ವಾಲ್ಮಿಕಿ ಸಂಘದ ಅಧ್ಯಕ್ಷ ವಿಜಯ್​ಗೆ ಲಕ್ಷ್ಮೀ ಹೆಬ್ಬಾಳ್ಕರ್ ಧಮ್ಕಿ

Published : Oct 16, 2017, 04:28 PM ISTUpdated : Apr 11, 2018, 12:54 PM IST
ವಾಲ್ಮಿಕಿ ಸಂಘದ ಅಧ್ಯಕ್ಷ ವಿಜಯ್​ಗೆ ಲಕ್ಷ್ಮೀ ಹೆಬ್ಬಾಳ್ಕರ್ ಧಮ್ಕಿ

ಸಾರಾಂಶ

ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮಿ ಹೆಬ್ಬಾಳ್ಕರ್  ಮತ್ತೊಂದು ವಿವಾದದಲ್ಲಿ ಸಿಲುಕಿ ಹಾಕಿಕೊಂಡಿದ್ದಾರೆ. ವಾಲ್ಮಿಕಿ ಸಂಘದ ಅಧ್ಯಕ್ಷ ವಿಜಯ್​ಗೆ ಲಕ್ಷ್ಮೀ ಹೆಬ್ಬಾಳ್ಕರ್ ಧಮ್ಕಿ ಹಾಕಿದ್ದಾರೆ.

ಬೆಂಗಳೂರು (ಅ.16): ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮಿ ಹೆಬ್ಬಾಳ್ಕರ್  ಮತ್ತೊಂದು ವಿವಾದದಲ್ಲಿ ಸಿಲುಕಿ ಹಾಕಿಕೊಂಡಿದ್ದಾರೆ. ವಾಲ್ಮಿಕಿ ಸಂಘದ ಅಧ್ಯಕ್ಷ ವಿಜಯ್​ಗೆ ಲಕ್ಷ್ಮೀ ಹೆಬ್ಬಾಳ್ಕರ್ ಧಮ್ಕಿ ಹಾಕಿದ್ದಾರೆ.

ಸೀರೆ ಹಂಚುವ ವಿಷಯವಾಗಿ ಇಬ್ಬರ ಮಧ್ಯೆ ವಾಗ್ವಾದ ನಡೆದಿದೆ.  ಜಾರಕಿಹೊಳಿ ಬೆಂಬಲಿಗನನ್ನು ಅವಾಚ್ಯ ಶಬ್ಧದಿಂದ  ಹೆಬ್ಬಾಳ್ಕರ್​ ನಿಂದಿಸಿದ್ದಾರೆ.

ತಿಂಗಳ ಹಿಂದೆ ಸತೀಶ್ ಜಾರಕಿಹೋಳಿ ಹಾಗೂ ಲಕ್ಷ್ಮೀ ಹೆಬ್ಬಾಳಕರ್ ನಡುವೆ  ವಾಗ್ವಾದ ನಡೆದಿತ್ತು. ಈ ವೇಳೆ  ಹೆಬ್ಬಾಳ್ಕರ್ ಅಭಿಮಾನಿಯನ್ನು  ವಿಜಯ್ ಅವಾಚ್ಚ ಶಬ್ದಗಳಿಂದ ನಿಂದಿಸಿದ್ದರು.  ಈ ಹಿನ್ನಲೆಯಲ್ಲಿ ವಿಜಯ್'ಗೆ ಲಕ್ಷ್ಮೀ ಹೆಬ್ಬಾಳ್ಕರ್ ತರಾಟೆಗೆ ತಗೆದುಕೊಂಡಿದ್ದಾರೆ.  

ಲಕ್ಷ್ಮೀ ಹೆಬ್ಬಾಳ್ಕರ್ ಹಾಗೂ ವಿಜಯ್ ನಡುವೆ ನಡೆದ ಮಾತುಕತೆ ಹೀಗಿದೆ:

ಲಕ್ಷ್ಮೀ: ಹಲೋ..  

ವಿಜಯ : ಆತ್ರಿ ಅಕ್ಕಾ, ಯಾರ್ ಮಾಡಿದಾರೋ ಏನೋ

ಲಕ್ಷ್ಮೀ:  ಫೇಸ್​ಬುಕ್​ನಲ್ಲಿ ಕಾಮೆಂಟ್​ ಹಾಕಿ ಧಮ್ಕಿ ಹಾಕ್ತಿರಿ ಏನು..?

ವಿಜಯ: ಧಮ್ಕಿ ಅಂತ ಅಲ್ರಿ

 ಲಕ್ಷ್ಮೀ: ಧಮ್ಕಿ ಹಾಕ್ತಿ ಏನು..?

ವಿಜಯ: ಏನ್ರಿ..?

 ಲಕ್ಷ್ಮೀ:  ನನ್ನಂಥವಳಿಗೆ ಧಮ್ಕಿ ಕೊಡ್ತಿರಿ ಏನು..?

ವಿಜಯ: ಆತ್ರಿ, ಧಮ್ಕಿ ಅಂತ ಅಲ್ಲ, ನಿಮ್ಮ ಹೆಸರ ಮೇಲೆ ಫೇಸಬುಕ್​ದಾಗ ಸುಮ್ಮನೆ ಇವಾಗ ರಾಜಕೀಯವಾಗಿ ಜಗಳ ಹಚ್ಚತಾರ.

ಲಕ್ಷ್ಮೀ: ವಿಜಯ, ವಿಜಯ

ವಿಜಯ: ಮೇಡಂ..

 ಲಕ್ಷ್ಮೀ: ಎಲ್ಲರ ಜೋಡಿ ನಡ್ಕೊಂಡಂಗ ನನ್ನ ಜೋಡಿ ನಡ್ಕೋಬೇಡ, ಇದ ಫಸ್ಟ್​, ಇದ ಕೊನೆ. ನಂಗ ಪೋನ್​ ಮಾಡಿದಂಗ, ನನ್ನ ತಂಟೆಗೆ ಬಂದ್ರೆ ನಾ ಬಿಡಲ್ಲ

ವಿಜಯ: ಆತ ಅಕ್ಕಾ, ಲಾಸ್ಟ್​ ನೀವು.. ನಿಮ್ಮದ ಏನ ಇದೆ, ಕವರ್​ ಮಾಡಿ, ನಾವು ಮಾಡ್ತೇವೆ. ಅದರಲ್ಲಿ ನಮ್ಮ ತಪ್ಪ್​ ಇದ್ರೆ, ನೀವೇನ ಗೋಳಹೋಕೋಬೇಡ್ರಿ, ನಮ್ಮ ಸಮಾಜದಾಗ ನಮಗೊಂದ.. 

 ಲಕ್ಷ್ಮೀ: ನೀವೇನಾದ್ರು ಧಮ್ಕಿ ಹಾಕಿನೇ ಅಂತಾ ಟಿವಿಗೆ ಕೊಟ್ಟೆ ಅಂದ್ರೆ, ನೀನ ಇರೋದಿಲ್ಲ

ವಿಜಯ: ಹಾ. ಆಯ್ತು..

 ಲಕ್ಷ್ಮೀ: ಹುಷಾರಾಗಿರು..

ವಿಜಯ: ಸರಿ, ಸರಿ

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ರಾಜ್ಯದಲ್ಲಿ ಮದ್ಯ ಮಾರಾಟ ನಿಷೇಧಿಸಿ: ಸಿಎಂಗೆ ಮಹಿಳಾ ಆಯೋಗ ಮನವಿ
ಬಿಪಿಎಲ್ ಕಾರ್ಡ್‌ನ 2.95 ಲಕ್ಷ ಅರ್ಜಿ ವಿಲೇವಾರಿ: ಮುನಿಯಪ್ಪ