ಬಿಎಸ್'ವೈ- ಅನಂತ್ ಮಾತುಕತೆ ಸಿಡಿ ಬಿಡುಗಡೆ : 'ನಾವೂ ಕೊಟ್ಟಿದೀವಲ್ಲ ,ಆದ್ರೆ ಅದನ್ನು ಡೈರಿಯಲ್ಲಿ ಬರೆದಿಲ್ಲ ಅಷ್ಟೇ'

Published : Feb 13, 2017, 09:07 AM ISTUpdated : Apr 11, 2018, 12:57 PM IST
ಬಿಎಸ್'ವೈ- ಅನಂತ್ ಮಾತುಕತೆ ಸಿಡಿ ಬಿಡುಗಡೆ : 'ನಾವೂ ಕೊಟ್ಟಿದೀವಲ್ಲ ,ಆದ್ರೆ ಅದನ್ನು ಡೈರಿಯಲ್ಲಿ ಬರೆದಿಲ್ಲ ಅಷ್ಟೇ'

ಸಾರಾಂಶ

ನಾಯಕರು ಕಪ್ಪ ಕೊಟ್ಟಿರುವ ಬಗ್ಗೆ ಮಾತನಾಡಿದ್ದಾರೆ. ಸಿಡಿಯಲ್ಲಿ ಯಡಿಯೂರಪ್ಪ- ಅನಂತಕುಮಾರ್ ಸಂಭಾಷಣೆ ಹೀಗಿದೆ ನೋಡಿ

ಬೆಂಗಳೂರು(ಫೆ.13): ರಾಜ್ಯ ರಾಜಕೀಯದಲ್ಲಿ ಮತ್ತೊಂದು ಸ್ಫೋಟಕ ಸುದ್ದಿ ಹೊರಬಿದ್ದಿದೆ. ಕಳೆದ 2 ದಿನಗಳಿಂದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕೇಂದ್ರಕ್ಕೆ 1 ಸಾವಿರ ಕೋಟಿ ಕಪ್ಪ ಕೊಟ್ಟಿದ್ದಾರೆ ಎಂದು ಆರೋಪ ಮಾಡುತ್ತಿದ್ದ  ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಈಗ ತಾವೇ ಖೆಡ್ಡಾದಲ್ಲಿ  ಸಿಕ್ಕಿಹಾಕಿ ಕೊಂಡಿದ್ದಾರೆ. ಕೇಂದ್ರ ಸಚಿವ ಅನಂತ್ ಕುಮಾರ್ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೈಕಮಾಂಡ್'ಗೆ ಕೊಟ್ಟಿರುವ ಕಪ್ಪದ ಮಾತುಕತೆಯ ಸಿಡಿಯನ್ನು ಕಾಂಗ್ರೆಸ್ ನಾಯಕ ವಿ.ಎಸ್ . ಉಗ್ರಪ್ಪ ಬಿಡುಗಡೆ ಮಾಡಿದ್ದಾರೆ.

ನಿನ್ನೆ ಬಿಜೆಪಿ ಕಚೇರಿಯ ಕಾರ್ಯಕ್ರಮವೊಂದರಲ್ಲಿ ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ಭಾಷಣ ಮಾಡುತ್ತಿದ್ದ ವೇಳೆ ಯಡಿಯೂರಪ್ಪ-ಅನಂತಕುಮಾರ್ ಸಂಭಾಷಣೆ ಇರುವ ವಿಡಿಯೋದಲ್ಲಿ ಇಬ್ಬರು ನಾಯಕರು ಕಪ್ಪ ಕೊಟ್ಟಿರುವ ಬಗ್ಗೆ ಮಾತನಾಡಿದ್ದಾರೆ. ಸಿಡಿಯಲ್ಲಿ ಯಡಿಯೂರಪ್ಪ- ಅನಂತಕುಮಾರ್ ಸಂಭಾಷಣೆ ಹೀಗಿದೆ ನೋಡಿ

 

ಅನಂತಕುಮಾರ್​: ನಿಮ್​ ಕಾಲದಲ್ಲಿ ಕೊಟ್ಟಿದ್ದೀರಿ

ಯಡಿಯೂರಪ್ಪ: ಹಾಂ..

ಅನಂತಕುಮಾರ್​: ನಿಮ್​ ಕಾಲದಲ್ಲಿ ಕೊಟ್ಟಿದ್ದೀರಿ, ನಾನೂ ಕೊಟ್ಟಿದ್ದೀನಿ. ನಾನು ಕೊಟ್ಟಿಲ್ಲ ಅಂತ ಹೇಳ್ತಿಲ್ಲ. ಆದ್ರೆ, ಸಾವಿರ ಕೋಟಿ ಕೊಟ್ಟಿಲ್ಲ ಅಂತ ಹೇಳಿದ್ದಾನೆ.  ಎಷ್ಟು ಕೋಟಿ ಕೊಟ್ಟಿದ್ದೀವಿ ಅಂತ ಅವರೇ ಹೇಳಿಬಿಟ್ಟಿದ್ದಾರೆ.

ಯಡಿಯೂರಪ್ಪ: ಕೊಟ್ಟಿರ್ತಾರೆ. ಆದ್ರೆ, ಅದನ್ನ ಬರೆದುಕೊಂಡು ಇಟ್ಟಿರ್ತಾರಾ?

ಅನಂತಕುಮಾರ್ : ನೀವು ಕಲ್ಲು ಬೀಸಿದ್ರೆ ಹೊತ್ತಿಕೊಳ್ಳುತ್ತೆ

ಅನಂತಕುಮಾರ್ : ಅವ್ರು (ಕಾಂಗ್ರೆಸ್​​) ಸಾವಿರ ಕೋಟಿ ಕೊಟ್ಟಿಲ್ಲ ಅಂತ ಯಾವನೂ ಒಪ್ಪಿಕೊಳ್ಳಲ್ಲ. ಕೊಟ್ಟಿದ್ದಾನೆ ಅಂತಾನೇ ಹೇಳೋದು

ಯಡಿಯೂರಪ್ಪ: ಆದರೆ, ಆ ಡೈರಿ ಈಚೆಗೆ ಬರಲಿಲ್ಲ..

ಅನಂತಕುಮಾರ್ : ಈಗ ಎಲೆಕ್ಷನ್​​ ತನಕ ಉತ್ತರ ಕೊಡುತ್ತಾ (ಕಾಂಗ್ರೆಸ್​​ನವರು) ತಿರುಗಬೇಕಾಗುತ್ತೆ, ತಿರುಗಲಿ.

 

ಸಿಎಂ ಸಿದ್ದರಾಮಯ್ಯ ವಿರುದ್ಧ ಯಡಿಯೂರಪ್ಪ- ಅನಂತಕುಮಾರ್ ಪ್ಲ್ಯಾನ್ಮಾಡಿದ್ದು, 1 ಸಾವಿರ ಕೋಟಿ ಕಪ್ಪ ಸಂದಾಯದ ಆರೋಪಕ್ಕೆ ಸಾಕ್ಷಿ ಇಲ್ಲ. ಹಣ ಸಂದಾಯದ ಬಗ್ಗೆ ಬರೆದಿಟ್ಟಿರುವ ಡೈರಿ ಸಿಕ್ಕಿಲ್ಲ ಎಂದಿದ್ದಾರೆ ಯಡಿಯೂರಪ್ಪ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

'ರಸ್ತೆ-ಚರಂಡಿ ನಿರ್ಮಾಣದಿಂದ ಬಡವರು ಉದ್ದಾರ ಆಗ್ತಾರಾ?' ಗ್ಯಾರಂಟಿ ಸ್ಕೀಂ ಟೀಕೆಗೆ ಗೃಹಸಚಿವ ಪರಂ ತಿರುಗೇಟು!
ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ ನಿಧನ, ದಾವಣಗೆರೆ ವ್ಯಾಪ್ತಿಯ ಶಾಲೆಗಳಿಗೆ ನಾಳೆ ರಜೆ