ಹಫೀಜ್ ಸಯೀದ್'ಗೆ ಶಾಕ್ ಕೊಟ್ಟ ಮಾರ್ಕ್ ಜುಕರ್ ಬರ್ಗ್

By Web DeskFirst Published Jul 15, 2018, 7:51 PM IST
Highlights
  • ಎಲ್ ಇಟಿ ಬೆಂಬಲಿತ ಮಿಲ್ಲಿ ಮುಸ್ಲಿಂ ಲೀಗ್ ಪಕ್ಷದ ಬಹುತೇಕ ಎಫ್ ಬಿ ಖಾತೆಗಳು ರದ್ದು
  • ಶಾಂತಿಯುತ ಚುನಾವಣೆ ನಡೆಸುವುದರ ಹಿನ್ನಲೆಯಲ್ಲಿ ಈ ಕ್ರಮ ಜಾರಿ 

ಲಾಹೋರ್ [ಜು.15]: ಪಾಕಿಸ್ತಾನದಲ್ಲಿ ಜು.25ರಂದು ನಡೆಯುವ ಸಾಮಾನ್ಯ ಚುನಾವಣೆ ಹಿನ್ನಲೆಯಲ್ಲಿ ಅಂತರಾಷ್ಟ್ರೀಯ ದೈತ್ಯ ಸಾಮಾಜಿಕ ಮಾಧ್ಯಮ ಫೇಸ್ ಬುಕ್ ಭಯೋತ್ಪಾದಕ ಸಂಘಟನೆ ಎಲ್ ಇಟಿಯ ಸಂಸ್ಥಾಪಕ ಹಫೀಜ್ ಸಯೀದ್'ಗೆ ಶಾಕ್ ನೀಡಿದೆ.

ಎಲ್ ಇಟಿ ಬೆಂಬಲಿತ ಮಿಲ್ಲಿ ಮುಸ್ಲಿಂ ಲೀಗ್ ಪಕ್ಷಕ್ಕೆ ಸೇರಿದ ನೂರಾರು ಖಾತೆಗಳು ಹಾಗೂ ಎಫ್ ಬಿ ಪುಟಗಳನ್ನು ರದ್ದು ಪಡಿಸಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಫೇಸ್ ಬುಕ್ ಸಂಸ್ಥಾಪಕ ಮಾರ್ಕ್ ಜುಕರ್'ಬರ್ಗ್, ಭಾರತ, ಪಾಕಿಸ್ತಾನ, ಬ್ರೆಜಿಲ್,ಮೆಕ್ಸಿಕೋ ಹಾಗೂ ವಿಶ್ವದ ಇತರೆಡೆ ಸಾಮಾನ್ಯ ಚುನಾವಣೆ ನಡೆಯಲಿದ್ದು, ಶಾಂತಿಯುತ ಹಾಗೂ ಮುನ್ನೆಚ್ಚರಿಕೆ ಕ್ರಮವಾಗಿ ಸಮಾಜದಲ್ಲಿ ಅಶಾಂತಿ ಉಂಟುಮಾಡಬಲ್ಲ ಶಕ್ತಿಗಳಿಗೆ ಸಂಬಂಧಿಸಿದ ಖಾತೆಗಳು ಹಾಗೂ ಪುಟಗಳನ್ನು ತೆಗೆದು ಹಾಕಿರುವುದಾಗಿ ತಿಳಿಸಿದ್ದಾರೆ. 

ಚುನಾವಣೆ ಪ್ರಕಟಣೆ ಮಾಡುವ ಮುನ್ನ ನಕಲಿ ಖಾತೆಗಳಿಗೆ ಸಂಬಂಧಿಸಿದ ಮಾಹಿತಿಗಾಗಿ ಫೇಸ್ ಬುಕ್ ಅಧಿಕಾರಿಗಳು ಪಾಕಿಸ್ತಾನದ ಚುನಾವಣಾ ಆಯೋಗದ ಸಲಹೆಯನ್ನು ಕೇಳಿದ್ದರು. ಎಲ್ಇ ಟಿ ಮುಖ್ಯಸ್ಥ ಹಫೀಜ್ ಸಯೀದ್ ತಮ್ಮ ಸಂಘಟನೆ  ಬೆಂಬಲಿತ ಎಂಎಂಎಲ್ ಪಕ್ಷದ 200 ಅಭ್ಯರ್ಥಿಗಳು ಪಾಕಿಸ್ತಾನದ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಪ್ರಕಟಿಸಿದ್ದರು.  ಹಫೀಜ್ ಮುಂಬೈ ತಾಜ್ ಹೋಟೆಲ್ ದಾಳಿಯ ರೂವಾರಿಯಾಗಿದ್ದು ಅಮೆರಿಕಾ ಕೂಡ ಈತನನ್ನು ಅಂತರಾಷ್ಟ್ರೀಯ ಭಯೋತ್ಪಾದಕ ಎಂದು ಘೋಷಿಸಿದೆ.   

click me!