ಕೊಪ್ಪಳದಲ್ಲಿ ಏನಾಗ್ತಿದೆ? ಶಾಸಕನ ವಿರುದ್ಧ ಸಂಸದರ ದೂರು

By Web Desk  |  First Published Mar 7, 2019, 11:28 PM IST

ಕೊಪ್ಪಳದಲ್ಲಿನ ರಾಜಕೀಯ ತಿಕ್ಕಾಟ ಪೊಲೀಸ್ ಠಾಣೆ ಮೆಟ್ಟಿಲು ಏರಿದೆ. ಶಾಸಕರ ವಿರುದ್ಧ ಸಂಸದರೇ ದೂರು ನೀಡಿದ್ದಾರೆ.


ಕೊಪ್ಪಳ[ಮಾ. 07]  ಶಾಸಕ ರಾಘವೇಂದ್ರ ಹಿಟ್ನಾಳ್ ವಿರುದ್ಧ  ಸಂಸದ ಕರಡಿ ಸಂಗಣ್ಣ ದೂರು ದಾಖಲಿಸಿದ್ದಾರೆ. ಹುಬ್ಬಳ್ಳಿ ರೈಲ್ವೇ ಇಲಾಖೆಯ ಡಿವೈಎಸ್ಪಿಗೆ ಸಂಗಣ್ಣ ದೂರು ನೀಡಿದ್ದಾರೆ.

ರೈಲ್ವೇ ಮೇಲ್ಸೆತುವೆ ಉದ್ಘಾಟನೆ ಕಾರ್ಯಕ್ರಮ ಉದ್ಘಾಟನೆ ವೇಳೆ ನಡೆದಿದ್ದ ಗಲಾಟೆಯ ಸಂಬಂಧ ದೂರು ದಾಖಲಿಸಿದ್ದಾರೆ. ಇದೇ ತಿಂಗಳು 2 ರಂದು ಭಾಗ್ಯನಗರ ಮೆಲ್ಸೇತುವೆ ಉದ್ಘಾಟ‌ನೆ ಕಾರ್ಯಕ್ರಮ ಇತ್ತು. ಈ ವೇಳೆ ಕಾರ್ಯಕ್ರಮದ ವೇದಿಕೆ ಬಳಿ ಬಿಜೆಪಿ ಧ್ವಜ ಕಟ್ಟಿದ ವಾಹನಗಳಿದ್ದವು.  ಇದೇ ಕಾರಣಕ್ಕೆ ಶಾಸಕ ರಾಘವೇಂದ್ರ ಹಿಟ್ನಾಳ್ ಹಾಗೂ ಆತನ ಬೆಂಬಲಿಗರು ಸಂಸದ ಕರಡಿ ಸಂಗಣ್ಣ ಜೊತೆ ಮಾತಿನ ಚಕಮಕಿ ನಡೆಸಿದ್ದರು.

Latest Videos

undefined

ಕೊಪ್ಪಳ ಟಿಕೆಟ್ ಅಂತಿಮ ಮುದ್ರೆ ಸಿದ್ದು ಕೈನಲ್ಲಿ

ಜೊತೆಗೆ ಕಾರ್ಯಕ್ರಮ ಬಹಿಷ್ಕರಿಸಿ ಹೊರನಡೆದಿದ್ದರು. ಈ ವೇಳೆಯಲ್ಲಿ ಕೆಲವರು ಕಾರ್ಯಕ್ರಮಕ್ಕೆ ಅಡ್ಡಿಪಡಿಸಿದ್ದರು. ಈ ಹಿನ್ನಲೆಯಲ್ಲಿ ಶಾಸಕ ರಾಘವೇಂದ್ರ ಹಿಟ್ನಾಳ್, ಬೆಂಬಲಿಗರಾದ ಕೃಷ್ಣ ಇಟ್ಟಂಗಿ,ಚನ್ನಪ್ಪ ತಟ್ಟಿ,ವೀರುಪಣ್ಣ ಕುಣಕೇರಿ,ರಮೇಶ್ ಹ್ಯಾಟಿ ವಿರುದ್ಧ ದೂರು ನೀಡಲಾಗಿದೆ.  ಶಾಸಕ ರಾಘವೇಂದ್ರ ಹಿಟ್ನಾಳ್ ಹಾಗೂ ಆತನ ಬೆಂಬಲಿಗರ ವಿರುದ್ಧ ಕ್ರಮಕ್ಕೆ ಸಂಸದ ಕರಡಿ ಸಂಗಣ್ಣ ಮನವಿ ಮಾಡಿದ್ದಾರೆ.

click me!