
ಬೆಂಗಳೂರು(ಫೆ.20): ಸದಾ ಹಸನ್ಮುಖಿಯಾಗಿ ಸಾಧು ವ್ಯಕ್ತಿತ್ವದಿಂದ ಇರುವ ಕೃಷಿ ಸಚಿವ ಕೃಷ್ಣ ಬೈರೇಗೌಡ ಇಂದಿನ ಕಲಾಪದಲ್ಲಿ ವ್ಯಾಘ್ರರಾದರು. ಅವರ ಕೋಪಕ್ಕೆ ಕಾರಣವಾಗಿದ್ದು ವಿಧಾನಪರಿಷತ್ ಸದಸ್ಯ ಲೆಹರ್ ಸಿಂಗ್ ಒಂದು ಮಾತು ಕಾರಣವಾಯಿತು.
ವಿಧಾನ ಪರಿಷತ್'ನಲ್ಲಿ ಚರ್ಚೆ ನಡೆಯುತ್ತಿದ್ದಾಗ ಪರಿಷತ್ ಸದಸ್ಯ ಲೆಹರ್ ಸಿಂಗ್ ಮಾತನಾಡುತ್ತಾ 'ರಾಹುಲ್ ಗಾಂಧಿ ಬೇಲ್ ಮೇಲೆ ಹೊರಗಿದ್ದಾರೆ. ಏನಾದ್ರು ಹೆಚ್ಚು ಕಡಿಮೆ ಆದರೆ ಪಕ್ಷಕ್ಕೆ ಸಮಸ್ಯೆ ಆಗುತ್ತೆ. ರಾಹುಲ್ ಅವರನ್ನು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಿ ಕೃಷ್ಣಬೈರೇಗೌಡರನ್ನು ಆ ಪದವಿಯಲ್ಲಿ ಕೂರಿಸಿ ಎಂದು ಸಲಹೆ ನೀಡಿದರು.
ಇದರಿಂದ ಕಾಂಗ್ರೆಸ್ ಸದಸ್ಯರೆಲ್ಲರೂ ಸಿಟ್ಟಾದರು. ಕೃಷ್ಣ ಬೈರೇಗೌಡರಂತೂ ವ್ಯಾಘ್ರರಾಗಿ' ಜೈಲಿಗೆ ಹೋದವರನ್ನ ರಾಜ್ಯಾಧ್ಯಕ್ಷ ಮಾಡಿದ್ದೀರಾ. ನೀವು ನಮ್ಮ ಬಗ್ಗೆ ಮಾತಾಡಬೇಡಿ' ಎಂದಾಗ ಸಭಾಪತಿ ಮರಿತಿಬ್ಬೇಗೌಡ ಮಧ್ಯಪ್ರವೇಶಿಸಿ ರಾಹುಲ್ ಗಾಂಧಿ ಬಗ್ಗೆ ಮಾತನಾಡಿದ ಪದ ತೆಗಿಸಿದರು. ನಂತರ ರಾಜ್ಯಪಾಲರ ಭಾಷಣದ ಮೇಲೆ ಲೆಹರ್ ಸಿಂಗ್ ಚರ್ಚೆ ಮುಂದುವರಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.