
ಶಬರಿಮಲೆ: ಕೇರಳದ ಪ್ರಸಿದ್ಧ ಪುಣ್ಯ ಕ್ಷೇತ್ರ ಶಬರಿಮಲೆ ಅಯ್ಯಪ್ಪ ದೇಗುಲದೊಳಕ್ಕೆ ಯಾವುದೇ ವಯೋಮಾನದ ಮಹಿಳೆಯರು ಪ್ರವೇಶಿಸಬಹುದು ಎಂದು ಸುಪ್ರೀಂಕೋರ್ಟ್ ಐತಿಹಾಸಿಕ ತೀರ್ಪು ನೀಡಿದ ಬಳಿಕ ದೇಗುಲದ ಬಾಗಿಲು ತೆರೆದು ಐದು ದಿನಗಳಾಗುತ್ತಾ
ಬಂದಿದ್ದರೂ, 10 ರಿಂದ 50 ವರ್ಷದೊಳಗಿನ ಒಬ್ಬರೇ ಒಬ್ಬರು ಮಹಿಳೆಗೂ ಈವರೆಗೆ ದರ್ಶನ ಸಿಕ್ಕಿಲ್ಲ. ಭಾನುವಾರ ದೇವರ ದರ್ಶನಕ್ಕೆ6 ಮಹಿಳೆಯರು ಯತ್ನಿಸಿದರೂ ಅವರಿಗೆ ತಡೆ ಒಡ್ಡಲಾಯಿತು.
ಈ ನಡುವೆ, ಮಾಸಿಕ ಪೂಜೆಯ ನಿಮಿತ್ತ ತೆರೆಯಲಾಗಿರುವ ದೇಗುಲ ಸೋಮವಾರ ಸಂಜೆ ಬಂದ್ ಆಗಲಿದೆ. ಕಳೆದ ಐದು ದಿನಗಳಿಂದ ನಡೆದ ಹೈಡ್ರಾಮಾ, ಪ್ರತಿಭಟನೆಗೂ ತಾತ್ಕಾಲಿಕ ವಿರಾಮ ಸಿಗಲಿದೆ. ಆದರೆ ಮುಂದಿನ ತಿಂಗಳಿನಿಂದ ಶಬರಿಮಲೆ ಎರಡು ತಿಂಗಳ ಶಬರಿಮಲೆ ಸೀಸನ್ ಆರಂಭವಾಗಲಿದ್ದು, ಆಗ ಪರಿಸ್ಥಿತಿ ವಿಕೋಪಕ್ಕೆ ಹೋಗುವ ಸಾಧ್ಯತೆ ಇದೆ. ಹೀಗಾಗಿ ಸರ್ಕಾರ, ಪೊಲೀಸರಿಗೆ ಆತಂಕ ಶುರುವಾಗಿದೆ.
ಪ್ರತಿಭಟನಾಕಾರರ ಅಡೆ, ತಡೆ, ಆಕ್ರೋಶದ ನಡುವೆಯೂ ಮಹಿಳೆಯೊಬ್ಬರು ದೇಗುಲ ಪ್ರವೇಶಿಸುವ ಸಲುವಾಗಿ ಭಾನುವಾರ ದಾರಿಯನ್ನು ಕ್ರಮಿಸಲು ಯತ್ನಿಸಿದ್ದಾರೆ. ಪೊಲೀಸ್ ಭದ್ರತೆ ರಹಿತವಾಗಿ 4 ಕಿ.ಮೀ. ದೂರ ಕ್ರಮಿಸಿದ 47 ವರ್ಷದ ಬಾಲಮ್ಮ ಎಂಬ ಮಹಿಳೆಯನ್ನು ಪ್ರತಿಭಟನಾಕಾರರು ತಳ್ಳಾಡಿದ್ದಾರೆ. ಹೀಗಾಗಿ ಅವರು ಅಸ್ವಸ್ಥರಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ಇದೇ ವೇಳೆ, ಶಬರಿಮಲೆ ಏರುತ್ತಿದ್ದ 40ರ ಪ್ರಾಯದ ತೆಲುಗುಭಾಷಿಕ ಇಬ್ಬರು ಮಹಿಳೆಯರನ್ನು ಅಯ್ಯಪ್ಪ ಭಕ್ತರು ತಡೆದಿದ್ದಾರೆ. ಬಂಧುಗಳ ಜತೆ ಯಾತ್ರೆ ಕೈಗೊಂಡಿದ್ದ ಆ ಇಬ್ಬರೂ ಮಹಿಳೆಯರನ್ನು ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅಯ್ಯಪ್ಪ ದೇಗುಲದ ಸಂಪ್ರದಾಯದ ಬಗ್ಗೆ ಗೊತ್ತಿರಲಿಲ್ಲ ಎಂದು ಮಹಿಳೆಯರು ಮುಚ್ಚಳಿಕೆ ಬರೆದುಕೊಟ್ಟಿದ್ದಾರೆ. ಈ ಇಬ್ಬರೂ ಮಹಿಳೆಯರ ಜತೆ ಇದ್ದ, 50 ವರ್ಷ ಮೀರಿದ ಮಹಿಳೆಯರು ದೇಗುಲಕ್ಕೆ ಹೋಗಲು ಅನುಮತಿ ನೀಡಲಾಗಿದೆ. ನಾಮಜಪ ಯಾತ್ರೆ: ಪೊಲೀಸ್ ದೌರ್ಜನ್ಯ ವಿರುದ್ಧರಾಜ್ಯಾದ್ಯಂತ ನಾಮಜಪ ಯಾತ್ರೆಗೂ ನಿರ್ಧರಿಸಲಾಗಿದೆ.
"
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.