ನಾಲ್ವರ ಗುಪ್ತಾಂಗಕ್ಕೆ ಪೆಟ್ರೋಲ್ ಇಂಜೆಕ್ಟ್ ಮಾಡಿದ ಪುಡಾರಿ ಪುಂಡರು

Published : Oct 21, 2016, 07:46 AM ISTUpdated : Apr 11, 2018, 12:57 PM IST
ನಾಲ್ವರ ಗುಪ್ತಾಂಗಕ್ಕೆ ಪೆಟ್ರೋಲ್ ಇಂಜೆಕ್ಟ್ ಮಾಡಿದ ಪುಡಾರಿ ಪುಂಡರು

ಸಾರಾಂಶ

ದುರುಳರು ಸಿರಿಂಜ್'ಗಳಿಗೆ ಪೆಟ್ರೋಲ್ ತುಂಬಿಸಿಕೊಂಡು ಆ ನಾಲ್ವರ ಮರ್ಮಾಂಗಕ್ಕೆ ಅನೇಕ ಬಾರಿ ಚುಚ್ಚುತ್ತಾರೆ. ಇವರ ಕ್ರೂರ ಕೃತ್ಯಕ್ಕೆ ಆ ನಾಲ್ವರು ಇನ್ನೂ ಕೂಡ ಗಂಭೀರ ಸ್ಥಿತಿಯಲ್ಲಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಗಾಜಿಯಾಬಾದ್(ಅ. 21): ಮೊಬೈಲ್ ಫೋನ್ ಕದ್ದಿದ್ದಾರೆಂಬ ಶಂಕೆಯ ಮೇರೆಗೆ ನಾಲ್ವರು ವ್ಯಕ್ತಿಗಳ ಮೇಲೆ ಹಲ್ಲೆ ನಡೆಸಿ ಅವರ ಗುಪ್ತಾಂಗಕ್ಕೆ ಪೆಟ್ರೋಲ್ ಇಂಜೆಕ್ಟ್ ಮಾಡಿದ ಹೇಯ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ. ಗಾಜಿಯಾಬಾದ್'ನ ಸ್ಥಳೀಯ ಸಮಾಜವಾದಿ ಪಕ್ಷದ ಮುಖಂಡರೊಬ್ಬರ ಸಹೋದರ ರಿಜ್ವಾನ್ ಮತ್ತವನ ಸ್ನೇಹಿತರು ಈ ಕೃತ್ಯ ಎಸಗಿದ್ದಾರೆನ್ನಲಾಗಿದೆ. ಹಲ್ಲೆಗೊಳಗಾದ ನಾಲ್ವರಲ್ಲಿ ಇಬ್ಬರು ಬಾಲಕರೂ ಇದ್ದಾರೆ. ರಿಜ್ವಾನ್ ಹಾಗೂ ಮತ್ತೊಬ್ಬ ಆರೋಪಿಯನ್ನು ಸದ್ಯ ಪೊಲೀಸರು ಬಂಧಿಸಿದ್ದಾರೆ.

ಹಾಲಿನ ಡೈರಿ ಇಟ್ಟುಕೊಂಡಿರುವ ರಿಜ್ವಾನ್ ಕಳೆದ ಶುಕ್ರವಾರ ತನ್ನ ಮೊಬೈಲ್ ಫೋನನ್ನು ಕಳೆದುಕೊಂಡಿರುತ್ತಾನೆ. ತನ್ನ ಅಂಗಡಿಯ ಪಕ್ಕದಲ್ಲಿರುವ ಜಹೀರ್ ಬೇಗ್(17), ಗುಲ್ಜಾರ್(16), ಫಿಮೋ(25) ಮತ್ತು ಫಿರೋಜ್(25) ಅವರು ಫೋನ್ ಕಳ್ಳತನ ಮಾಡಿರಬಹುದೆಂದ ಶಂಕಿಸಿ ಅವರ ಮೇಲೆ ಗಂಟೆಗಟ್ಟಲೆ ಹಲ್ಲೆ ನಡೆಸುತ್ತಾನೆ. ರಿಜ್ವಾನ್ ಜೊತೆಗೆ ಆತನ ಇಬ್ಬರು ಸ್ನೇಹಿತರಾದ ಅಖಿಲ್ ಮತ್ತು ನದೀಮ್ ಕೂಡ ಸೇರಿಕೊಂಡು ಹಲ್ಲೆ ಮಾಡುತ್ತಾರೆ. ಇಷ್ಟಕ್ಕೆ ನಿಲ್ಲಿಸದ ದುರುಳರು ಸಿರಿಂಜ್'ಗಳಿಗೆ ಪೆಟ್ರೋಲ್ ತುಂಬಿಸಿಕೊಂಡು ಆ ನಾಲ್ವರ ಮರ್ಮಾಂಗಕ್ಕೆ ಅನೇಕ ಬಾರಿ ಚುಚ್ಚುತ್ತಾರೆ. ಇವರ ಕ್ರೂರ ಕೃತ್ಯಕ್ಕೆ ಆ ನಾಲ್ವರು ಇನ್ನೂ ಕೂಡ ಗಂಭೀರ ಸ್ಥಿತಿಯಲ್ಲಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

8 ಕೋಟಿ ಮೌಲ್ಯದ ಆನ್‌ಲೈನ್ ವಂಚನೆ ಬಗ್ಗೆ ಡೆತ್‌ನೋಟ್ ಬರೆದಿಟ್ಟು ಗುಂಡು ಹಾರಿಸಿಕೊಂಡ ಮಾಜಿ ಐಜಿ
ಬರೋಬ್ಬರಿ 6 ವರ್ಷಗಳ ಬಳಿಕ ಸಂಚಾರಕ್ಕೆ ಮುಕ್ತವಾಗಲಿದೆ ಬೆಂಗಳೂರಿನ ಕಾಮರಾಜ್‌ ರಸ್ತೆ!