ಕುಸ್ತಿ ಅಖಾಡವಾಯ್ತು ಪಾಕ್ ನ್ಯೂಸ್ ಸ್ಟುಡಿಯೋ, ರಾಜಕಾರಣಿಗಳ ಗುದ್ದಾಟವೇ ಲೈವ್!

Published : Jun 25, 2019, 02:06 PM IST
ಕುಸ್ತಿ ಅಖಾಡವಾಯ್ತು ಪಾಕ್ ನ್ಯೂಸ್ ಸ್ಟುಡಿಯೋ, ರಾಜಕಾರಣಿಗಳ ಗುದ್ದಾಟವೇ ಲೈವ್!

ಸಾರಾಂಶ

ಪಾಕಿಸ್ತಾನ ನ್ಯೂಸ್ ಸ್ಟುಡಿಯೋದಲ್ಲಿ ರಾಜಕಾರಣಿಗಳ ಫೈಟ್| ಲೈವ್ ಶೋನಲ್ಲಿ ಕೈ ಕೈ ಮಿಲಾಯಿಸಿದ ರಾಷ್ಟ್ರೀಯ ಪಕ್ಷದ ನಾಯಕರು!| ವಿಡಿಯೋ ಫುಲ್ ವೈರಲ್

ಿಸ್ಲಮಾಬಾದ್[ಜೂ.25]: ಪಾಕಿಸ್ತಾನದ ಸುದ್ದಿ ವಾಹಿನಿಯ ಸ್ಟುಡಿಯೋ ಒಂದು ರೆಸ್ಲಿಂಗ್ ಮ್ಯಾಚ್ ಆಗಿ ಪರಿವರ್ತನೆಗೊಂಡಿದೆ. ಲೈವ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ರಾಜಕಾರಣಿಗಳಿಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ. ಇದೇ ಜಗಳ ತಾರಕಕ್ಕೇರಿ ಇಬ್ಬರೂ ಪರಸ್ಪರ ಕೈ ಕೈ ಮಿಲಾಯಿಸಲು ಸಜ್ಜಾಗಿದ್ದಾರೆ. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಪಾಕಿಸ್ತಾನದ ಸುದ್ದಿ ವಾಹಿನಿ ನಡೆಸಿದ್ದ ಲೈವ್ ಕಾರ್ಯಕ್ರಮವೊಂದರಲ್ಲಿ ಪಾಕ್ ಪ್ರಧಾನಿ ಇಮ್ರಾನ್ ಖಾನ್ ರವರ PTI ಪಕ್ಷದ ಮಸ್ರೂರ್ ಅಲಿ ಸಿಯಾಲ್ ಹಾಗೂ ಕರಾಚಿ ಪ್ರೆಸ್ ಕ್ಲಬ್ ಅಧ್ಯಕ್ಷ ಇಮ್ತಿಯಾಜ್ ಖಾನ್ ಭಾಗಿಯಾಗಿದ್ದರು. ಆದರೆ ಕಾರ್ಯಕ್ರಮದ ನಡುವೆ ಸಿಯಾಲ್, ಇಮ್ತಿಯಾಜ್ ಖಾನ್ ಗೆ 'ನಿಮ್ಮ ಇಂತಹ ವರ್ತನೆ ನಾನು ಸಹಿಸಿಕೊಳ್ಳುವುದಿಲ್ಲ' ಎಂದು ಸಿಟ್ಟಿನಿಂದಲೇ ವಾರ್ನಿಂಗ್ ನೀಡಿದ್ದಾರೆ. ಸಿಯಾಲ್ ವಾರ್ನಿಂಗ್ ಕೇಳಿ ಕೆರಳಿದ ಇಮ್ತಿಯಾಜ್ ತಾವು ಕುಳಿತಲ್ಲಿಂದ ಎದ್ದು ಹೊಡೆಯಲು ಮುಂದಾಗಿದ್ದಾರೆ.

ಇದನ್ನು ಕೇಳಿದ ಆ್ಯಂಕರ್ ಇಬ್ಬರನ್ನೂ ತಡೆಯಲು ಮುಂದಾಗಿದ್ದಾರೆ. ಆದರೆ ಪರಿಸ್ಥಿತಿ ಕೆರೖ ಮೀರುತ್ತಿದ್ದಂತೆಯೇ ಕಚೇರಿ ಸಿಬ್ಬಂದಿ ಆಗಮಿಸಿ ಪರಿಸ್ಥಿತಿ ಶಾಂತಗೊಳಿಸಿದ್ದಾರೆ. ಸದ್ಯ ರಾಜಕಾರಣಿಗಳ ಈ ತಿಕ್ಕಾಟ ವೈರಲ್ ಆಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಡಿಜಿಪಿಯಾಗಿ ಅಲೋಕ್‌ ಕುಮಾರ್ ಮುಂಬಡ್ತಿ, ಸರ್ಕಾರದ ವಿರುದ್ಧ 8 ತಿಂಗಳ ಕಾನೂನು ಹೋರಾಟಕ್ಕೆ ಜಯ!
ರಾಮನಗರ: ರಸ್ತೆಗೆ ಕುರಿಗಳು ಅಡ್ಡಿ, ಹಾರ್ನ್ ಮಾಡಿದ್ದಕ್ಕೆ ಬಸ್ ಚಾಲಕನ ಮೇಲೆ ಗ್ರಾಮಸ್ಥರಿಂದ ಹಲ್ಲೆ!