ಜಯೇಂದ್ರ ಸರಸ್ವತಿ ಬಂಧನವಾಗಿದ್ದಾಗ ಕೂಗಾಡಿದ್ದ ಪ್ರಣಬ್ : ರಾಷ್ಟ್ರಪತಿ ಮಾಡಲು ಭಯ ಎಂದಿದ್ದ ಸೋನಿಯಾ

By Suvarna Web DeskFirst Published Oct 24, 2017, 6:50 PM IST
Highlights

ಇನ್ನೊಂದು ಬಾರಿಯುಪಿಎ-2 ಸಂದರ್ಭದಲ್ಲಿ ಲೋಕಸಭೆಯಲ್ಲಿ ಗದ್ದಲ ಮಾಡುತ್ತಿದ್ದಬಿಜೆಪಿ ಸಂಸದರ ಮೇಲೆ ಪ್ರಣಬ್ ಜೋರಾಗಿ ಕೂಗಿದಾಗ ಸುಷ್ಮಾಸ್ವರಾಜ್ ಕ್ಷಮೆ ಕೇಳಬೇಕಾಯಿತಂತೆ.

2004ರ ನವೆಂಬರ್‌ನಲ್ಲಿ ದೀಪಾವಳಿಗಿಂತ ಮೊದಲು ಕಂಚಿ ಕಾಮಕೋಟಿ ಶ್ರೀ ಜಯೇಂದ್ರ ಸರಸ್ವತಿ ಅವರನ್ನು ಬಂಧಿಸಿ ಒಳ ಹಾಕಿದ್ದಾಗ ಸಂಜೆ ನಡೆದ ಸಂಪುಟ ಸಭೆಯಲ್ಲಿ ಒಳಗೆ ಹೋದವರೇ ಪ್ರಣಬ್ ಕೂಗಾಡಿದರಂತೆ. ದೇಶದಲ್ಲಿ ಸೆಕ್ಯುಲರಿಸಂ ಜೀವಂತವಾಗಿ ಇರುವುದಕ್ಕೆ ಕೇವಲ ಹಿಂದೂ ಸನ್ಯಾಸಿಗಳೇ ಜೈಲಿಗೆ ಹೋಗಬೇಕೆ? ಯಾವುದಾದರೂ ಮುಸ್ಲಿಮರ ಪವಿತ್ರ ಹಬ್ಬದ ಮೊದಲ ದಿನ ಮೌಲ್ವಿ ಗಳನ್ನು ಬಂಧಿಸಿದರೆ ಏನಾಗುತ್ತದೆ? ಇದು ಸರ್ವಥಾ ಸರಿಯಲ್ಲ ಎಂದು ಕೂಗಾಡಿದ ಪ್ರಣಬ್, ಅಲ್ಲಿಂದಲೇ ತಮಿಳುನಾಡಿನ ಪೊಲೀಸ್ ಮುಖ್ಯಸ್ಥರಿಗೆ ಫೋನ್ ಮಾಡಿದರಂತೆ.

ಇನ್ನೊಂದು ಬಾರಿ ಯುಪಿಎ-2 ಸಂದರ್ಭದಲ್ಲಿ ಲೋಕಸಭೆಯಲ್ಲಿ ಗದ್ದಲ ಮಾಡುತ್ತಿದ್ದ ಬಿಜೆಪಿ ಸಂಸದರ ಮೇಲೆ ಪ್ರಣಬ್ ಜೋರಾಗಿ ಕೂಗಿದಾಗ ಸುಷ್ಮಾ ಸ್ವರಾಜ್ ಕ್ಷಮೆ ಕೇಳಬೇಕಾಯಿತಂತೆ. ಆಗ ಪಕ್ಕದಲ್ಲಿ ಕೂತಿದ್ದ ಸೋನಿಯಾ ‘ಈ ನಿಮ್ಮ ಸಿಟ್ಟಿನಿಂದಲೇ ನಿಮ್ಮನ್ನು ರಾಷ್ಟ್ರಪತಿ ಮಾಡಲು ಹಿಂಜರಿಕೆ’ ಎಂದು ಹೇಳಿದ್ದರಂತೆ.

Latest Videos

(ಪ್ರಶಾಂತ್ ನಾತು ಅವರ ಇಂಡಿಯಾ ಗೇಟ್ ಅಂಕಣದ ಆಯ್ದ ಭಾಗ: ಕನ್ನಡಪ್ರಭ)

click me!