ತಾಜ್‌ಮಹಲ್‌ ಭಾರತದ ಸಂಸ್ಕೃತಿಯಲ್ಲ; ತಂದೆಯನ್ನೇ ಜೈಲಿಗಟ್ಟಿದವನಿಂದ ಇತಿಹಾಸ ಆಗುತ್ತಾ? ಬಿಜೆಪಿ ಶಾಸಕನಿಂದ ವಿವಾದಾತ್ಮಕ ಹೇಳಿಕೆ

Published : Oct 16, 2017, 03:19 PM ISTUpdated : Apr 11, 2018, 12:56 PM IST
ತಾಜ್‌ಮಹಲ್‌ ಭಾರತದ ಸಂಸ್ಕೃತಿಯಲ್ಲ; ತಂದೆಯನ್ನೇ ಜೈಲಿಗಟ್ಟಿದವನಿಂದ ಇತಿಹಾಸ ಆಗುತ್ತಾ? ಬಿಜೆಪಿ ಶಾಸಕನಿಂದ ವಿವಾದಾತ್ಮಕ ಹೇಳಿಕೆ

ಸಾರಾಂಶ

ಹಿಂದೂಗಳನ್ನು ಸರ್ವನಾಶ ಮಾಡಲು ಪ್ರಯತ್ನಿಸಿದ್ದ' ಮೊಘಲ್ ದೊರೆ  ಷಹಜಹಾನ್‌ನನ್ನು ಭಾರತದ ಇತಿಹಾಸ ಮತ್ತು ಸಂಸ್ಕೃತಿಯ ಭಾಗವಾಗಿ ಪರಿಗಣಿಸುವುದಾದರೆ 'ನಾವು ಇತಿಹಾಸವನ್ನೇ ಬದಲಿಸುತ್ತೇವೆ' ಎಂದು ಉತ್ತರ ಪ್ರದೇಶದ ಬಿಜೆಪಿ ಶಾಸಕ ಸಂಗೀತ್‌ ಸೋಮ್‌ ಹೇಳಿದ್ದಾರೆ.

ನವದೆಹಲಿ (ಅ.16): ಹಿಂದೂಗಳನ್ನು ಸರ್ವನಾಶ ಮಾಡಲು ಪ್ರಯತ್ನಿಸಿದ್ದ' ಮೊಘಲ್ ದೊರೆ  ಷಹಜಹಾನ್‌ನನ್ನು ಭಾರತದ ಇತಿಹಾಸ ಮತ್ತು ಸಂಸ್ಕೃತಿಯ ಭಾಗವಾಗಿ ಪರಿಗಣಿಸುವುದಾದರೆ 'ನಾವು ಇತಿಹಾಸವನ್ನೇ ಬದಲಿಸುತ್ತೇವೆ' ಎಂದು ಉತ್ತರ ಪ್ರದೇಶದ ಬಿಜೆಪಿ ಶಾಸಕ ಸಂಗೀತ್‌ ಸೋಮ್‌ ಹೇಳಿದ್ದಾರೆ.

'ಅಂತಹ ವ್ಯಕ್ತಿಗಳನ್ನು ಭಾರತದ ಭವ್ಯ ಇತಿಹಾಸದ ಭಾಗವಾಗಿ ಪರಿಗಣಿಸುವುದಾದರೆ, ನಾವು ಇತಿಹಾಸವನ್ನೇ ಬದಲಿಸುತ್ತೇವೆ ಎಂದು ಪೂರ್ಣ ವಿಶ್ವಾಸದೊಂದಿಗೆ ಹೇಳಬಲ್ಲೆ' ಎಂದು ಅವರು ಪ್ರತಿಪಾದಿಸಿದರು. ಮೊಘಲ್ ದೊರೆ ನಿರ್ಮಿಸಿದ ತಾಜ್ ಮಹಲ್ 'ಜಗತ್ತಿನ ಏಳು ಅದ್ಭುತಗಳಲ್ಲಿ ಒಂದು' ಎಂದು ಪರಿಗಣಿಸುವುದನ್ನು ಅವರು ವಿರೋಧಿಸಿದರು. ಉತ್ತರ ಪ್ರದೇಶದ ಪ್ರವಾಸೋದ್ಯಮ ಇಲಾಖೆ ರಾಜ್ಯದ ಐತಿಹಾಸಿಕ ಸ್ಥಳಗಳ ಪಟ್ಟಿಯಿಂದ ತಾಜ್‌ಮಹಲನ್ನು ಕೈಬಿಟ್ಟಿರುವ ಬಗ್ಗೆ ಪ್ರಸ್ತಾಪಿಸಿದ ಅವರು, ಅದನ್ನು ನಿರ್ಮಿಸಿದ ವ್ಯಕ್ತಿಯನ್ನು ಭಾರತದ ಸಂಸ್ಕೃತಿ ಮತ್ತು ಇತಿಹಾಸದ ಭಾಗವಾಗಿ ಪರಿಗಣಿಸುವುದೇಕೆ ಎಂದು ಅಚ್ಚರಿ ವ್ಯಕ್ತಪಡಿಸಿದರು. 'ಐತಿಹಾಸಿಕ ಸ್ಥಳಗಳ ಪಟ್ಟಿಯಿಂದ ತಾಜ್‌ಮಹಲ್ ಹೆಸರು ಕೈಬಿಟ್ಟಾಗ ಹಲವರು ದುಃಖಿಸಿದರು. ಯಾವ ಬಗೆಯ ಇತಿಹಾಸ? ಯಾವ ಸ್ಥಳದ ಇತಿಹಾಸ? ಯಾರ ಇತಿಹಾಸ? ತನ್ನ ತಂದೆಯನ್ನೇ ಜೈಲಿಗಟ್ಟಿದವನು ತಾಜ್‌ಮಹಲ್‌ ಕಟ್ಟಿದ ಎಂಬ ಇತಿಹಾಸವೆ? ಉತ್ತರ ಪ್ರದೇಶ ಮತ್ತು ಇಡೀ ಭಾರತದಿಂದಲೇ ಹಿಂದೂಗಳನ್ನು ಸರ್ವನಾಶ ಮಾಡಲು ಬಯಸಿದ್ದ ಎಂಬ ಇತಿಹಾಸವೆ?' ಎಂದು ಪ್ರಶ್ನಿಸಿದರು ಸೋಮ್‌. ವಿಶ್ವ ಪಾರಂಪರಿಕ ತಾಣವೆಂದ ಯುನೆಸ್ಕೋ ಮಾನ್ಯತೆ ಪಡೆದ ತಾಜ್‌ಮಹಲ್‌ಗೆ ಪ್ರತಿವರ್ಷ 60 ಲಕ್ಷಕ್ಕೂ ಹೆಚ್ಚು ಪ್ರವಾಸಿಗರು ಆಗಮಿಸುತ್ತಾರೆ. ಅವರಲ್ಲಿ ಹೆಚ್ಚಿನವರೂ ವಿದೇಶೀಯರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ತಾಳಿ ಕಟ್ಟುವ ಶುಭ ವೇಳೆ..., 'ಇವನು ನನ್ನ ಗಂಡ' ಎಂದವಳೊಂದಿಗೆ ಸಂಸಾರ ನಡೆಸುತ್ತೇನೆ ಎಂದ ಮದುಮಗ!
ಬೆಂಗಳೂರು ಜನತೆಗೆ ಶೀಘ್ರವೇ ದೊಡ್ಡ ಮುಕ್ತಿ, ನಗರದ ಮೊದಲ ಡಬಲ್ ಡೆಕ್ಕರ್ ಫ್ಲೈಓವರ್ ಮುಂದಿನ ತಿಂಗಳೊಳಗೆ ಸಂಚಾರ ಮುಕ್ತ!