ಅನುಮತಿ ಇಲ್ಲದೆ ಹೂವು ಕಿತ್ತಿದ್ದಕ್ಕೆ ಅತ್ತೆ ಥಳಿಸಿದ ಸೊಸೆ..!

Published : Jun 02, 2018, 11:46 AM IST
ಅನುಮತಿ ಇಲ್ಲದೆ ಹೂವು ಕಿತ್ತಿದ್ದಕ್ಕೆ ಅತ್ತೆ ಥಳಿಸಿದ ಸೊಸೆ..!

ಸಾರಾಂಶ

ತನ್ನ ಅನುಮತಿ ಇಲ್ಲದೆ ಹೂವು ಕಿತ್ತಿದ್ದಾರೆ ಎಂಬ ಕ್ಷುಲ್ಲಕ ಕಾರಣಕ್ಕೆ ಮಹಿಳೆಯೊಬ್ಬರು ತನ್ನ ವಯೋವೃದ್ಧ ಅತ್ತೆಯನ್ನು ಅಮಾನವೀಯವಾಗಿ ಥಳಿಸಿರುವ ಘಟನೆ ದಕ್ಷಿಣ ಕೊಲ್ಕತ್ತಾದ ಗರಿಯಾ ಪ್ರದೇಶದಲ್ಲಿ ನಡೆದಿದೆ.

ಕೊಲ್ಕತ್ತಾ(ಜೂ.2): ತನ್ನ ಅನುಮತಿ ಇಲ್ಲದೆ ಹೂವು ಕಿತ್ತಿದ್ದಾರೆ ಎಂಬ ಕ್ಷುಲ್ಲಕ ಕಾರಣಕ್ಕೆ ಮಹಿಳೆಯೊಬ್ಬರು ತನ್ನ ವಯೋವೃದ್ಧ ಅತ್ತೆಯನ್ನು ಅಮಾನವೀಯವಾಗಿ ಥಳಿಸಿರುವ ಘಟನೆ ದಕ್ಷಿಣ ಕೊಲ್ಕತ್ತಾದ ಗರಿಯಾ ಪ್ರದೇಶದಲ್ಲಿ ನಡೆದಿದೆ. 

ಸ್ವಪ್ನಾಪಾಲ್‌ ಎಂಬಾಕೆಯೇ ಹಲ್ಲೆ ನಡೆಸಿದ ಮಹಿಳೆ. 75 ವರ್ಷದ ಯಶೋದಾಗೆ ಮರೆವಿನ ಕಾಯಿಲೆ ಇದ್ದು, ಇತ್ತೀಚೆಗೆ ಪತಿ ನಿಧನ ಹೊಂದಿದ ಬಳಿಕ ಪುತ್ರನ ಮನೆಗೆ ಆಗಮಿಸಿದ್ದವರು. ಈ ವೇಳೆ ಗಿಡದಿಂದ ತನ್ನ ಅನುಮತಿ ಕೇಳದೆ ಹೂವು ಕಿತ್ತಿದ್ದಾರೆ ಎಂದು ಸೊಸೆ ಸ್ವಪ್ನಾ ಅತ್ತೆಗೆ ಮನಬಂದಂತೆ ಥಳಿಸಿದ್ದಾರೆ.

ಈ ಘಟನೆಯನ್ನು ನೆರೆ ಮನೆಯವರೊಬ್ಬರು ವಿಡಿಯೋ ಮಾಡಿದ್ದು, ಸಾಮಾಜಿಕ ಮಾಧ್ಯಮಗಳಲ್ಲಿ ಆ ವಿಡಿಯೋ ವೈರಲ್‌ ಆಗುತ್ತಿದ್ದಂತೇ ಬನ್ಸ್‌ದ್ರೋನಿ ವ್ಯಾಪ್ತಿಯ ಪೊಲೀಸರು ಸ್ವಪ್ನಾ ಪಾಲ್‌ ಅವರನ್ನು ಪತ್ತೆ ಹಚ್ಚಿ ಬಂಧಿಸಿದ್ದಾರೆ. ಬಳಿಕ ಜಾಮೀನಿನ ಆಧಾರದ ಮೇಲೆ ಬಿಡುಗಡೆ ಮಾಡಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ತುಂಗಭದ್ರಾ ಜಲಾಶಯದ ಕ್ರಸ್ಟ್‌ಡ್ ಗೇಟ್‌ ಅಳವಡಿಕೆ ಹಿನ್ನೆಲೆ, 6 ತಿಂಗಳು ಕಾಲುವೆಗಳಿಗೆ ನೀರು ಸ್ಥಗಿತ!
KPTCL ಕೆಲಸ, ಶನಿವಾರ ಬೆಂಗಳೂರಲ್ಲಿ ಕರೆಂಟ್‌ ಇರಲ್ಲ..!