ಕೊಪ್ಪಳ, ವಿಜಯಪುರದ ಕೆಲವು ಗ್ರಾಮಗಳಿಗೆ ಪ್ರವಾಹ ನುಗ್ಗಿ ಸಂಪೂರ್ಣ ಜಲಾವೃತ

By Suvarna Web DeskFirst Published Jul 8, 2017, 8:54 PM IST
Highlights

ನಿನ್ನೆಯಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಕೊಪ್ಪಳ ಮತ್ತು ವಿಜಯಪುರ  ಜಿಲ್ಲೆಯ ಕೆಲವು ಗ್ರಾಮಗಳಿಗೆ ಪ್ರವಾಹದ ನೀರು ನುಗ್ಗಿ ಸಂಪೂರ್ಣ ಜಲಾವೃತವಾಗಿದೆ.

ಕೊಪ್ಪಳ (ಜು.08): ನಿನ್ನೆಯಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಕೊಪ್ಪಳ ಮತ್ತು ವಿಜಯಪುರ  ಜಿಲ್ಲೆಯ ಕೆಲವು ಗ್ರಾಮಗಳಿಗೆ ಪ್ರವಾಹದ ನೀರು ನುಗ್ಗಿ ಸಂಪೂರ್ಣ ಜಲಾವೃತವಾಗಿದೆ.

ವಿಜಯಪುರದಲ್ಲಿ ಸಾಯಬಣ್ಣ ನಾಯಕೋಡಿ (65) ಎನ್ನುವ ರೈತನೊಬ್ಬ ಕೊಚ್ಚಿಕೊಂಡು ಹೋಗಿದ್ದು ಇಂದು ಮೃತದೇಹ ಸಿಕ್ಕಿದೆ. ಕೊಪ್ಪಳ ಜಿಲ್ಲೆಯ ಒಬಲಬಂದಿ ಎನ್ನುವ ಗ್ರಾಮದಲ್ಲಿ ಹೊಲದಲ್ಲಿ ಕೆಲಸ ಮಾಡುತ್ತಿದ್ದ 3 ಮಹಿಳೆಯರಿಗೆ ಸಿಡಿಲು ಬಡಿದಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Latest Videos

ನಿನ್ನೆಯಿಂದ ಭಾರೀ ಮಳೆ ಸುರಿಯುತ್ತಿದ್ದು ಕೊಪ್ಪಳದ ಬಿಕನಳ್ಳಿ, ಬಿಸರಳ್ಳಿ ಮತ್ತು ಹಿರೆಸಿಂಧೋಗಿ ಊರುಗಳು ಜಲಾವೃತಗೊಂಡಿದೆ. ಅರ್ಧ ಬೀಸರಹಳ್ಳಿ ಮುಳುಗಿ ಹೋಗಿದ್ದು ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ.

ಸಿರಗುಪ್ಪ, ಬಳ್ಳಾರಿಯಲ್ಲೂ ಕೂಡಾ  ಭಾರೀ ಮಳೆ ಸುರಿದಿದೆ.  ಉಡುಪಿಯಲ್ಲಿ ಗಾಳಿ ಸಮೇತ ಜೋರು ಮಳೆ ಸುರಿದಿದ್ದು ಉದ್ಯಾವರದಲ್ಲಿ ಮನೆಯ ಗೋಡೆಯೊಂದು ಕುಸಿದಿದೆ.  

ಉತ್ತರ ಕನ್ನಡ, ಕೊಡಗು ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲಿ ತಕ್ಕಮಟ್ಟಿಗೆ ಮಳೆಯಾಗಿದೆ.  

click me!