
ದಕ್ಷಿಣ ಭಾರತೀಯರು ಕಪ್ಪಗಿದ್ದಾರೆ ಎಂದು ಬಿಜೆಪಿ ಸಂಸದರೊಬ್ಬರು ಟೀಕಿಸಿದ ಬೆನ್ನಲ್ಲೇ ಎಲ್ಲ ಭಾರತೀ ಯರೂ ಬೆಳ್ಳಗೆ ಚೆನ್ನಾಗಿ ಕಾಣಿಸಬೇಕು ಎಂಬ ಉದ್ದೇಶದಿಂದ ಕೇಂದ್ರ ಸರ್ಕಾರ ಹೊಸ ಫೇರ್‌ನೆಸ್ ಕ್ರೀಂ ಬಿಡುಗಡೆ ಮಾಡಿದೆ. ಮೂಲಗಳ ಪ್ರಕಾರ ಬಾಬಾ ರಾಮದೇವ್ ಅವರು ಈ ಕ್ರಿಂ ತಯಾರಿಸಿದ್ದು, ಮೂರು ಟ್ಯೂಬ್ ಖರ್ಚಾಗುವಷ್ಟರಲ್ಲಿ ಯಾರು ಬೇಕಾದರೂ ಬೆಳ್ಳಗೆ ಹೊಳೆಯತೊಡಗುತ್ತಾರೆ. ದೇಶದಲ್ಲಿ ದಕ್ಷಿಣ ಭಾರತದವರು ಕಪ್ಪಗೆ ಮತ್ತು ಉತ್ತರ ಭಾರತದವರು ಬೆಳ್ಳಗೆ ಇದ್ದರೆ ಏಕತೆ ಸಾಧ್ಯವಾಗುವು ದಿಲ್ಲ. ಎಲ್ಲರೂ ಬೆಳ್ಳಗಿದ್ದರೆ ಭಾರತೀಯರೆಲ್ಲ ಒಂದು ಎಂಬ ಭಾವನೆ ಮೂಡುತ್ತದೆ ಎಂಬ ಚಿಂತನೆಯೊಂದಿಗೆ ಈ ಕ್ರೀಂ ಬಿಡುಗಡೆ ಮಾಡಲಾಗಿದೆ. ದಕ್ಷಿಣ ಭಾರತೀ ಯರಿಗೆ ಇದು ಸಬ್ಸಿಡಿ ದರದಲ್ಲಿ ದೊರೆಯಲಿದ್ದು, ಆನ್‌ಲೈನ್‌ನಲ್ಲಿ ಖರೀದಿಸುವವರು ಆಧಾರ್ ಸಂಖ್ಯೆ ನಮೂ ದಿಸಿ ಸಬ್ಸಿಡಿ ಪಡೆಯಬಹುದು. ಕುಟುಂಬದ ಎಲ್ಲರೂ ಆಧಾರ್ ಸಂಖ್ಯೆ ನೀಡಿದರೆ ಸಂಪೂರ್ಣ ಉಚಿತವಾಗಿ ಕ್ರೀಂ ಸಿಗುತ್ತದೆ. ಹೆಚ್ಚು ಕಪ್ಪಗಿರುವವರಿಗೆ ಹೆಚ್ಚಿನ ಸಬ್ಸಿಡಿ ಲಭ್ಯವಿದೆ.
(ಸೂಚನೆ: ಇದು ಕನ್ನಡಪ್ರಭ ವಾರ್ತೆಯ ಸುಳ್'ಸುದ್ದಿ ಅಂಕಣ )
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.