
ವಾಷಿಂಗ್ಟನ್(ಜೂ.2): ಪರಗ್ರಹ ಜೀವಿಗಳ ಕುರಿತು ಮಾನವ ಸಂಶೋಧನೆ ನಡೆಸುತ್ತಿರುವುದ ಇಂದು ನಿನ್ನೆಯ ವಿಷಯವಲ್ಲ. ರಾತ್ರಿ ಆಗಸದತ್ತ ದೃಷ್ಟಿ ನೆಟ್ಟು ದಿಗಂತದ ಯಾವುದಾದರೊಂದು ಮೂಲೆಯಲ್ಲಿ ನಮ್ಮಂತಹ ಜೀವಿಗಳು ನೆಲೆಸಿರಬಹುದಾದ ಗ್ರಹದ ಹುಡುಕಾಟದಲ್ಲಿ ನಿರಂತರವಾಗಿ ಪ್ರಯತ್ನಿಸುತ್ತಲೇ ಇದ್ದಾನೆ.
ಈ ವಿಷಯದಲ್ಲಿ ಹಲವು ಹೆಜ್ಜೆ ಮುಂದೆ ಹೋಗಿರುವ ನಾಸಾ, ಏಲಿಯನ್ ಜಗತ್ತಿನ ಹುಡುಕಾಟಕ್ಕೆ ಆಧುನಿಕ ತಂತ್ರಜ್ಞಾನದ ಸಹಾಯದಿಂದ ಹಗಲಿರುಳೂ ಶ್ರಮಿಸುತ್ತಲೇ ಇದೆ. ಆದರೆ ಪರಗ್ರಹ ಜೀವಿಗಳ ಅಸ್ತಿತ್ವದ ಪ್ರಶ್ನೆಗೆ ಉತ್ತರ ಕಂಡುಹಿಡಿಯಲು ನಾಸಾ ಇದೀಗ ಪೆಸಿಫಿಕ್ ಮಹಾಸಾಗಾರದ ಅಂತರಾಳಕ್ಕೆ ಧುಮುಕಲಿದೆ.
ಹೌದು, ಪೆಸಿಫಿಕ್ ಮಹಾಸಾಗರದ ೩ ಸಾವಿರ ಅಡಿ ಆಳದಲ್ಲಿ ಇರುವ ಜೀವಂತ ಜ್ವಾಲಾಮುಖಿಯ ಅಧ್ಯಯನ ನಡೆಸಲು ನಾಸಾ ಹೊಸದೊಂದು ಯಂತ್ರವನ್ನು ಕಳಿಸುತ್ತಿದೆ. ಹವಾಯಿ ಬಿಗ್ ಐಲ್ಯಾಂಡ್ ಸಮುದ್ರದ ಆಳದಲ್ಲಿ ನಾಸಾ ಈ ಸಂಶೋಧನೆ ಕೈಗೊಳ್ಳಲಿದೆ. ಭೂಮಿಯಲ್ಲಿ ಜೀವಿಗಳ ಉಗಮಕ್ಕೆ ಜ್ವಾಲಾಮುಖಿಗಳು ಕೂಡ ತಮ್ಮ ಕೊಡುಗೆ ನೀಡಿದ್ದು, ಸಾಗರಾಳದಲ್ಲಿ ಮೊದಲ ಜೀವಿಗಳ ಉಗಮದ ಸಂಭರ್ಭದಲ್ಲಿ ಜ್ವಾಲಾಮುಖಿಗಳ ಪಾತ್ರದ ಕುರಿತು ಸಂಶೋಧನೆ ನಡೆಸಲಿದೆ.
ಇನ್ನು ಪೆಸಿಫಿಕ್ ಸಾಗರಾಳದಲ್ಲಿ ಇರುವ ಈ ಜೀವಂತ ಜ್ವಾಲಾಮುಖಿಯ ಹಾಗೆ ಶನಿಗ್ರಹದ ಉಪಗ್ರಹ ಯುರೋಪಾದಲ್ಲೂ ಕೂಡ ಸಾಗರಾಳದಲ್ಲಿ ಜೀವಂತ ಜ್ವಾಲಾಮುಖಿ ಇದ್ದು, ಅಲ್ಲಿಯೂ ಜೀವಿಗಳ ಉಗಮಕ್ಕೆ ಸಹಾಯ ಮಾಡಿರಬಹುದಾದ ಸಾಧ್ಯತೆ ಕುರಿತು ನಾಸಾ ಅಧ್ಯಯನ ನಡೆಸಲಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.