ರದ್ದಾಗಿದ್ದ ಧರ್ಮ ಸಮ್ಮೇಳನ ನಡೆಸಲು ಕುಕ್ಕೆ ಸುಬ್ರಮ್ಹಣ್ಯ ಆಡಳಿತ ಮಂಡಳಿ ನಿರ್ಧಾರ

By Suvarna Web DeskFirst Published Dec 14, 2017, 4:03 PM IST
Highlights

ಕುಕ್ಕೆ ಸುಬ್ರಹ್ಮಣ್ಯದಲ್ಲಿ ರದ್ದಾಗಿದ್ದ ಧರ್ಮ ಸಮ್ಮೇಳನ ಮತ್ತೆ ನಡೆಸಲು ನಿರ್ಧಾರ ಮಾಡಲಾಗಿದೆ.  ಭಾರೀ ವಿವಾದದ ಬಳಿಕ ಕುಕ್ಕೆ ಸುಬ್ರಹ್ಮಣ್ಯ ಆಡಳಿತ ಮಂಡಳಿ ಧರ್ಮ ಸಮ್ಮೇಳನ ನಡೆಸಲು ನಿರ್ಧಾರ ಮಾಡಿದೆ.

ಮಂಗಳೂರು (ಡಿ.14): ಕುಕ್ಕೆ ಸುಬ್ರಹ್ಮಣ್ಯದಲ್ಲಿ ರದ್ದಾಗಿದ್ದ ಧರ್ಮ ಸಮ್ಮೇಳನ ಮತ್ತೆ ನಡೆಸಲು ನಿರ್ಧಾರ ಮಾಡಲಾಗಿದೆ.  ಭಾರೀ ವಿವಾದದ ಬಳಿಕ ಕುಕ್ಕೆ ಸುಬ್ರಹ್ಮಣ್ಯ ಆಡಳಿತ ಮಂಡಳಿ ಧರ್ಮ ಸಮ್ಮೇಳನ ನಡೆಸಲು ನಿರ್ಧಾರ ಮಾಡಿದೆ.

ಸುಳ್ಯ ಶಾಸಕ ಅಂಗಾರರನ್ನೇ ಅಧ್ಯಕ್ಷರನ್ನಾಗಿಸಿ ಧರ್ಮಸಮ್ಮೇಳನ ನಡೆಸಲಾಗುತ್ತಿದೆ. ಡಿಸೆಂಬರ್ 19 ರಿಂದ 24 ರವರೆಗೆ ನಡೆಯಲಿರುವ ಕಿರು ಷಷ್ಠಿ  ಆಯೋಜನೆಯಲ್ಲಿ ಧರ್ಮಸಮ್ಮೇಳನಕ್ಕೆ ಬಿಜೆಪಿ ಶಾಸಕ ಅಂಗಾರ ಅಧ್ಯಕ್ಷತೆ ಬಗ್ಗೆ ಭಿನ್ನಾಭಿಪ್ರಾಯ ಮೂಡಿತ್ತು.  ಅಂಗಾರ ಅಧ್ಯಕ್ಷತೆ ವಿರೋಧಿಸಿ ವ್ಯವಸ್ಥಾಪನಾ ಮಂಡಳಿ ಧರ್ಮಸಮ್ಮೇಳನವನ್ನು ರದ್ದು ಮಾಡಿತ್ತು.  ದೇವಸ್ಥಾನದ ಆಡಳಿತ ಮಂಡಳಿ ವಿರುದ್ಧ ಅಂಗಾರರವರು ಅಸಮಾಧಾನ ವ್ಯಕ್ತಪಡಿಸಿದ್ದರು.  

ಬಿಜೆಪಿ ಮತ್ತು ಹಿಂದೂ ಸಂಘಟನೆಗಳ ಆಕ್ರೋಶಕ್ಕೆ ಮಣಿದು ಸಮ್ಮೇಳನ ನಡೆಸಲು ದೇವಸ್ಥಾನದ ಆಡಳಿತ ಮಂಡಳಿ ನಿರ್ಧರಿಸಿದೆ. ಸುವರ್ಣ ನ್ಯೂಸ್ ಗೆ ಕುಕ್ಕೆ ವ್ಯವಸ್ಥಾಪನಾ ಮಂಡಳಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ ಹೇಳಿದ್ದಾರೆ.

ಇದರ ಬಗ್ಗೆ ಸುವರ್ಣ ನ್ಯೂಸ್ ಮೊದಲು ವರದಿ ಮಾಡಿತ್ತು. ಇದು ಸುವರ್ಣ ನ್ಯೂಸ್ ವರದಿಯ ಫಲಶೃತಿ.

 

click me!