ಕರ್ನಾಟಕಕ್ಕೆ 2 ಕೇಂದ್ರೀಯ ವಿದ್ಯಾಲಯ, ಎಲ್ಲೆಲ್ಲಿ ಸ್ಥಾಪನೆ?

By Web DeskFirst Published Mar 7, 2019, 10:17 PM IST
Highlights

ಕೇಂದ್ರ ಸರಕಾರದಿಂದ ರಾಜ್ಯದ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ ಸಿಕ್ಕಿದೆ. ಹೊಸದಾಗಿ ಎರಡು ಕೇಂದ್ರೀಯ ವಿದ್ಯಾಲಯ ಸ್ಥಾಪನೆಗೆ ಒಪ್ಪಿಗೆ ದೊರೆತಿದೆ.

ನವದೆಹಲಿ[ಮಾ. 07]  ಕರ್ನಾಟಕಕ್ಕೆ ಕೇಂದ್ರ ಸರಕಾರದಿಂದ ಗಿಫ್ಟ್ ಸಿಕ್ಕಿದೆ. ಶಿಕ್ಷಣ ಕ್ಷೇತ್ರಕ್ಕೆ ಮಹತ್ವದ ಕೊಡುಗೆಯೊಂದು ಸಿಕ್ಕಿದೆ.

ಎರಡು ಕೇಂದ್ರೀಯ ವಿದ್ಯಾಲಯಗಳು ರಾಜ್ಯದ ಪಾಲಿಗೆ ಸಿಕ್ಕಿದೆ. ಆರ್ಥಿಕ ವ್ಯವಹಾರಗಳ ಸಚಿವ ಸಂಪುಟ ಸಮಿತಿ ತೀರ್ಮಾನ ತೆಗೆದುಕೊಂಡಿದ್ದು ಬೆಂಗಳೂರಿನ ಯಶವಂತಪುರ, ಬೆಳಗಾವಿಯ ಸದಲಗಾಕ್ಕೆ ಹೊಸ ಕೇಂದ್ರೀಯ ವಿದ್ಯಾಲಯಗಳು ದೊರೆತಿವೆ.

ದೇಶಾದ್ಯಂತ ಒಟ್ಟು 50 ಕೇಂದ್ರೀಯ  ವಿದ್ಯಾಲಯಗಳ ಸ್ಥಾಪನೆಗೆ ಒಪ್ಪಿಗೆ ನೀಡಲಾಗಿದ್ದು ಶಿಕ್ಷಣ ಕ್ಷೇತ್ರದಲ್ಲಿ ಮಹತ್ವದ ಬೆಳವಣಿಗೆ ನಿರೀಕ್ಷೆ ಮಾಡಲಾಗಿದೆ.(ಸಾಂದರ್ಭಿಕ ಚಿತ್ರ] 

click me!