[ವೈರಲ್ ಚೆಕ್] ಬಾಳೆಹಣ್ಣು ಮತ್ತು ಮೊಟ್ಟೆ ಒಟ್ಟಿಗೇ ತಿಂದು ಮೃತಪಟ್ಟ ಯುವಕ!

Published : Oct 24, 2017, 06:41 PM ISTUpdated : Apr 11, 2018, 12:44 PM IST
[ವೈರಲ್ ಚೆಕ್] ಬಾಳೆಹಣ್ಣು ಮತ್ತು ಮೊಟ್ಟೆ ಒಟ್ಟಿಗೇ ತಿಂದು ಮೃತಪಟ್ಟ ಯುವಕ!

ಸಾರಾಂಶ

ಬಾಳೆಹಣ್ಣು ಮತ್ತು ಮೊಟ್ಟೆ ಇದು ಎಲ್ಲರ ಸಾಮಾನ್ಯ ಆಹಾರ. ಊಟವಾದ ನಂತರ ಬಾಳೆಹಣ್ಣು ತಿನ್ನೋದು ಎಲ್ಲರ ಹವ್ಯಾಸ. ಆದರೆ ಇತ್ತೀಚೆಗೆ ಬಾಳೆಹಣ್ಣು ಮತ್ತು ಮೊಟ್ಟೆಯನ್ನು ಒಟ್ಟಿಗೆ ತಿಂದರೆ ಸತ್ತೇಹೋಗ್ತಾರಂತೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. 

ಬಾಳೆಹಣ್ಣು ಮತ್ತು ಮೊಟ್ಟೆ ಇದು ಎಲ್ಲರ ಸಾಮಾನ್ಯ ಆಹಾರ. ಊಟವಾದ ನಂತರ ಬಾಳೆಹಣ್ಣು ತಿನ್ನೋದು ಎಲ್ಲರ ಹವ್ಯಾಸ.

ಆದರೆ ಇತ್ತೀಚೆಗೆ ಬಾಳೆಹಣ್ಣು ಮತ್ತು ಮೊಟ್ಟೆಯನ್ನು ಒಟ್ಟಿಗೆ ತಿಂದರೆ ಸತ್ತೇಹೋಗ್ತಾರಂತೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಈ ಫೋಟೊದಲ್ಲಿ ಬಾಳೆಹಣ್ಣು ಮತ್ತು ಮೊಟ್ಟೆಯನ್ನು ಒಟ್ಟಿಗೇ ತಿಂದ ವ್ಯಕ್ತಿಯೊಬ್ಬ ಸ್ಥಳದಲ್ಲಿಯೇ ಮೃತಪಡುತ್ತಾನೆ.

ಬಾಳೆಹಣ್ಣು ಮತ್ತು ಮೊಟ್ಟೆ ಮಿಶ್ರಣ ವಿಷ ಪದಾರ್ಥವಾಗಿ ಮಾರ್ಪಡುತ್ತದೆ ಎಂಬ ವಿಷಯ ಮರಣೋತ್ತರ ಪರೀಕ್ಷೆಯಿಂದ ತಿಳಿದು ಬಂದಿದೆ. ಹೀಗಾಗಿ ಇವೆರಡನ್ನು ಒಟ್ಟಿಗೇ ತಿನ್ನಬೇಡಿ ಎಂಬ ಅಡಿಬರಹದೊಂದಿಗೆ ಫೋಟೋಗಳನ್ನು ಪೋಸ್ಟ್ ಮಾಡಲಾಗಿತ್ತು.

ಹಾಗಾದ್ರೆ ನಿಜಕ್ಕೂ ಬಾಳೆಹಣ್ಣು ಮತ್ತು ಮೊಟ್ಟೆಯನ್ನು ಒಟ್ಟಿಗೆ ತಿಂದರೆ ಸತ್ತೋಗ್ತಾರಾ? ಈ ಆಹಾರ ಮನುಷ್ಯನ ದೇಹದೊಳಕ್ಕೆ ಹೋದರೆ ಆಗೋ ಎಫೆಕ್ಟ್ ಏನು ಎಂದು ಕಂಡುಹಿಡಿಯಲು ಹೊರಟಾಗ ಸಿಕ್ಕ ಉತ್ತರ ಇದಕ್ಕೆ ತದ್ವಿರುದ್ಧವಾಗಿತ್ತು.

ಬಾಳೆಹಣ್ಣು ಮತ್ತು ಮೊಟ್ಟೆ ಇವೆರಡೂ ಆರೋಗ್ಯಕ್ಕೆ ಹೇಳಿಮಾಡಿಸಿದ ಪದಾರ್ಥಗಳು. ಈ ರೀತಿಯ ಸುದ್ದಿ ಎಲ್ಲಿಯೂ ವರದಿಯಾಗಿಲ್ಲ. ಅಚಾನಕ್ ಆಗಿ ಸಾವನ್ನಪ್ಪಿದ ವ್ಯಕ್ತಿಯ ಸಾವನ್ನು ಮೊಟ್ಟೆ ಮತ್ತು ಬಾಳೆಹಣ್ಣಿನ ಜೊತೆ ಸೇರಿಸಿ ಕಥೆ ಕಟ್ಟಲಾಗಿತ್ತು.

ಅಲ್ಲದೆ ನಿತ್ಯಸೇವಿಸುವ ಬನಾನಾ ಕೇಕ್, ಬನಾನಾ ಪ್ಯಾನ್ ಕೇಕ್ ಹೀಗೆ ಹಲವಾರು ಪದಾರ್ಥಗಳಲ್ಲಿ ಇವುಗಳ ಅಂಶವಿರುತ್ತದೆ. ಮೊಟ್ಟೆ ಮತ್ತು ಬಾಳೆಹಣ್ಣು ಮನುಷ್ಯನ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇವುಗಳಲ್ಲಿ ಉತ್ತಮ ಪ್ರೊಟೀನ್ ಇರುತ್ತದೆ ಎನ್ನುವುದನ್ನು ವೈದ್ಯರೇ ಖಚಿತಪಡಿಸಿದ್ದಾರೆ.

ಹೀಗಾಗಿ ವೈರಲ್ ಆದ ಸುದ್ದಿ ಸುಳ್ಳು ಎಂಬುದು ಖಚಿತವಾದಂತಾಯಿತು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಎಚ್‌ಎಎಲ್‌ ಸ್ಥಾಪನಾ ದಿನ: ಭಾರತದ ಏರೋಸ್ಪೇಸ್‌ ಸಾಧನೆಯ 86 ವರ್ಷಗಳ ಸಂಭ್ರಮಾಚರಣೆ
70ರ ಹರೆಯದಲ್ಲಿ ಸಿಕ್ಕಿಂ ಸುಂದರಿಗೆ ಮನಸೋತ ಆನಂದ್ ಮಹೀಂದ್ರ,ಅವಳಂದಕ್ಕೆ ಕಳೆದುಹೋಗ್ತೀರಿ