
ಬೆಂಗಳೂರು[ಜೂ.25]: ಐಎಂಎ ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ದುಬೈಗೆ ಹಾರಿರುವ ಮನ್ಸೂರ್ ಖಾನ್ ಗೆ ಕೆಪಿಸಿಸಿ ಕಾರ್ಯದರ್ಶಿ ಉಬೈದುಲ್ಲಾ ಷರೀಪ್ ಪತ್ರ ಬರೆದಿದ್ದಾರೆ. ಅಷ್ಟಕ್ಕೂ ಪತ್ರದಲ್ಲೇನಿದೆ? ಇಲ್ಲಿದೆ ವಿವರ
ತಾವು ಬರೆದ ಪತ್ರದಲ್ಲಿ 'ಹೂಡಿಕೆ ಹಣ ಮೇಲೆ ಅಕ್ರಮವಾಗಿ 5 ರಿಂದ 10 ಪರ್ಸೆಂಟ್ ಬಡ್ಡಿ ಕೊಡ್ತೀರೋ ಆರೋಪಕ್ಕೆ ಸಂಬಂಧಿಸಿದಂತೆ ನಿಮ್ಮಿಂದ ಯಾವುದೇ ಉತ್ತರ ಬಂದಿಲ್ಲ. ಬಡ್ಡಿ ಅಲ್ಲ ಲಾಭದ ಹಣ ವಾಪಸ್ ಕೊಡ್ತೀನಿ ಅಂತೀರಿ , ಹಲಾಲ್ ಅಂತೀರಿ, ಕಂಪನಿಯಲ್ಲಿ ಯಾವುದೇ ಅಕ್ರಮ ನಡೀತಿಲ್ಲ ಅಂತೀರಿ, ಬೆಳ್ಳಿ ಬಂಗಾರ ಹೂಡಿಕೆ ಸಹ ಮಾಡಿಸಿಕೊಳ್ತಿದ್ದೀರಿ, ಎಜುಕೇಷನ್ ಇನ್ಸ್ಟ್ಯೂಟ್ , ಧರ್ಮದ ವಿಚಾರದಲ್ಲಿ ದಾನ ಮಾಡುತ್ತಿದ್ದೀರಿ. ಹಾಗಿದ್ದರೆ ಈ ರೀತಿ ಬ್ಯುಸಿನಸ್ ಮಾಡ್ಬೇಕಾದ್ರೆ ಕಾನೂನು ಪಾಲನೆ ಮಾಡ್ಬೇಕಾಗಿತ್ತು. ಯಾವುದೇ ನಿಯಮವನ್ನು ಪಾಲಿಸಿಲ್ಲ ಏಕೆ?' ಎಂದು ಉಬೈದುಲ್ಲಾ ಷರೀಪ್ ಪ್ರಶ್ನಿಸಿದ್ದಾರೆ.
ಇಷ್ಟೇ ಅಲ್ಲದೇ '’ನಿಮ್ಮಿಂದ ಕಂಪನಿ ಆಕ್ಟ್ , ಬ್ಯಾಂಕಿಂಗ್ ರೆಗುಲೇಷನ್ ಆಕ್ಟ್ , ಮನಿ ಲ್ಯಾಂಡ್ರಿಂಗ್ ಆಕ್ಟ್ , ರಿಸರ್ವ್ ಬ್ಯಾಂಕ್ ನಿಯಾಮಾವಳಿಗಳು ಉಲ್ಲಂಘನೆಯಾಗಿದೆ ಎಂದು ಗಂಭೀರ ಆರೋಪವಿದೆ. ನಾನು ನಿಮ್ಮ ಮೇಲೆ ಮುಂದಿನ ಕ್ರಮ ಕೈಗೊಳ್ಳುವ ಮುನ್ನ ಸರ್ಕಾರದ ಗಮನಕ್ಕೆ ತರುವ ಮುನ್ನ, ನನ್ನ ಪ್ರಶ್ನೆಗಳಿಗೆ ಸ್ಪಷ್ಟನೆ ಬೇಕು. ಈ ಬಗ್ಗೆ ಸರ್ಕಾರದ ಮಟ್ಟದಲ್ಲಿ ಕಾನೂನು ಕ್ರಮ ಜರುಗಿದ್ದೇ ಆದಲ್ಲಿ ನಾನು ಜವಾಬ್ದಾರನಲ್ಲ' ಎಂದು ಮನ್ಸೂರ್ ಗೆ ಬರೆದಿದ್ದ ಪತ್ರದಲ್ಲಿ ಕೆಪಿಸಿಸಿ ಕಾರ್ಯದರ್ಶಿ ಉಬೈದುಲ್ಲಾ ಎಚ್ಚರಿಸಿದ್ದಾರೆ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.