
ಉಡುಪಿ(ನ.12): ತನ್ವೀರ್ ಶೇಟ್ ಅಶ್ಲೀಲ ಚಿತ್ರ ನೋಡಿಲ್ಲ ಅಂದ್ರೆ ಮತ್ಯಾರು ಮೀಡಿಯಾದವ್ರು ನೋಡಿದ್ರಾ ಅಂತ ವಿಧಾನ ಪರಿಷತ್ ವಿಪಕ್ಷ ನಾಯಕ ಈಶ್ವರಪ್ಪ ಪ್ರಶ್ನಿಸಿದ್ದಾರೆ. ಉಡುಪಿಯಲ್ಲಿ ಮಾತನಾಡಿದ ಅವರು, ಸಿಎಂ ಮಾದ್ಯಮದವರ ಮೇಲೆ ಮಾಡುತ್ತಿರುವ ಆರೋಪ ಸರಿಯಲ್ಲ.ಸಿದ್ದರಾಮಯ್ಯ ತಾನು ಸಿಎಂ ಅನ್ನೋದನ್ನೇ ಮರೆತಿದ್ದಾರೆ. ಶಿಕ್ಷಣ ಮಂತ್ರಿಯ ನಡವಳಿಕೆ ಬಗ್ಗೆ ಇಡೀ ರಾಜ್ಯವೇ ನೋಡ್ತಾ ಇದೆ. ತನ್ವೀರ್ ನಾಡಿನ ಕ್ಷಮೆ ಕೇಳಿ ರಾಜೀನಾಮೆ ನೀಡಬೇಕು ನಂತರ ಜನ ಕ್ಷಮಿಸಿದರೆ ಮತ್ತೆ ಅಧಿಕಾರಕ್ಕೆ ಬರಲಿ ಎಂದಿದ್ದಾರೆ. ರೆಡ್ಡಿ ಮಗಳ ಮದುವೆ ಖಾಸಗಿ ವಿಚಾರ ನಾನೇನೂ ಹೇಳಲ್ಲ ಎಂದಿರುವ ಈಶ್ವರಪ್ಪ,ಅವರಿಗೆ ನೂರಾರು ಕೋಟಿ ಸಣ್ಣ ವಿಚಾರ ಇರಬಹುದು. ಕೆಲವರಿಗೆ ಧರ್ಮ ಸ್ಥಳದಲ್ಲಿ ಮದುವೆ ಆಗೋದೂ ದೊಡ್ಡ ವಿಚಾರ ಆಗಿರುತ್ತೆ ಅಂತ ಟಾಂಗ್ ನೀಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.