ಹಳೆ ವಾಹನ ಬಳಕೆದಾರರಿಗೆ ಶಾಕಿಂಗ್ ನ್ಯೂಸ್

By Web DeskFirst Published Oct 22, 2018, 11:19 AM IST
Highlights

ನೀವು 15 ವರ್ಷದ ಹಳೆಯ ವಾಹನಗಳನ್ನು ಬಳಸುತ್ತಿದ್ದೀರಾ? ಹಾಗಾದ್ರೆ ಈ ಸ್ಟೋರಿ ಓದಲೇ ಬೇಕು.

ಬೆಂಗಳೂರು, [ಅ.22]: ರಾಜ್ಯದಲ್ಲಿ ವಾಯು ಮಾಲಿನ್ಯ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಇದಕ್ಕೆ ಕಡಿವಾಣ ಹಾಕಲು ರಾಜ್ಯ ವಾಯು ನಿಯಂತ್ರಣ ಮಂಡಳಿ ಮುಂದಾಗಿದೆ.

15 ವರ್ಷಕ್ಕಿಂತ ಹಳೆಯ ಪೆಟ್ರೋಲ್ ಹಾಗೂ ಡೀಸೆಲ್‌ ವಾಹನಗಳನ್ನ ನಿಷೇಧ ಮಾಡುವಂತೆ ರಾಜ್ಯ ವಾಯು ನಿಯಂತ್ರಣ ಮಂಡಳಿ ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದೆ. 2019ಕ್ಕೆ ಇಂಥದ್ದೊಂದು ನಿಯಮ ಜಾರಿಗೆ ತರಲು ಉದ್ದೇಶಿಸಿದೆ.

ರಸ್ತೆಗಿಳಿಯುವಂತಿಲ್ಲ ಕರ್ನಾಟಕದ 45 ಲಕ್ಷ ವಾಹನ?-ಪರೀಕ್ಷಿಸಿಕೊಳ್ಳಿ ನಿಮ್ಮ ಕಾರು-ಬೈಕ್!

ಸಾರಿಗೆ, ಬಿಬಿಎಂಪಿ, ಪೊಲೀಸ್ ಇಲಾಖೆ ಸಹಯೋಗದೊಂದಿಗೆ 48 ಅಂಶಗಳ ಮಾನದಂಡ ಆಧರಿಸಿ ಈ ನಿಯಮ ಜಾರಿ ತರಲಾಗುತ್ತಿದೆ. ಎಮಿಷನ್ ಟೆಸ್ಟ್ ನಲ್ಲಿ ಸುಮಾರು 14% ಪೆಟ್ರೋಲ್ ವೈಕಲ್ ಮತ್ತು 25% ಡೀಸೆಲ್‌ ವೈಕಲ್ ಗಳು ಸ್ಟ್ಯಾಂಡರ್ಡ್ ಗಿಂತ ಕಡಿಮೆ ಆಗಿದೆ ಎಂದು ಮಾಹಿತಿ ಸಿಕ್ಕಿದ್ದು, ಇದರಿಂದ ನಗರದಲ್ಲಿ ವಾಯುಮಾಲಿನ್ಯದ ಪ್ರಮಾಣ ಹೆಚ್ಚಾಗುತ್ತಿದೆ.

ದೆಹಲಿ ಬಳಿಕ ವಾಯುಮಾಲಿನ್ಯದಲ್ಲಿ ಬೆಂಗಳೂರು ಎರಡನೇ ಸ್ಥಾನದಲ್ಲಿದೆ. ಹೀಗಾಗಿ ಮುಂದಾಗುವ ಅನಾಹತಗಳನ್ನು ತಪ್ಪಿಸಲು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಹಲವು ಕಟ್ಟುನಿಟ್ಟು ಕ್ರಮಗಳ ಜಾರಿಗೆ ಒತ್ತಾಯಿಸಿ ಸರ್ಕಾರಕ್ಕೆ ಪತ್ರ ಬರೆದಿದೆ.

 ಒಂದು ವೇಳೆ ಈ ನಿಯಮ ಜಾರಿಗೆ ಬಂದರೆ ಸುಮಾರು 16 ಲಕ್ಷ ವಾಹನಗಳು ಗುಜರಿ ಸೇರುವುದು ಪಕ್ಕಾ. 

click me!