
ತುಮಕೂರು[ಜ.08] ಬರೋಬ್ಬರಿ 6.5 ಲಕ್ಷ ರೂ. ಮೌಲ್ಯದ ಒಡವೆಯನ್ನು ಹಿಂದುರುಗಿಸಿ ಕಂಡಕ್ಟರ್ ಒಬ್ಬರು ಪ್ರಾಮಾಣಿಕತೆ ಮೆರ೩ಎದಿದ್ದಾರೆ.
ಶಿರಾ ಡಿಪೋ ವ್ಯಾಪ್ತಿಯ ಶ್ರೀಧರ್ ಬಸ್ ನಲ್ಲಿ ದೊರೆತ ಒಡನವೆ ಮಾಲೀಕರಿಗೆ ಹಿಂದಿರುಗಿಸಿದ್ದಾರೆ. ಸೋಮವಾರ ರಾತ್ರಿ ಪಾವಗಡದಿಂದ ಬೆಂಗಳೂರು ಮಾರ್ಗವಾಗಿ ಸಂಚರಿಸಿದ್ದ ಪಾವಗಡ ನಿವಾಸಿ ನಾಗಲತಾ ಒಡವೆ ಇದ್ದ ವ್ಯಾನಿಟಿ ಬ್ಯಾಗನ್ನು ಬಸ್‌ನಲ್ಲೇ ಮರೆತು ಇಳಿದಿದ್ದರು. ಮಗಳ ಸೀಮಂತಕ್ಕಾಗಿ ನಾಗಲತಾ ಒಡವೆ ತೆಗೆದುಕೊಂಡು ಹೋಗುತ್ತಿದ್ದರು.
KSRTCಯಲ್ಲಿ ಖಾಲಿ ಹುದ್ದೆಗಳ ನೇಮಕಾತಿ: ಅರ್ಜಿ ಹಾಕಿ
ಬಸ್ ಡಿಪೋಗೆ ಹೋದಾಗ ಕಂಡಕ್ಟರ್ ಶ್ರೀಧರ್ ಅವರಿಗೆ ಬ್ಯಾಗ್ ಸಿಕ್ಕಿದೆ. ಬ್ಯಾಗ್ ತಂದು ಡಿಪೋ ಮೇಲಧಿಕಾರಿಗಳು ಹಾಗೂ ಪೊಲೀಸರಿಗೆ ಕಂಡಕ್ಟರ್ ನೀಡಿದ್ದಾರೆ. ನಂತರ ಮಹಿಳೆಗೆ ಕರೆ ಮಾಡಿ ಒಡವೆ ಹಿಂದಿರುಗಿಸಿದ್ದು ಜನರಿಂದ ಮೆಚ್ಚುಗೆ ವ್ಯಕ್ತವಾಗಿದೆ.
"
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.