ಕೆಎಸ್ಸಾರ್ಟಿಸಿ ಬಸ್ಸುಗಳಿಗೆ ಇನ್ಮುಂದೆ ಕೆಎಫ್'ಸಿ ಪವರ್

By Suvarna Web DeskFirst Published Oct 21, 2016, 9:56 AM IST
Highlights

ಕರ್ನಾಟಕದ ಕೆಎಸ್ಸಾರ್ಟಿಸಿ ಬಸ್ಸುಗಳಿಗೆ ಇದೇ ಬಯೋಡೀಸೆಲ್ ಅನ್ನು ಬಳಕೆ ಮಾಡಲಾಗುತ್ತದೆ ಎಂದು ಕೆಎಫ್'ಸಿ ಸಂಸ್ಥೆಯ ಪ್ರಕಟಣೆ ತಿಳಿಸಿದೆ.

ಬೆಂಗಳೂರು(ಅ. 21): ಕೆಂಟುಕಿ ಫ್ರೈಡ್ ಚಿಕನ್ ಸಂಸ್ಥೆಯು ಅದ್ವೈತ್ ಬಯೋಫುಯೆಲ್ ಸಂಸ್ಥೆಯೊಂದಿಗೆ ಕೈಜೋಡಿಸಿದೆ. ಅದರಂತೆ, ಕೆಎಫ್'ಸಿ ಹೋಟೆಲ್'ಗಳಲ್ಲಿ ಬಳಕೆಯಾಗುವ ಅಡುಗೆ ಎಣ್ಣೆಯನ್ನು ಬಳಸಿಕೊಂಡು ಬಯೋಡೀಸೆಲ್ ಆಗಿ ಪರಿವರ್ತಿಸುವ ಯೋಜನೆಯನ್ನು ಈ ಎರಡು ಸಂಸ್ಥೆಗಳು ಕೈಗೆತ್ತಿಕೊಂಡಿವೆ. ಕರ್ನಾಟಕದ ಕೆಎಸ್ಸಾರ್ಟಿಸಿ ಬಸ್ಸುಗಳಿಗೆ ಇದೇ ಬಯೋಡೀಸೆಲ್ ಅನ್ನು ಬಳಕೆ ಮಾಡಲಾಗುತ್ತದೆ ಎಂದು ಕೆಎಫ್'ಸಿ ಸಂಸ್ಥೆಯ ಪ್ರಕಟಣೆ ತಿಳಿಸಿದೆ.

ರೆಸ್ಟೋರೆಂಟ್'ವೊಂದು ಈ ಪ್ರಮಾಣದಲ್ಲಿ ಇಂತಹ ಪ್ರಯತ್ನವನ್ನು ನಡೆಸುತ್ತಿರುವುದು ದೇಶದಲ್ಲಿ ಇದೇ ಮೊದಲು ಎಂದು ಕೆಎಫ್'ಸಿ ಸಂಸ್ಥೆ ಹೇಳಿಕೊಂಡಿದೆ. ಕೆಎಸ್ಸಾರ್ಟಿಸಿಯಷ್ಟೇ ಅಲ್ಲ ಮುಂಬೈನ ಸಾರಿಗೆ ಬಸ್ ಸಂಸ್ಥೆ(ಬೆಸ್ಟ್) ಕೂಡ ಕೆಎಫ್'ಸಿ ಅಡುಗೆ ಎಣ್ಣೆಯಿಂದ ತಯಾರಾದ ಜೈವಿಕ ಇಂಧನವನ್ನೇ ಬಳಸಲು ಮುಂದಾಗಿದೆ.

click me!