
ಕಲ್ಲಿದ್ದಲು ದಂಡ ಪಾವತಿಗೆ ಸಂಬಂಧಪಟ್ಟಂತೆ ಇಂಧನ ಸಚಿವ ಡಿ ಕೆ. ಶಿವಕುಮಾರ್ ದೆಹಲಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ನಂತರ ಕನ್ನಡ ಮಾಧ್ಯಮಗಳನ್ನು ಸ್ವಲ್ಪ ದೂರ ಇಟ್ಟು ರಾಷ್ಟ್ರೀಯ ಮಾಧ್ಯಮಗಳ ಪತ್ರಕರ್ತರ ಜೊತೆ ಬಹಳ ದಿನವಾಯಿತು ಮಾತನಾಡಿಯೇ ಇಲ್ಲವೆಂದು ಹತ್ತಿರ ಕರೆದು ಮಾತನಾಡತೊಡಗಿದರು.
ಇಂಟರ್‌ವ್ಯೂ ಶುರುಮಾಡಿದ ಒಬ್ಬ ಆಂಗ್ಲ ಮಾಧ್ಯಮದ ಒಬ್ಬ ಯುವ ಪತ್ರಕರ್ತೆ ನೌ ಆಯ್ ಆ್ಯಮ್ ವಿತ್ ಮಿಸ್ಟರ್ ಡಿ ಶಿವ ಎಂದು ಹೇಳುತ್ತಲೇ 5 ಟೇಕ್‌ಗಳನ್ನು ತೆಗೆದುಕೊಂಡರು. ಡಿ ಕೆ ಶಿವಕುಮಾರ್ ಎಂದು ಹೇಳಲು ಆಕೆಗೆ ಸಾಧ್ಯವಾಗಲಿಲ್ಲ. ಕನ್ನಡ ಪತ್ರಕರ್ತರೆಂದರೆ ಲೋಕಲ್, ಇಂಗ್ಲಿಷ್ ಪತ್ರಕರ್ತರು ಎಂದರೆ ಸ್ವಲ್ಪ ಲೆವೆಲ್ ಜಾಸ್ತಿ ಎಂದುಕೊಂಡು ಹೋಗಿದ್ದ ಡಿಕೆಶಿ ಸಾಹೇಬರಿಗೆ ಅಲ್ಲಿ ನಿಂತುಕೊಂಡು ನಗಬೇಕೋ ಎದ್ದು ಹೋಗಬೇಕೋ ಗೊತ್ತಾಗಲಿಲ್ಲ.
(ಪ್ರಶಾಂತ್ ನಾತು ಅವರ ಇಂಡಿಯಾ ಗೇಟ್ ಅಂಕಣದ ಆಯ್ದ ಭಾಗ: ಕನ್ನಡಪ್ರಭ)
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.