಿದ್ದರೆ ಹೋರಾಟ ತೀವ್ರಗೊಳಿಸುವುದಾಗಿ ಎಚ್ಚರಿಕೆ

ಕೊಪ್ಪಳ[ಜು.15]: ಕುರುಬ ಸಮುದಾಯವನ್ನು ಎಸ್ ಟಿ ಸಮುದಾಯಕ್ಕೆ ಸೇರಿಸಲು ಹಾಲುಮತ ಮಹಾಸಭಾ ಸರ್ಕಾರವನ್ನು ಆಗ್ರಹಿಸಿದೆ.

ಕುರುಬರ ಶಕ್ತಿಕೇಂದ್ರ ಶ್ರೀಕನಕಗುರುಪೀಠದಲ್ಲಿ ಶ್ರೀಗಳ ನೇತೃತ್ವದಲ್ಲಿ ನಡೆದ ಸಂಘದ ಪೂರ್ವಭಾವಿ ಸಭೆಯಲ್ಲಿ ಸಮುದಾಯವನ್ನು ಎಸ್ ಟಿಗೆ ಸೇರಿಸುವುದರ ಜೊತೆಗೆ ಹಲವು ನಿರ್ಣಯಗಳನ್ನು ಕೈಗೊಂಡರು.

Tap to resize

Latest Videos

ಕುರುಬರಿಗೆ ಎಸ್. ಟಿ ಮೀಸಲಾತಿ ಬೇಕು ಎಂಬ ಕೂಗನ್ನು ಸಂವಾದ, ಜನಾಭಿಪ್ರಾಯ ಸಭೆಗಳು, ಸಮಾವೇಶ, ಧರಣಿಗಳ ಮೂಲಕ ಸರ್ಕಾರಕ್ಕೆ ಹಲವು ಬಾರಿ ಮುಟ್ಟಿಸಲಾಗಿದೆ. ಆದರೆ ಸಮುದಾಯದ ಕೂಗನ್ನು ಸರ್ಕಾರಗಳು ಇಲ್ಲಿಯವರೆಗೂ ಪರಿಗಣಿಸಿಲ್ಲ. ಇನ್ನಾದರೂ ಸಮುದಾಯದ ಮನವಿಯನ್ನು ಪರಿಗಣಿಸದಿದ್ದರೆ ಹೋರಾಟ ತೀವ್ರಗೊಳಿಸುವುದಾಗಿ ಮುಖಂಡರು ಎಚ್ಚರಿಸಿದರು.

click me!