
ಬೆಂಗಳೂರು(ಫೆ.20): ವ್ಯಕ್ತಿಯೋರ್ವನ ಮೇಲೆ ಹಲ್ಲೆ ನಡೆಸಿದ ಆರೋಪದಲ್ಲಿ ಪೊಲೀಸ್ ವಶದಲ್ಲಿರುವ ಶಾಸಕ ಎನ್.ಎ.ಹ್ಯಾರೀಸ್ ಪುತ್ರ ಮೊಹಮದ್ ನಲಪಾಡ್ ಪ್ರಕರಣದಲ್ಲಿ ನಂ.1 ಆರೋಪಿಯಾಗಿದ್ದಾನೆ.
ಹಲ್ಲೆ ನಡೆಸಿದ ಉಳಿದ ಆರೋಪಿಗಳಾದ ಅರುಣ್ ಬಾಬು 2ನೇ ಆರೋಪಿಯಾಗಿದ್ದಾನೆ. ಮೂರನೇ ಆರೋಪಿ ಶ್ರೀಕೃಷ್ಣ ಇನ್ನು ಸಿಕ್ಕಿಲ್ಲ. ಮಂಜುನಾಥ್, ಮೊಹಮ್ಮದ್ ಅಬ್ರಾಸ್ , ಬಾಲಕೃಷ್ಣ, ಅಭಿಷೇಕ್ ಹಾಗೂ ನಫೀ ಮೊಹಮ್ಮದ್ ನಾಸೀರ್ ಪ್ರಕರಣದ ಉಳಿದ ಆರೋಪಿಗಳಾಗಿದ್ದಾರೆ.
ಗ್ಯಾಂಗ್' ಸದಸ್ಯರ ಕೆಲಸವೇನು
ಮೊಹಮ್ಮದ್ ಹ್ಯಾರಿಸ್ ನಲಪಾಡ್: ಎಕ್ಸಿಕ್ಯೂಟಿವ್ ಡೈರೆಕ್ಟರ್, ನಲಪಾಡ್ ಗ್ರೂಪ್
ಅರುಣ್ ಬಾಬು: ಜ್ಯೂಸ್ ಅಂಗಡಿಯಲ್ಲಿ ಕೆಲಸ ಹಾಗೂ ಮಂಜುನಾಥ್ - ಕಾರು ಚಾಲಕ
ಮೊಹಮ್ಮದ್ ಅಬ್ರಾಸ್ : ಕೆಲಸ ಇಲ್ಲ,
ಅಭಿಷೇಕ - ಬಿಕಾಂ ಪದವೀಧರ, ಕೆಲಸವಿಲ್ಲ
ನಫೀ ಮೊಹಮ್ಮದ್ ನಾಸೀರ್ : ಜ್ಯೂಸ್ ಅಂಗಡಿಯಲ್ಲಿ ಕೆಲಸ ಏನೂ ಕೆಲಸ ಮಾಡದೇ ನಲಪಾಡ್ ಜತೆ ಸಹಚರರಂತೆ ಗೂಂಡಾ
ಗಲಾಟೆ ಮಾಡಿ ಎಸ್ಕೇಪ್ ಆಗಿದ್ದ ಗ್ಯಾಂಗ್
ವಿದ್ವತ್ ಹಾಗೂ ನಲಪಾಡ್ ಜಗಳ ಆರಂಭವಾಗುತ್ತಿದ್ದಂತೆ ಸಹಚರರು ವಿದ್ವತ್ ಮೇಲೆ ಅಮಾನುಷವಾಗಿ ಬಾಟೆಲ್'ಗಳಿಂದಲೂ ಸಹ ಹಲ್ಲೆ ನಡೆಸಿದ್ದರು. ವಿದ್ವತ್'ಗೆ ರಕ್ತ ಬರುತ್ತಿದ್ದಂತೆ ಕೆಲ ಹೊತ್ತಿನಲ್ಲಿಯೇ ಪರಾರಿ. ಇನ್ನೂ ಕೆಲವರು ನಲಪಾಡ್ ಜತೆಗೆ ಮಲ್ಯ ಆಸ್ಪತ್ರೆಗೆ ತೆರಳಿ ಅಲ್ಲಿಯೂ ಧಮಕಿ ಹಾಕಿದ್ದರು.
ರೌಡಿ ಪಟ್ಟಿಗೆ ನಲಪಾಡ್ ಅಂಡ್ ಗ್ಯಾಂಗ್..?
ನಲಪಾಡ್ ಅಂಡ್ ಗ್ಯಾಂಗ್ ಸದಸ್ಯರನ್ನು ಮುಲಾಜು ತೋರದೆ ರೌಡಿ ಶೀಟ್'ಗೆ ಸೇರಿಸಲು ಚಿಂತನೆ ನಡೆಸಲಾಗಿದ್ದು, ನಲಪಾಡ್ ಸೇರಿದಂತೆ ಎಲ್ಲಾ ಆರೋಪಿಗಳ ಪೂರ್ವಾಪರದ ಬಗ್ಗೆ ಪೊಲೀಸರು ಮಾಹಿತಿ ಸಂಗ್ರಹಿಸುತ್ತಿದ್ದಾರೆ.
ನಲಪಾಡ್ ಇತರರ ಸಹಚರರಿಗೆ ಶೋಧ..!
ತಲೆಮರೆಸಿಕೊಂಡಿರುವ ಇನ್ನುಳಿದ ಸಹಚರರಿಗೂ ಪೊಲಿಸರು ಶೋಧ ನಡೆಸುತ್ತಿದ್ದಾರೆ. ಸಂತ್ರಸ್ತ ವಿದ್ವತ್ ಮಾಹಿತಿ ಹಾಗೂ ಸಿಸಿ ಕ್ಯಾಮರಾ ದೃಶ್ಯ ಆಧರಿಸಿ ಈ ಬಗ್ಗೆ ಕ್ರಮ ಪ್ರಕರಣದಲ್ಲಿ ಇನ್ನೂ ಹಲವು ಆರೋಪಿಗಳನ್ನು ಪೊಲೀಸರು ಬಂಧಿಸುವ ಸಾಧ್ಯತೆಯಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.